- ಪ್ರಾಧಿಕಾರವು ಈ ಅಧಿನಿಯಮದ ಮೂಲಕ ಅಥವಾ ಮೇರೆಗೆ ವಿಧಿಸಲಾದ ಅದರ ಕರ್ತವ್ಯ ಗಳನ್ನು ನಿರ್ವಹಿಸುವಲ್ಲಿ ಕರ್ತವ್ಯ ಲೋಪ ಎಸಗಿದ ಎಂದು ಅಥವಾ ಯೋಜನೆಯಲ್ಲಿ ಅನುಮೋದಿಸಲಾದಂತಹ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾಗಿದೆ ಎಂದು ಅಥವಾ ನಿರ್ಲಕ್ಷಿಸಿದೆ ಎಂದು, ಅಥವಾ ಪ್ರಾಧಿಕಾರದ ನಿಯಂತ್ರಣದಲ್ಲಿರುವ ಆವರಣದೊಳಗೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಕೈಗೊಂಡಿದೆ ಎಂದು ಅಥವಾ ಕಾನೂನು ಬಾಹಿರ ಚಟುವಟಿಕೆಗಳನ್ನು ಕೈಗೊಳ್ಳಲು ಅನುಮತಿ ನೀಡಿದೆ ಎಂದು ರಾಜ್ಯ ಸರ್ಕಾರಕ್ಕೆ ಕಂಡುಬಂದರೆ, ರಾಜ್ಯ ಸರ್ಕಾರವು, ಅಂತಹ ಚಟುವಟಿಕೆಗಳ ಕುರಿತು ವಿಚಾರಣೆಯನ್ನು ನಡೆಸಬಹುದು ಅಥವಾ ಪ್ರಾಧಿಕಾರದ ವಿಚಾರಣೆಯನ್ನು ನಡೆಸುವುದಕ್ಕೆ ಯಾವುದೇ ಅಧಿಕಾರಿಯನ್ನು ನೇಮಿಸಬಹುದು.
- ಉಪನಿಯಮ (1)ರ ಮೇರೆಗೆ ವಿಚಾರಣೆ ನಡೆಸಿದ ಮೇಲೆ, ಪ್ರಾಧಿಕಾರವು ಈ ಅಧಿನಿಯಮದ ಮೂಲಕ ಅಥವಾ ಮೇರೆಗೆ ವಿಧಿಸಲಾದ ಅದರ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಕರ್ತವ್ಯ ಲೋಪ ಎಸಗಿದೆ ಎಂದು ಅಥವಾ ಯೋಜನೆಯಲ್ಲಿ ಅನುಮೋದಿಸಲಾದಂತಹ ಕರ್ತವ್ಯಗಳನ್ನು ನಿರ್ವಹಿಸಲು ವಿಫಲವಾಗಿದೆ ಅಥವಾ ನಿರ್ಲಕ್ಷಿಸಿದೆ ಎಂದು, ಅಥವಾ ಪ್ರಾಧಿಕಾರದ ನಿಯಂತ್ರಣದಲ್ಲಿರುವ ಆವರಣದೊಳಗೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ಕೈಗೊಂಡಿದೆ ಎಂದು ಅಥವಾ ಕಾನೂನು ಬಾಹಿರ ಚಟುವಟಿಕೆಗಳನ್ನು ಕೈಗೊಳ್ಳಲು ಅನುಮತಿ ನೀಡಿದೆ ಎಂದು ರಾಜ್ಯ ಸರ್ಕಾರಕ್ಕೆ ಕಂಡುಬಂದರೆ, ಪ್ರಾಧಿಕಾರವನ್ನು ಏಕೆ ಅಧಿಕ್ರಮಣಗೊಳಿಸಬಾರದು ಎಂದು ಕಾರಣ ಕೇಳುವ ನೋಟೀಸನ್ನು