(1) ಪ್ರತಿಯೊಂದು ಗ್ರಾಮ ಪಂಚಾಯತಿಗಳು, ತಾಲ್ಲೂಕು ಪಂಚಾಯತಿಗಳು ಹಾಗೂ ಜಿಲ್ಲಾ ಪಂಚಾಯತಿಗಳು ತಮ್ಮ ಹಂತದಲ್ಲಿನ ಆಡಳಿತ ವ್ಯಾಪ್ತಿಯ ಪ್ರದೇಶದೊಳಗೆ ಪ್ರತ್ಯೇಕವಾಗಿ ಒಂದು ಜೀವವೈವಿಧ್ಯ ನಿರ್ವಹಣಾ ಸಮಿತಿಯನ್ನು ರಚಿಸತಕ್ಕದ್ದು.
(2) (1)ನೇ ಉಪ ನಿಯಮದಡಿ ರಚಿಸಲಾದಂತಹ ಸಮಿತಿಗೆ ಸಂಬಂಧಪಟ್ಟ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳು ತಮ್ಮ ವ್ಯಾಪ್ತಿಯಲ್ಲಿನ ಅರಣ್ಯೀಕರಣ, ಸಸ್ಯ ಸಂರಕ್ಷಣೆ, ಜಲ ಸಂರಕ್ಷಣೆ ಹಾಗೂ ಜೀವವೈವಿದ್ಯಗಳ ಇತ್ಯಾದಿಗಳ ಸಂರಕ್ಷಣೆಯಲ್ಲಿ ಆಸಕ್ತಿವುಳ್ಳವರನ್ನು ಅಥವಾ ಇಂಥಹ ಸಂಘ ಸಂಸ್ಥೆಗಳ ಒಟ್ಟು ಏಳು ಜನ ಪ್ರತಿನಿಧಿಗಳನ್ನು ಸಮಿತಿಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿಕೊಳ್ಳಬಹುದು. ಇಂತಹ ಸದಸ್ಯರುಗಳಲ್ಲಿ 1/3 ಕ್ಕಿಂತ ಕಡಿಮೆ ಇಲ್ಲದಷ್ಟು ಮಹಿಳೆಯರು ಇರತಕ್ಕದ್ದು ಮತ್ತು ಶೇಖಡಾ 18 ಕ್ಕಿಂತ ಕಡಿಮೆ ಇಲ್ಲದಷ್ಟು ಸದಸ್ಯರು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳಿಗೆ ಸೇರಿದವರಾಗಿರತಕ್ಕದ್ದು.
(3) ಗ್ರಾಮ ಪಂಚಾಯತಿಗಳ, ತಾಲ್ಲೂಕು ಪಂಚಾಯತಿಗಳ ಹಾಗೂ ಜಿಲ್ಲಾ ಪಂಚಾಯತಿಗಳ ಅಧ್ಯಕ್ಷರುಗಳು ತಮ್ಮ ವ್ಯಾಪ್ತಿಯ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿರತಕ್ಕದ್ದು.
(4) ವಿಧಾನ ಸಭೆಯ/ವಿಧಾನ ಪರಿಷತ್ತಿನ/ಸಂಸತ್ತಿನ ಲೋಕಸಭೆ/ರಾಜ್ಯ ಸಭೆ ಹಾಗೂ ಸ್ಥಳೀಯ ಸದಸ್ಯರುಗಳು ತಾಲ್ಲೂಕು ಮತ್ತು ಜಿಲ್ಲಾ ಜೀವ ವೈವಿಧ್ಯ ನಿರ್ವಹಣಾ ಸಮಿತಿಗಳಿಗೆ ವಿಶೇಷ ಆಹ್ವಾನಿತರಾಗಿರತಕ್ಕದ್ದು.
