(1) ಸಮಿತಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಬೇಕು. ವಾರ್ಷಿಕವಾಗಿ ಕನಿಷ್ಠ ನಾಲ್ಕು ಸಭೆಗಳನ್ನು ಹಾಗೂ ಅವಶ್ಯವಿದ್ದಾಗ ಹೆಚ್ಚಿನ ಸಭೆಗಳನ್ನು ನಡೆಸಬಹುದು.
(2) ಸಮಿತಿಗಳ ಅಧ್ಯಕ್ಷತೆಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳ ಅಧ್ಯಕ್ಷರು ವಹಿಸಬೇಕು. ಇವರ ಅನುಪಸ್ಥಿತಿಯಲ್ಲಿ ಸದಸ್ಯರುಗಳ ಪೈಕಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಗುರುತಿಸಿ, ಅವರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಬಹುದು.
(3) ಸಮಿತಿಯ ಸಭೆಯ ಕೋರಂಗೆ ಅಧ್ಯಕ್ಷ ಹಾಗೂ ಸಂಬಂಧಪಟ್ಟ ಸಮಿತಿಯ ಸದಸ್ಯ ಕಾರ್ಯದರ್ಶಿ ಒಳಗೊಂಡಂತೆ ಕನಿಷ್ಠ ಐದು ಜನರು ಹಾಜರಿರಬೇಕು. ಸಭೆಯಲ್ಲಿ ಹಾಜರಾಗುವ ಇತರ ಅಧಿಕಾರಿ ಸದಸ್ಯರುಗಳು ಕೋರಂಗೆ ಒಳಪಡುವುದಿಲ್ಲ.
(4) ಸಮಿತಿ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಸೂಚಿ ಪಟ್ಟಿಯನ್ನು ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳು ಚರ್ಚಿಸಿ ಸಿದ್ಧಪಡಿಸಬೇಕು. ಸಮಿತಿಯ ಪ್ರಕಾರ್ಯಗಳಲ್ಲಿನ ವಿಷಯಗಳನ್ನು ಸ್ಥಳೀಯ ಸನ್ನಿವೇಶಕ್ಕನುಗುಣವಾಗಿ ಅನುಷ್ಠಾನಗೊಳಿಸಬಹುದಾದ ಪ್ರಕಾರ್ಯಗಳನ್ನು ಆದ್ಯತೆಯ ಮೇಲೆ ಪರಿಗಣಿಸಬೇಕು.
(5) ಜೀವವೈವಿಧ್ಯ ನಿರ್ವಹಣಾ ಸಮಿತಿಯ ಸಭೆಯ ನಡವಳಿಯನ್ನು ಜಿಲ್ಲಾ ನೋಡಲ್ ಅಧಿಕಾರಿಯವರಿಗೆ ಕಳುಹಿಸುವುದು.
(6) ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯಿತಿಗಳ ಸಮಿತಿಯು ವಾರ್ಷಿಕ ಹಣ ಸಂಗ್ರಹ, ಬಳಕೆ ಬಗ್ಗೆ ರಾಜ್ಯ ಜೀವವೈವಿಧ್ಯ ಮಂಡಳಿ ನೀಡಿದ ಮಾರ್ಗಸೂಚಿಗಳನ್ನು ಅನುಸರಿಸಬೇಕು.
(7) ಸಮಿತಿಯು ತನ್ನ ವಾರ್ಷಿಕ ವರದಿ ಮತ್ತು ಲೆಕ್ಕ ಪರಿಶೋಧನಾ ವರದಿಯನ್ನು ಜೀವ ವೈವಿಧ್ಯ ಅಧಿನಿಯಮ, 2002 (2003ರ ಕೇಂದ್ರ ಅಧಿನಿಯಮ:18)ರ ಪ್ರಕರಣ 47 ರನ್ವಯ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದು.
(8) ಜೀವವೈವಿಧ್ಯ ನಿರ್ವಹಣಾ ಸಮಿತಿಗಳ ಅಧಿಕಾರಿ ವ್ಯಾಪ್ತಿ ಮತ್ತು ಕಾರ್ಯಚಟುವಟಿಕೆಗಳಿಗೆ ಸಂಬಂಧಪಟ್ಟಂತೆ ಕರ್ನಾಟಕ ಜೈವಿಕವೈವಿಧ್ಯ ನಿಯಮಗಳು, 2005 ಅನ್ನು ಪರಿಗಣಿಸುವುದು ಅಥವಾ ಕರ್ನಾಟಕ ರಾಜ್ಯ ಜೀವವೈವಿಧ್ಯ ಮಂಡಳಿಯ ಸಲಹೆಯನ್ನು ಪಡೆಯುವುದು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ
(ಚೇತನ ಎಂ.)
ಸರ್ಕಾರದ ಅಧೀನ ಕಾರ್ಯದರ್ಶಿ,(ಜಿ.ಪಂ.)
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.
PR-357