(1) ಸಭಾ ಸೂಚನಾ ಪತ್ರ :
ಆಯುಕ್ತರು, ಅಧ್ಯಕ್ಷರ ಅನುಮೋದನೆಯನ್ನು ಪಡೆದುಕೊಂಡ ತರುವಾಯ, ಸಲಹಾ ಸಮಿತಿಯ ಸಭೆಯನ್ನು ನಡೆಸಲು ನಿಗದಿಪಡಿಸಲಾದ ದಿನಾಂಕ, ಸಮಯ, ಸ್ಥಳ ಹಾಗೂ ಕಾರ್ಯಸೂಚಿಯನ್ನು ಸದಸ್ಯರುಗಳಿಗೆ ಹದಿನೈದು ದಿನಗಳ ಮುಂಚಿತವಾಗಿ ಸಭಾ ಸೂಚನಾ ಪತ್ರ ನೀಡತಕ್ಕದ್ದು.
(2) ಕೋರಂ:
ಸಲಹಾ ಸಮಿತಿಯು ಸಭೆಯನ್ನು ನಡೆಸುವುದಕ್ಕಾಗಿ ಒಟ್ಟು ಹಾಲಿ ಸದಸ್ಯರುಗಳ ಮೂರನೇ ಒಂದರಷ್ಟು ಕೋರಂ ಇರತಕ್ಕದ್ದು. ಸಭೆಗೆ ನಿಗದಿ ಮಾಡಿದ ಸಮಯದ ನಂತರದ ಅರ್ಧ ಗಂಟೆಯೊಳಗೆ ಅಗತ್ಯಪಡಿಸಿದ ಕೋರಂ ಇಲ್ಲದಿದ್ದಲ್ಲಿ, ಅದನ್ನು ಪ್ರಾಧಿಕಾರಿಯು ಸೂಕ್ತವೆಂದು ಭಾವಿಸಬಹುದಾದಂತಹ ಮುಂದಿನ ಅನುಕೂಲಕರ ದಿನಾಂಕ ಮತ್ತು ಸಮಯಕ್ಕೆ ಆ ಸಭೆಯನ್ನು ಮುಂದೂಡತಕ್ಕದ್ದು ಮತ್ತು ಅಂತಹ ಮುಂದೂಡಿದ ಸಭೆಯ ಸಭಾ ಸೂಚನಾ ಪತ್ರವನ್ನು ಕೂಡಲೇ ಸಂಬಂಧಪಟ್ಟ ಸದಸ್ಯರುಗಳಿಗೆ ತಕ್ಕದ್ದು. ಮುಂದೂಡಲಾದ ಸಭೆಯ ಕಾರ್ಯಸೂಚಿಯನ್ನು ಮುಂದಿನ ಸಭೆಯ ಮುಂದೆ ಮಂಡಿಸತಕ್ಕದ್ದು ಹಾಗೂ ಅಂತಹ ಯಲ್ಲಿ ಕೋರಂ ಇಲ್ಲದಿದ್ದರೂ ಇತ್ಯರ್ಥಪಡಿಸತಕ್ಕದ್ದು.
(3) ಅಧ್ಯಕ್ಷತೆ ವಹಿಸುವ ಅಧಿಕಾರಿ :
ಅಧ್ಯಕ್ಷರು, ಪ್ರತಿಯೊಂದು ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು. ಯಾವುದೇ ಕಾರಣಗಳಿಂದಾಗಿ ಅಧ್ಯಕ್ಷರು ಸಭೆಗೆ ಹಾಜರಾಗಲು ಸಾಧ್ಯವಾಗದಿದ್ದಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರು ಆ ಸಭೆಯ ಅಧ್ಯಕ್ಷತೆಯನ್ನು ವಹಿಸತಕ್ಕದ್ದು. ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರೂ ಸಹ ಗೈರುಹಾಜರಾದಲ್ಲಿ, ಪ್ರವಾಸೋದ್ಯಮ ಇಲಾಖೆಯ ಉಸ್ತುವಾರಿ ಸಚಿವರು ಸಭೆಯ ಕ್ಷತೆಯನ್ನು ವಹಿಸತಕ್ಕದ್ದು. ಅಧ್ಯಕ್ಷರು ಹಾಗೂ ಸಹ-ಅಧ್ಯಕ್ಷರು ಲಭ್ಯವಿಲ್ಲದಿದ್ದ ಸಂದರ್ಭದಲ್ಲಿ, ಸಭೆಯಲ್ಲಿ ಹಾಜರಿರುವ ಸದಸ್ಯರುಗಳ ಪೈಕಿ ತಮ್ಮಲ್ಲೇ ಒಬ್ಬರನ್ನು ಆ ಸಭೆಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡತಕ್ಕದ್ದು.
(4) ಬಾಗವಹಿಸುವಿಕೆ :
ಸಲಹಾ ಸಮಿತಿಯ ಯಾರೇ ಸದಸ್ಯನು ಸ್ವತಃ ಅಥವಾ ತನ್ನ ಪಾಲುದಾರರು ಅಥವಾ ಸಂಬಂಧಿಕರು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೇ ಪಾಲು ಅಥವಾ ಹಿತಾಸಕ್ತಿ ಹೊಂದಿರುವ ಯಾವುದೇ ವಿಷಯದ ಚರ್ಚೆಯಲ್ಲಿ ಭಾಗವಹಿಸತಕ್ಕದ್ದಲ್ಲ ಅಥವಾ ಅದನ್ನು ಚಲಾಯಿಸತಕ್ಕದ್ದಲ್ಲ.