(5) ಈ ಕೆಳಗಿನ ಕೋಷ್ಟಕದ ಅಂಕಣ (3) ರಲ್ಲಿ ಹೇಳಲಾದ ಅಧಿಕಾರಿಗಳು ಅಂಕಣ (2) ರಲ್ಲಿ ಹೇಳಲಾದ ಆಯಾ ಜೀವವೈವಿಧ್ಯ ನಿರ್ವಹಣಾ ಸಮಿತಿಗಳ ಸದಸ್ಯ ಕಾರ್ಯದರ್ಶಿಗಳಾಗಿರತಕ್ಕದ್ದು.-
ಕೋಷ್ಟಕ
| ಕ್ರ. ಸಂ | ಜೀವವೈವಿಧ್ಯ ನಿರ್ವಹಣಾ ಸಮಿತಿ | ಅಧಿಕಾರಿಗಳು / ಸದಸ್ಯ ಕಾರ್ಯದರ್ಶಿ |
|---|---|---|
| (1) | (2) | (3) |
| 1 | ಗ್ರಾಮ ಪಂಚಾಯಿತಿಯ ಜೀವವೈವಿಧ್ಯ ನಿರ್ವಹಣಾ ಸಮಿತಿ | ಗ್ರಾಮ ಪಂಚಾಯಿತಿಯ – ಪಂಚಾಯಿತಿ ಅಭಿವೃದ್ದಿ ಅಧಿಕಾರಿ/ ಕಾರ್ಯದರ್ಶಿ ಗ್ರೇಡ್-1 |
| 2 | ತಾಲ್ಲೂಕು ಪಂಚಾಯಿತಿಯ ಜೀವವೈವಿಧ್ಯ ನಿರ್ವಹಣಾ ಸಮಿತಿ | ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಗಳು |
| 3 | ಜಿಲ್ಲಾ ಪಂಚಾಯಿತಿಯ ಜೀವವೈವಿಧ್ಯ ನಿರ್ವಹಣಾ ಸಮಿತಿ | ಜಿಲ್ಲಾ ಪಂಚಾಯಿತಿಯ- ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು |
(7) ಸಮಿತಿಯ ಅಧಿಕಾರಾವಧಿ ಐದು ವರ್ಷಗಳಾಗಿರುತ್ತದೆ. ಸಂಬಂಧಪಟ್ಟ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಯ ಅಧ್ಯಕ್ಷರ ಅವಧಿಯು ಮುಗಿಯುವುದರೊಡನೆ ಸಮಿತಿಯ ಅಧ್ಯಕ್ಷರ ಅಧಿಕಾರಾವಧಿಯು ಅಂತ್ಯಗೊಳ್ಳುತ್ತದೆ. ಹೊಸದಾಗಿ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಯ ಅಧ್ಯಕ್ಷರು ಆಯ್ಕೆಯಾದರೆ ಅವರು ಸಮಿತಿಯ ಅಧ್ಯಕ್ಷರಾಗುತ್ತಾರೆ. ಹೊಸ ಸಮಿತಿಯನ್ನು ರಚಿಸುವವರೆಗೆ ಅಸ್ತಿತ್ವದಲ್ಲಿದ್ದ ಜೀವ ವೈವಿಧ್ಯ ನಿರ್ವಹಣಾ ಸಮಿತಿಯು ಕಾರ್ಯನಿರ್ವಹಿಸತಕ್ಕದ್ದು.
(8) ಸಮಿತಿಗಳು ವಾರ್ಷಿಕ ಕಾರ್ಯನಿರ್ವಹಣೆಗಾಗಿ ವೆಚ್ಚಗಳನ್ನು ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿಗಳ ಸಂಪನ್ಮೂಲಗಳಿಂದ ಭರಿಸತಕ್ಕದ್ದು. ಸಮಿತಿಯ ಕಾರ್ಯನಿರ್ವಹಣೆಯನ್ನು ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತಿಗಳ ಸಿಬ್ಬಂದಿಗಳಿಂದ ನಿರ್ವಹಿಸಬೇಕು.