ಪ್ರಾಧಿಕಾರಕ್ಕೆ ನೀಡತಕ್ಕದ್ದು. ಪ್ರಾಧಿಕಾರವು ಮಾಡಿರುವ ಯಾವುದೇ ಆಕ್ಷೇಪಣೆಗಳು ಅಥವಾ ಪ್ರತ್ಯುತ್ತರವನ್ನು ಪರಿಗಣಿಸಿದ ತರುವಾಯ, ರಾಜ್ಯ ಸರ್ಕಾರವು ಆದೇಶದ ಮೂಲಕ ತಾತ್ಕಾಲಿಕ ಅವಧಿಗಾಗಿ ಪ್ರಾಧಿಕಾರವನ್ನು ಅಧಿಕ್ರಮಣ ಗೊಳಿಸತಕ್ಕದ್ದು ಹಾಗೂ ಪ್ರಾಧಿಕಾರದ ವ್ಯವಹಾರಗಳನ್ನು ನಿರ್ವಹಿಸಲು ಆಡಳಿತಾಧಿಕಾರಿಯನ್ನು ನೇಮಕ ಮಾಡತಕ್ಕದ್ದು. ಅಧಿಕ್ರಮಣದ ಅವಧಿಯಲ್ಲಿ ಆಡಳಿತಾಧಿಕಾರಿಯು ಅದೇ ಅಧಿಕಾರಗಳನ್ನು ಹೊಂದಿರತಕ್ಕದ್ದು ಮತ್ತು ಈ ಅಧಿನಿಯಮದ ಮೇರೆಗೆ ಪ್ರದತ್ತವಾದ ಯಾವುದೇ ಅಧಿಕಾರಗಳನ್ನು ಚಲಾಯಿಸತಕ್ಕದ್ದು ಮತ್ತು ಪ್ರಾಧಿಕಾರದ ಯಾವುದೇ ಪ್ರಕಾಯಗಳನ್ನು ನಿರ್ವಹಿಸತಕ್ಕದ್ದು.
- ಆಡಳಿತಾಧಿಕಾರಿಯು, ಅಧಿಕ್ರಮಣ ಅವಧಿಯಲ್ಲಿ ತಪ್ಪುಗಳನ್ನು ಸರಿಪಡಿಸತಕ್ಕದ್ದು ಮತ್ತು ರಾಜ್ಯ ಸರ್ಕಾರಕ್ಕೆ ವರದಿಯನ್ನು ಸಲ್ಲಿಸತಕ್ಕದ್ದು ಮತ್ತು ಸರ್ಕಾರವು ವರದಿಯನ್ನು ಪರಿಶೀಲಿಸಿದ ನಂತರ, ಅದು ಸೂಕ್ತವೆಂದು ಭಾವಿಸಬಹುದಾದಂತಹ ಆದೇಶಗಳನ್ನು ಹೊರಡಿಸತಕ್ಕದ್ದು ಮತ್ತು ಸಾಧ್ಯವಾದಷ್ಟು ಬೇಗನೆ ಪ್ರಾಧಿಕಾರವನ್ನು ಪುನರ್ ರಚಿಸತಕ್ಕದ್ದು.
ನಮೂನೆ – 1 (6ನೇ ನಿಯಮವನ್ನು ನೋಡಿ) ವಾರ್ಷಿಕ ಅಂದಾಜು ಆಯವ್ಯಯ
ನಮೂನೆ – 2 (8 (1)ನೇ ನಿಯಮವನ್ನು ನೋಡಿ) ಲೆಕ್ಕಪತ್ರಗಳ ಪುಸ್ತಕಗಳು ಮತ್ತು ಇತರ ರಿಜಿಸ್ಟರುಗಳು 1. ಪ್ರಾಧಿಕಾರದ ಕಚೇರಿಯಲ್ಲಿ ಈ ಮುಂದಿನ ಲೆಕ್ಕಪತ್ರಗಳ ಪುಸ್ತಕ ಮತ್ತು ರಿಜಿಸ್ಟರುಗಳನ್ನು ನಿರ್ವಹಿಸತಕ್ಕದ್ದು.
a. ವೇತನ ಪುಸ್ತಕಗಳು b. ಖಾತಾ ಲೆಕ್ಕಗಳು.
c. ನಗದು ಪುಸ್ತಕ d. ವಂತಿಗೆಗಳ ವಸೂಲಿಯನ್ನು ಗಮನಿಸಲು ಬೇಡಿಕೆ, ವಸೂಲಿ ಸಂಗ್ರಹ ಮತ್ತು ಜಮಾ ಖರ್ಚು ರಿಜಿಸ್ಟರ್.