(5) ವ್ಯವಹರಣೆಗಳ ದಾಖಲೆ :
ಸಲಹಾ ಸಮಿತಿಯ ಸಭೆಯ ವ್ಯವಹರಣೆಗಳನ್ನು ದಾಖಲಿಸತಕ್ಕದ್ದು ಮತ್ತು ಅದಕ್ಕೆ ಅಧ್ಯಕ್ಷರಿಂದ ಅನುಮೋದನೆಯನ್ನು ಪಡೆದ ನಂತರ, ಅದನ್ನು ಸಂಬಂಧಪಟ್ಟ ಸದಸ್ಯರುಗಳಿಗೆ ಮತ್ತು ಸರ್ಕಾರಕ್ಕೆ ಸದಸ್ಯ ಕಾರ್ಯದರ್ಶಿಯ ಮೂಲಕ ಕೂಡಲೇ ಕಳುಹಿಸತಕ್ಕದ್ದು.
(6) ಭತ್ಯೆಗಳ ಸಂದಾಯ :
(1) ಗೌರವಧನ (ಉಪವೇಶನ ಭತ್ಯೆ) :
ಪ್ರಾಧಿಕಾರ ಸಭೆಗಳು, ಸಲಹಾ ಸಮಿತಿ ಸಭೆಗಳು ಮತ್ತು ಉಪ-ಸಮಿತಿ ಸಭೆಗಳಿಗಾಗಿ, ಕೇಂದ್ರ ಕಛೇರಿಯಲ್ಲಾಗಲಿ ಅಥವಾ ಇತರ ಸ್ಥಳಗಳಲ್ಲಾಗಲಿ, ಆಹ್ವಾನಿಸಲಾದ ಅಧಿಕಾರೇತರ ಸದಸ್ಯರುಗಳು ಮತ್ತು ವಿಶೇಷ ಆಹ್ವಾನಿತರಿಗೆ ಗೌರವಧನ (ಉಪವೇಶನ ಭತ್ಯೆ)ವನ್ನಾಗಿ ರೂ.2,000/- ಮೊತ್ತವನ್ನು ಸಂದಾಯ ಮಾಡತಕ್ಕದ್ದು,
(2) ವಸತಿ ಸೌಲಭ್ಯದ ದರಗಳು :
ಪ್ರಾಧಿಕಾರದ ಅಧಿಕಾರೇತರ ಸದಸ್ಯರು ಹಾಗೂ ವಿಶೇಷ ಆಹ್ವಾನಿತರು ಭಾಗವಹಿಸುವ ಸಭೆಗಳಿಗಾಗಿನ ವಸತಿ ಸೌಲಭ್ಯ ವೆಚ್ಚಕ್ಕಾಗಿ ಹಾಗೂ ಪ್ರಾಧಿಕಾರದ ಚಟುವಟಿಕೆಗಳಿಗೆ ಸಂಬಂಧಿಸಿದ ವಿವಿಧ ಸ್ಥಳಗಳಿಗೆ ಅವರು ಭೇಟಿ ಮಾಡುವ ಸಮಯದಲ್ಲಿ ರಸೀದಿಯನ್ನು ಸಲ್ಲಿಸುವಿಕೆಯ ಆಧಾರದ ಮೇಲೆ ದಿನವೊಂದಕ್ಕೆ ಗರಿಷ್ಠ ರೂ.3,000/- ಮೊತ್ತವನ್ನು ಪಡೆದುಕೊಳ್ಳುವುದಕ್ಕೆ ಹಕ್ಕುಳ್ಳವರಾಗಿರುತ್ತಾರೆ.
(3) ಪ್ರಯಾಣ ಭತ್ಯೆಗಳು :
ಎ. ರೈಲು ಮೂಲಕ ಪ್ರಯಾಣ: ಅಧಿಕಾರೇತರ ಸದಸ್ಯರು ಮತ್ತು ವಿಶೇಷ ಆಹ್ವಾನಿತರು, ಪ್ರಥಮ ದರ್ಜೆ ಪ್ರಯಾಣ ದರ ಅಥವಾ ವಾಸ್ತವಿಕ ರೈಲು ಪ್ರಯಾಣ ದರ ಇವುಗಳಲ್ಲಿ ಯಾವುದು ಕಡಿಮೆಯೋ ಅದಕ್ಕೆ ಅರ್ಹರಾಗಿರುತ್ತಾರೆ.
ಬಿ. ಬಸ್ಸಿನ ಮೂಲಕ ಪ್ರಯಾಣ: ಅಧಿಕಾರೇತರ ಸದಸ್ಯರು ಹಾಗೂ ವಿಶೇಷ ಆಹ್ವಾನಿತರು, ಹವಾನಿಯಂತ್ರಿತ ಸ್ಲೀಪರ್/ಐರಾವತ/ಮೇಘದೂತ/ರಾಜಹಂಸ ಗಳಂತಹ ಬಸ್ಸುಗಳ ಸೌಲಭ್ಯ ಲಭ್ಯವಿರುವ ಕಡೆಗಳಲ್ಲಿ ಪ್ರಯಾಣಿಸಬಹುದು.
ಸಿ. ವಿಮಾನ ಮೂಲಕ ಪ್ರಯಾಣ: ಅಧಿಕಾರೇತರ ಸದಸ್ಯರು ಮತ್ತು ವಿಶೇಷ ಆಹ್ವಾನಿತರು, ಅನಿವಾರ್ಯ ಸಂದರ್ಭಗಳಲ್ಲಿ ಅಥವಾ ತುರ್ತು ಪರಿಸ್ಥಿತಿಯಲ್ಲಿ ವಿಮಾನದಲ್ಲಿ ಪ್ರಯಾಣಿಸಲು ಸರ್ಕಾರದ ಪೂರ್ವಾನುಮೋದನೆ ಪಡೆಯುವುದನ್ನು ಅಗತ್ಯಪಡಿಸಿದೆ.