(9) ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳು, ತಾಲ್ಲೂಕು ಪಂಚಾಯಿತಿಗಳು ಮತ್ತು ಜಿಲ್ಲಾ ಪಂಚಾಯಿತಿಗಳು ತಮ್ಮ ಹಂತದಲ್ಲಿನ ಸಮಿತಿಗಳ ಅನುದಾನ ನಿರ್ವಹಣೆಗಾಗಿ ಭಾರತೀಯ ರಿಸರ್ವ ಬ್ಯಾಂಕ್ನಿಂದ ಅನುಮೋದಿಸಲ್ಪಟ್ಟ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಜೀವವೈವಿಧ್ಯ ನಿರ್ವಹಣಾ ಸಮಿತಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಹೆಸರಿನಲ್ಲಿ ಜಂಟಿ ಖಾತೆಯನ್ನು ತೆರೆಯುವುದು.
(10) ಸಮಿತಿಯ ಲೆಕ್ಕಪತ್ರಗಳನ್ನು ಜೀವ ವೈವಿಧ್ಯ ಅಧಿನಿಯಮ, 2002 (2003ರ ಕೇಂದ್ರ ಅಧಿನಿಯಮ:18)ರ ಪ್ರಕರಣ 46 ರನ್ವಯ ನಿರ್ವಹಿಸುವುದು.
- ಸಮಿತಿಗಳ ಪ್ರಕಾರ್ಯಗಳು.-
(1) ಸಮಿತಿಗಳು ಸ್ಥಳೀಯ ಜನರೊಂದಿಗೆ ಸಮಾಲೋಚಿಸಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಳೆದಿರುವ ಸಸ್ಯ ಸಂಪತ್ತು ಹಾಗೂ ಪಂಚಾಯಿತಿ ವ್ಯಾಪ್ತಿ ಪ್ರದೇಶದಲ್ಲಿ ಕಂಡುಬರುವ ಎಲ್ಲಾ ಪ್ರಾಣಿ ಸಂಪತ್ತುಗಳು ಮತ್ತು ಅವುಗಳ ಕುರಿತಾದ ಪಾರಂಪರಿಕ ಜ್ಞಾನದ ಜೊತೆಗೆ ಐತಿಹಾಸಿಕ ಸ್ಥಳ, ನದಿ, ಕೆರೆ, ಗುಡ್ಡ, ಕೃಷಿ ವೈವಿಧ್ಯತೆ, ಸಾಕುಪ್ರಾಣಿ ವೈವಿಧ್ಯತೆ ಇತ್ಯಾದಿಗಳನ್ನು ಜನತಾ ಜೀವವೈವಿಧ್ಯ ದಾಖಲಾತಿ ಪುಸ್ತಕದಲ್ಲಿ ದಾಖಲಿಸುವುದು.
(2) ಜೀವವೈವಿಧ್ಯ ವಿವಿಧ ಪ್ರಬೇಧಗಳ ಬಗ್ಗೆ ಸಮಗ್ರ ವೈಜ್ಞಾನಿಕ ಮತ್ತು ಐತಿಹಾಸಿಕ ಹಿನ್ನೆಲೆಯ ಬಗ್ಗೆ ಹಾಗೂ ಸಾಂಪ್ರದಾಯಿಕ ಜ್ಞಾನದ ಬಗ್ಗೆ ಸಮಿತಿಯು ಸ್ಥಳೀಯ ಜನರಿಗೆ ಮಾರ್ಗದರ್ಶನ ನೀಡಬೇಕು.
(3) ಜನತಾ ಜೀವವೈವಿಧ್ಯ ದಾಖಲಾತಿಗಳ ಮಾಹಿತಿಯನ್ನು ವಿದ್ಯುನ್ಮಾನ ಮಾಹಿತಿ ಜಾಲಕ್ಕೆ ಅಳವಡಿಸುವ ವ್ಯವಸ್ಥೆಯನ್ನು ಜೀವವೈವಿಧ್ಯ ಮಂಡಳಿಯ ಸಲಹೆಯಂತೆ ಮಾಡತಕ್ಕದ್ದು.