e. ಮಾಡಬಹುದಾದ ವಸೂಲಿಗಳನ್ನು ತೋರಿಸುವ ರಿಜಿಸ್ಟರ್.
f. ಪ್ರಾಧಿಕಾರದ ಭೂಮಿ ಮತ್ತು ಸ್ವತ್ತುಗಳಿಗೆ ಸಂಬಂಧಿಸಿದಂತೆ ಬಾಡಿಗೆ ಅಥವಾ ಭೂಮಿ ಬಾಡಿಗೆಯ ಬೇಡಿಕೆ ಮತ್ತು ವಸೂಲಿಯ ರಿಜಿಸ್ಟರ್.
g. ಸ್ವೀಕೃತಿ ಪುಸ್ತಕಗಳು ಮತ್ತು ಪಕ್ಕಾ ಪ್ರತಿಗಳ ಜೊತೆಗೆ ಇತರೆ ಸ್ವೀಕೃತಿ ರಿಜಿಸ್ಟರ್.
h. ಸಾದಿಲ್ವಾರು ವೆಚ್ಚಗಳ ರಿಜಿಸ್ಟರ್.
i. ಸ್ಟಾಂಪು ರಿಜಿಸ್ಟರ್.
j. ಭದ್ರತೆಗಳು, ದಾಸ್ತಾನುಗಳು ಮತ್ತು ಡಿಬೆಂಚರುಗಳ ರಿಜಿಸ್ಟರ್.
k. ಸಿಬ್ಬಂದಿ ಹಾಗೂ ಲೆಕ್ಕಪರಿಶೋಧನ ರಿಜಿಸ್ಟರ್.
l. ಲೇಖನ ಸಾಮಾಗ್ರಿ ಮತ್ತು ಮುದ್ರಿತ ನಮೂನೆಗಳು, ಪೀಠೋಪಕರಣ, ಬರಳಚ್ಚು ಯಂತ್ರಗಳು, ಕಂಪ್ಯೂಟರ್ಗಳು, ವಾಟರ್ ಕೂಲರ್ಗಳು, ವಾಹನಗಳು, ಗ್ಯಾಲರಿ ಏರ್ ಕಂಡಿಷನರ್ ಮತ್ತು ಇತರ ಮಳಿಗೆಗಳಿಗೆ ಸಂಬಂಧಿಸಿದಂತೆ ಸ್ವೀಕೃತಿ ನೀಡಿಕೆ ಮತ್ತು ಬಾಕಿಯನ್ನು ತೋರಿಸುವ ದಾಸ್ತಾನು ಪುಸ್ತಕಗಳು.
m. ಖಾಯಂ ಮುಂಗಡ ಲೆಕ್ಕಪತ್ರಗಳು.
n. ಸ್ಥಿರ ಸ್ವತ್ತುಗಳ ರಿಜಿಸ್ಟರ್.
o. ಜಡ ಸರಕು ವಸ್ತುಗಳ ರಿಜಿಸ್ಟರ್.
p. ಪಶು ಜಾನುವಾರು ರಿಜಿಸ್ಟರ್.
q. ಸ್ಥಾವರಗಳು ಮತ್ತು ಯಂತ್ರೋಪಕರಣಗಳ ರಿಜಿಸ್ಟರ್.
2. ಪ್ರಾಧಿಕಾರವು ಲೆಕ್ಕಪತ್ರಗಳ ನಿರ್ವಹಣೆಯಲ್ಲಿ, ಈ ಮುಂದಿನ ಕಾರ್ಯವಿಧಾನವನ್ನು ಪಾಲಿಸತಕ್ಕದ್ದು:-
a. ಲೆಕ್ಕಪತ್ರಗಳನ್ನು, ಪ್ರತಿಯೊಂದು ಹಣಕಾಸು ವರ್ಷಕ್ಕಾಗಿ ಪ್ರತ್ಯೇಕವಾಗಿ ನಿರ್ವಹಿಸತಕ್ಕದ್ದು.
b. ಲೆಕ್ಕಪತ್ರಗಳ ಎಲ್ಲಾ ಪುಸ್ತಕಗಳು ಮತ್ತು ರಿಜಿಸ್ಟರುಗಳನ್ನು ಸಮರ್ಪಕವಾಗಿದತಕ್ಕದ್ದು.
c. ಎಲ್ಲಾ ಲೆಕ್ಕಪತ್ರ ಪುಸ್ತಕಗಳ ಪುಟಗಳಿಗೆ ಕ್ರಮವಾಗಿ ಸಂಖ್ಯೆ ಹಾಕತಕ್ಕದ್ದು ಮತ್ತು ಪ್ರತಿಯೊಂದು ಪುಟಕ್ಕೆ ಪ್ರಾಧಿಕಾರದ ಮೊಹರಿನಿಂದ ಮುದ್ರೆ ಹಾಕತಕ್ಕದ್ದು.
d. ಸ್ವೀಕೃತಿ ಪುಸ್ತಕಗಳ ಪುಟಗಳನ್ನು, ನೀಡುವುದಕ್ಕಿಂತ ಮುಂಚೆ ಅದೇ ಪ್ರಕಾರ ಮುದ್ರೆಯನ್ನು ಹಾಕತಕ್ಕದ್ದು, ಮತ್ತು ಆಯುಕ್ತರು, ಪ್ರಮಾಣ ಪತ್ರವನ್ನು ನೀಡುವುದಕ್ಕೆ ಮುಂಚೆ, ಅದು ಒಳಗೊಂಡಿರುವ ಪುಟಗಳ ಸಂಖ್ಯೆಯನ್ನು ಪ್ರತಿಯೊಂದು ಪುಸ್ತಕದಲ್ಲಿ ದಾಖಲಿಸತಕ್ಕದ್ದು.
ನಮೂನೆ – 3 (8 (2)ನೇ ನಿಯಮವನ್ನು ನೋಡಿ) ಲೆಕ್ಕಪತ್ರಗಳ ವಾರ್ಷಿಕ ವಿವರಣೆ ಆದಾಯ ಮತ್ತು ವೆಚ್ಚ ಲೆಕ್ಕಪತ್ರ:
ಜಮಾ ಖರ್ಚು ವಟ್ಟಿ:
ನಮೂನೆ - 4 (8 (3)ನೇ ನಿಯಮವನ್ನು ನೋಡಿ) ಲೆಕ್ಕಪರಿಶೋಧನಾ ವರದಿ i. ಪ್ರಾಧಿಕಾರದ ನಿಧಿಯ ಲೆಕ್ಕಪರಿಶೋಧನಾ ಲೆಕ್ಕಪತ್ರಗಳಲ್ಲಿ ಲೆಕ್ಕಪರಿಶೋಧಕರು ನಗದುಶಿಲ್ಕನ್ನು ಪರಿಶೀಲಿಸತಕ್ಕದ್ದು ಮತ್ತು ನಗದು ಸುಲಭವಾಗಿ ಪರಿಶೀಲನೆಗಾಗಿ ಬರುತ್ತದೆಯೇ ಎಂಬುದನ್ನು ವರದಿಯಲ್ಲಿ ತಿಳಿಸತಕ್ಕದ್ದು.
ii. ಲೆಕ್ಕಪರಿಶೋಧಕರು, ಲೆಕ್ಕಪರಿಶೋಧನೆ ನಡೆಯುತ್ತಿರುವಾಗ, ಡಿಬೆಂಚರುಗಳನ್ನು, ಷೇರು ಪ್ರಮಾಣ ಪತ್ರಗಳನ್ನು, ಸರ್ಕಾರಿ ಬಾಂಡುಗಳನ್ನು ಮತ್ತು ಇತರ ಭದ್ರತೆಗಳನ್ನು ಹಾಗೂ ಬ್ಯಾಂಕ್ ಪಾಸು ಪುಸ್ತಕಗಳನ್ನು ಪರಿಶೀಲಿಸತಕ್ಕದ್ದು; ಮತ್ತು ಅವು ಸರಿಯಾಗಿವೆಯೇ ಎಂಬುದನ್ನು ವರದಿ ಮಾಡತಕ್ಕದ್ದು.
iii. ಲೆಕ್ಕಪರಿಶೋಧಕರು, ಲೆಕ್ಕಪರಿಶೋಧನೆಯಲ್ಲಿ ಉದ್ಭವಿಸುವ ಇತರ ಅಂಶಗಳ ಬಗ್ಗೆ ವರದಿ ಮಾಡುವುದು, ಈ ಕೆಳಗಿನಂತಿವೆ.