(4) ಜನತಾ ಜೀವವೈವಿಧ್ಯ ದಾಖಲಾತಿಯು, ಸ್ಥಳೀಯ ಜೈವಿಕ ಸಂಪನ್ಮೂಲಗಳ ಲಭ್ಯತೆ ಮತ್ತು ಜ್ಞಾನ, ಅವುಗಳ ಔಷಧೀಯ ಗುಣ ಹಾಗೂ ಜೈವಿಕ ಸಂಪನ್ಮೂಲಗಳನ್ನು ಬಳಸುವ ಸ್ಥಳೀಯ ವೈದ್ಯರು ಮತ್ತು ವೃತ್ತಿ ನಿರತರ ಬಗ್ಗೆ ಅಂಕಿ-ಅಂಶಗಳನ್ನು ಒಳಗೊಂಡಿರಬೇಕು.
(5) ಜನತಾ ಜೀವವೈವಿಧ್ಯ ದಾಖಲಾತಿ ತಯಾರಿಕೆಯಲ್ಲಿ ಜೀವ ವೈವಿಧ್ಯ ನಿರ್ವಹಣ ಸಮಿತಿಗೆ ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರ ಹಾಗೂ ರಾಜ್ಯ ಜೀವ ವೈವಿಧ್ಯ ಮಂಡಳಿ ಮಾರ್ಗದರ್ಶನ ಮತ್ತು ತಾಂತ್ರಿಕ ಬೆಂಬಲ ನೀಡತಕ್ಕದ್ದು.
(6) ಜನತಾ ಜೀವವೈವಿಧ್ಯ ದಾಖಲಾತಿ ನಮೂನೆಗಳಲ್ಲಿ ಜೀವವೈವಿಧ್ಯ ವಿವರಗಳು, ವಿದ್ಯುನ್ಮಾನ ದತ್ತಾಂಶ ಸಂಗ್ರಹದ ಬಗ್ಗೆ ಪೂರ್ಣ ಮಾಹಿತಿಗಳು ಲಭ್ಯವಿರುವಂತೆ ಕ್ರಮ ಕೈಗೊಳ್ಳತಕ್ಕದ್ದು.
(7) ಜನತಾ ಜೀವವೈವಿಧ್ಯ ದಾಖಲಾತಿಗಳ ನಿರ್ವಹಣೆ ಮತ್ತು ಜೀವವೈವಿಧ್ಯಗಳಿಗೆ ಮಾನ್ಯತೆ ನೀಡುವ ಅಧಿಕಾರವು ಸಮಿತಿಯದ್ದಾಗಿರುತ್ತದೆ.
(8) ಸಮಿತಿಯು ಸ್ಥಳೀಯ ಸಂಪನ್ಮೂಲ ಮತ್ತು ಪಾರಂಪರಿಕ ಜ್ಞಾನಗಳ ಬಳಕೆಗೆ ನೀಡಲಾದ ಅನುಮತಿ, ವಿಧಿಸಲಾದ ಶುಲ್ಕ ಸಂಗ್ರಹದ ವಿವರ ಮತ್ತು ಸಂಗ್ರಹವಾಗಿರುವ ಲಾಭ ಹಾಗೂ ಅದರ ಹಂಚುವಿಕೆಯ ವಿಧಿ ವಿಧಾನದ ವಿವರಗಳನ್ನು ನಿರ್ವಹಣೆ ಮಾಡಲು ಸಹ ಪ್ರತ್ಯೇಕ ದಾಖಲಾತಿ ಪುಸ್ತಕವನ್ನು ನಿರ್ವಹಿಸತಕ್ಕದ್ದು.