a. ಅಗತ್ಯವಿರುವ ಲೆಕ್ಕಪತ್ರಗಳು ಮತ್ತು ರಿಜಿಸ್ಟರುಗಳನ್ನು ಸೂಕ್ತವಾಗಿ ನಿರ್ವಹಿಸಲಾಗುತ್ತಿದೆಯ ಮತ್ತು ಇಟ್ಟುಕೊಳ್ಳಲಾಗಿದೆಯೇ;
b. ಪ್ರಾಧಿಕಾರಕ್ಕೆ ಯುಕ್ತ ವಂತಿಗೆಗಳು ಮತ್ತು ಇತರ ಜಮೆಗಳನ್ನು ಸೂಕ್ತ ಸಮಯದಲ್ಲಿ ಪಡೆಯಲಾಗಿದೆಯೇ ಮತ್ತು ಅವಧಿ ಮೀರಿದ ಒಟ್ಟು ಮೊತ್ತಗಳನ್ನು ವಸೂಲಿ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆಯೇ, ಮತ್ತು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಾಗದಿರುವ ಅಂತಹ ಪ್ರಕರಣಗಳನ್ನು ವರದಿ ಮಾಡತಕ್ಕದ್ದು;
c. ಎಲ್ಲಾ ವಸೂಲಿಗಳನ್ನು ಪ್ರಾಮಾಣಿಕವಾಗಿ ಲೆಕ್ಕಕ್ಕೆ ಸೇರಿಸಲಾಗುತ್ತಿದೆಯೇ ಎಂಬುದನ್ನು;
d. ಯಾವುದೇ ವಂತಿಗೆಗಳನ್ನು ನೀಡಲಾಗುತ್ತಿದೆಯೇ ಅಥವಾ ಕಡಿಮೆ ಮಾಡಲಾಗುತ್ತಿದೆಯೇ ಹಾಗಿದ್ದಲ್ಲಿ ಇದನ್ನು ಸೂಕ್ತ ಪ್ರಾಧಿಕಾರದೊಂದಿಗೆ ಮಾಡಲಾಗುತ್ತಿದೆಯೇ ಎಂಬುದನ್ನು;
e. ಭರಿಸಲಾದ ಎಲ್ಲ ವೆಚ್ಚಗಳು ಮಂಜೂರಾದ ಆಯವ್ಯಯದ ಅನುಸಾರವಾಗಿವೆಯೇ ಮತ್ತು ಯಾವುದೇ ಬದಲಾವಣೆಗಳು ಇದ್ದರೆ, ಅಂತಹ ಬದಲಾವಣೆಗಳನ್ನು ವರದಿ ಮಾಡತಕ್ಕದ್ದು;
f. ಪ್ರತಿಯೊಂದು ವೆಚ್ಚದ ಬಾಬ್ತನ್ನು ಸಕ್ಷಮ ಪ್ರಾಧಿಕಾರದಿಂದ ಮಂಜೂರು ಮಾಡಲಾಗಿದೆಯೇ ಮತ್ತು ಸೂಕ್ತ ವೋಚರುಗಳಿಂದ ಸಮರ್ಥಿಸಲಾಗಿದೆಯೇ;
g. ಲೆಕ್ಕಪರಿಶೋಧಕರ ಅಭಿಪ್ರಾಯದಲ್ಲಿ ಮೊದಲ ನೋಟಕ್ಕೆ ಕಂಡುಬರುವಂತೆ ಯಾವುದೇ ದುಂದು ವೆಚ್ಚವಾಗಿರುವ ವೆಚ್ಚದ ಯಾವುದೇ ಬಾಬ್ತು ಇದೆಯೇ ಎಂಬುದನ್ನು ; ಮತ್ತು h. ತಕ್ಷಣ ವೆಚ್ಚಕ್ಕಾಗಿ ಅಗತ್ಯವಿಲ್ಲದಿರುವ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಡಲಾಗುತ್ತಿದೆಯೇ ಮತ್ತು ಹೆಚ್ಚುವರಿ ನಿಧಿಗಳನ್ನು ಸೂಕ್ತವಾಗಿ ಹೂಡಿಕೆ ಮಾಡಲಾಗುತ್ತಿದೆಯೇ ಎಂಬುದನ್ನು ವರದಿ ಮಾಡತಕ್ಕದ್ದು.