(9) ಸಣ್ಣ ಪರಿಣಾಮಕಾರಿಯಾದ ಸಮಾಲೋಚನೆಗೆ ಅನುವಾಗುವಂತೆ, ಸಮಿತಿಯ ರಚನೆ ಪ್ರಕ್ರಿಯೆಯು ಬುಡಕಟ್ಟು ಗುಂಪುಗಳು ಮತ್ತು ಇತರ ಸಮುದಾಯಗಳನ್ನು ಒಳಗೊಂಡಂತೆ ಪಂಚಾಯಿತಿಯ ಎಲ್ಲಾ ಪಾಲುದಾರರನ್ನು ಒಳಗೊಂಡಿರುವುದು. ಇದರಿಂದ ರಾಜ್ಯ ಮತ್ತು ಸ್ಥಳೀಯ ಪರಿಸ್ಥಿತಿಗಳ ಅವಶ್ಯಕತೆಗಳನ್ನು ಪೂರೈಸಲು ಸಹಕಾರಿಯಾಗುತ್ತದೆ.
(10) ಸಮಿತಿಯ ರಚನೆಯಲ್ಲಿ ಸಂಸ್ಥೆಗಳು ಅಥವಾ ನಾಗರಿಕ ಸಮಾಜ ಸಂಸ್ಥೆಗಳು ಅಥವಾ ತಾಂತ್ರಿಕ ಸಲಹಾ ಗುಂಪುಗಳು ಮಧ್ಯಸ್ಥಿಕೆ ವಹಿಸಬಹುದು. ಜೀವವೈವಿಧ್ಯತೆಯಿಂದ ಸಮೃದ್ಧವಾಗಿರುವ ಜನಪ್ರಿಯ ಮತ್ತು ಬೆಂಬಲವಿರುವ ಸ್ಥಳಗಳನ್ನು ಗುರುತಿಸಬೇಕು. ತಾಂತ್ರಿಕ ಸಲಹಾ ಗುಂಪುಗಳು ಸಮಿತಿಗಳ ಗುರುತಿಸುವಿಕೆ, ರಚನೆ ಮತ್ತು ಕಾರ್ಯನಿರ್ವಹಣೆಯಲ್ಲಿ ಸಾಧ್ಯವಿರುವ ಎಲ್ಲಾ ಸಹಾಯವನ್ನು ಮಾಡಬಹುದು.
(11) ಜೈವಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಅದರ ಸುಸ್ಥಿರ ಬಳಕೆ.
(12) ಸ್ಥಳೀಯ ಜೀವವೈವಿಧ್ಯತೆಯ ಪುನರುಜ್ಜೀವನ ಹಾಗೂ ಪರಿಸರ ಮರುಸ್ಥಾಪನೆ.
(13) ಜೀವವೈವಿಧ್ಯಕ್ಕೆ ಸಂಬಂಧಿಸಿದ ಬೌದ್ಧಿಕ ಆಸ್ತಿ ಹಕ್ಕುಗಳು, ಸಾಂಪ್ರದಾಯಿಕ ಜ್ಞಾನ ಮತ್ತು ಸ್ಥಳೀಯ ಜೀವವೈವಿಧ್ಯತೆ ವಿಷಯಗಳಲ್ಲಿ ರಾಜ್ಯ ಜೀವವೈವಿಧ್ಯ ಮಂಡಳಿ ಮತ್ತು ರಾಷ್ಟ್ರೀಯ ಜೀವವೈವಿಧ್ಯ ಪ್ರಾಧಿಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡುವುದು.
(14) ಸಮಿತಿಯು ತನ್ನ ವ್ಯಾಪ್ತಿ ಪ್ರದೇಶದಲ್ಲಿ ಬರುವ ಯಾವುದಾದರೂ ವಿಶೇಷವಾದ ಜೀವವೈವಿಧ್ಯತೆಯ ತಾಣವಿದ್ದಲ್ಲಿ (ಕೆರೆ, ಔಷಧಿವನ ಇತ್ಯಾದಿ) ಅದನ್ನು ಪಾರಂಪರಿಕ ತಾಣವೆಂದು ಹಾಗೂ ಅತ್ಯಂತ ಹಳೇಯ ವೃಕ್ಷಗಳಿದ್ದಲ್ಲಿ ಪಾರಂಪರಿಕ ವೃಕ್ಷವೆಂದು ಗುರುತಿಸುವುದು ಹಾಗೂ ಅವುಗಳ ಸಂರಕ್ಷಣೆ ಮಾಡುವುದು. ಸದರಿ ಮಾಹಿತಿಯನ್ನು ನೋಡಲ್ ಅಧಿಕಾರಿ ಹಾಗೂ ಮಂಡಳಿಯೊಂದಿಗೆ ಹಂಚಿಕೊಳ್ಳುವುದು,
(15) ಜೈವಿಕ ಸಂಪನ್ಮೂಲಗಳ ಅಥವಾ ಸಂಬಂಧಿತ ಸಾಂಪ್ರದಾಯಿಕ ಜ್ಞಾನಗಳನ್ನು ವಾಣಿಜ್ಯ ಮತ್ತು ಸಂಶೋಧನಾ ಉದ್ದೇಶಕ್ಕಾಗಿ ಬಳಕೆಗಳ ನಿಯಂತ್ರಣ.
(16) ಜೈವಿಕ ಸಂಪನ್ಮೂಲಗಳ ವಾಣಿಜ್ಯ ಬಳಕೆಯಿಂದ ಬರಬಹುದಾದ ಲಾಭಗಳ ನ್ಯಾಯಸಮ್ಮತ ಹಂಚಿಕೆ.
(17) ಜೀವವೈವಿಧ್ಯತೆಯ ಬಗ್ಗೆ ಜಾಗೃತಿ ಮತ್ತು ಅರಿವು ಮೂಡಿಸುವಿಕೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.
(18) ಜೈವಿಕ ಮತ್ತು ಸಾಂಸ್ಕೃತಿಕ ನಿಯಮಾವಳಿಗಳ ದಾಖಲಿಸುವಿಕೆ ಕಾರ್ಯವಿಧಾನವನ್ನು ಸಕ್ರೀಯಗೊಳಿಸುವುದು.
(19) ಜನತಾ ಜೀವವೈವಿಧ್ಯ ದಾಖಲಾತಿಯಲ್ಲಿ ದಾಖಲಾದ ಸಾಂಪ್ರದಾಯಿಕ ಜ್ಞಾನಗಳ ಸಂರಕ್ಷಣೆ ಮಾಡುವುದು.
(20) ಜೀವವೈವಿಧ್ಯ ನಿರ್ವಹಣಾ ಸಮಿತಿಯು ವಾರ್ಷಿಕ ಕ್ರಿಯಾ ಯೋಜನೆ ಹಾಗೂ ವಾರ್ಷಿಕ ಆಡಳಿತ ವರದಿಯನ್ನು ತಯಾರಿಸುವುದು.
(21) ಸಮಿತಿಯು ಶುಲ್ಕ ಸಂಗ್ರಹಣೆ, ಜೈವಿಕ ಸಂಪನ್ಮೂಲಗಳ ಬಳಕೆ, ಲಾಭ ಹಂಚಿಕೆ, ಜೀವವೈವಿಧ್ಯ ಪಾರಂಪರಿಕ ತಾಣ, ಪವಿತ್ರವನ, ಕೊಳಗಳ ಇತ್ಯಾದಿಗಳ ಬಗ್ಗೆ ರಾಜ್ಯ ಜೀವವೈವಿಧ್ಯ ಮಂಡಳಿ ನೀಡುವ ತಾಂತ್ರಿಕ ಬೆಂಬಲ ಹಾಗೂ ಮಾರ್ಗದರ್ಶನ ಪಡೆಯಬಹುದಾಗಿದೆ.