iv. ಲೆಕ್ಕಪರಿಶೋಧಕನು, ಪ್ರಾಧಿಕಾರಕ್ಕೆ ವಂತಿಗೆಯ ಸಂಗ್ರಹಣಯ ಬಚ್ಚದಲ್ಲಿ ಅಥವಾ ಲೆಕ್ಕಪತ್ರಗಳಲ್ಲಿ ಗಮನಿಸಬಹುದಾಂತ ಯಾವುದೇ ವಿಷಯಗಳಲ್ಲಿನ ದೋಷ ಅಥವಾ ಅವ್ಯವಹಾರಗಳನ್ನು ಹಣದ ದುರ್ವ್ಯಯದ ಎಲ್ಲಾ ಪ್ರಕರಣಗಳನ್ನು ನಷ್ಟ ಅಥವಾ ವ್ಯರ್ಥಕ್ಕೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಜವಾಬ್ದಾರರಾಗಿರುವ ವ್ಯಕ್ತಿಗಳ ಹೆಸರುಗಳೊಂದಿಗೆ ವರದಿಯನ್ನು ನೀಡತಕ್ಕದ್ದು;
v. ಲೆಕ್ಕಪರಿಶೋಧಕರು, ಈ ಮುಂದಿನವುಗಳನ್ನು ವರದಿಗೆ ಸೇರಿಸತಕ್ಕದ್ದು.
a. ಆಯವ್ಯಯ ಲೆಕ್ಕ ಶೀರ್ಷಿಕೆಗಳ ಮೇರೆಗೆ ಸ್ವೀಕರಿಸಿದ ಮತ್ತು ವೆಚ್ಚಗಳ ವಿವರಣಾ ಪಟ್ಟಿ.
b. ಆದಾಯ ಮತ್ತು ವೆಚ್ಚದ ವಿವರಣಾ ಪಟ್ಟಿ.
c. ಆಸ್ತಿಗಳು ಮತ್ತು ಹೊಣೆಗಾರಿಕೆಗಳನ್ನು ಕ್ರೋಢೀಕರಿಸಲಾದ ವಿವರಣಾ ಪಟ್ಟಿ.
d. ಡಿಬೆಂಚರುಗಳು, ಷೇರುಗಳ ಪ್ರಮಾಣ ಪತ್ರಗಳು, ಸರ್ಕಾರಿ ಬಾಂಡ್ಗಳು ಮತ್ತು ಇತರ ಬದ್ರತೆಗಳ ವಿವರಣಾ ಪಟ್ಟಿ.
e. ವಂತಿಗೆಗಳ ಮೊತ್ತಗಳನ್ನು ಒಳಗೊಂಡಂತೆ ರಾಜಸ್ವದ ಎಲ್ಲಾ ಬಾಬ್ತುಗಳ ಬೇಡಿಕೆ, ಸಂಗ್ರಹಣೆಗಳು ಮತ್ತು ಬಾಕಿ, ಇತ್ಯಾದಿಗಳ ನಗದು ಅಥವಾ ಇತರ ರೂಪದಲ್ಲಿರುವ ಎರಡೂ ಬಾಕಿಗಳು ಮತ್ತು ಪ್ರಸ್ತುತ ಬಾಕಿ ಉಳಿದಿರುವ ಸ್ವೀಕೃತಿಗಳು ಲೆಕ್ಕಕ್ಕೆ ಸೇರಿಸಲಾದ ವಿವರಣಾ ಪಟ್ಟಿ.
vi. ಲೆಕ್ಕಪರಿಶೋಧಕರು ಲೆಕ್ಕಪರಿಶೋಧಿಸಿದ ಸ್ವೀಕೃತಿಗಳ ಮೊತ್ತಗಳು ಮತ್ತು ಜಮಾ ಖರ್ಚು ಪಟ್ಟಿಯ ಸಾರಾಂಶವನ್ನು ಪ್ರದರ್ಶಿಸತಕ್ಕದ್ದು ಮತ್ತು ಪರಿಶೋಧನಾ ವರದಿಯೊಂದಿಗೆ ಅದರ ಮೂರು ಪ್ರತಿಗಳನ್ನು ಸಲ್ಲಿಸಬೇಕು.
ನಮೂನೆ - 5 (8 (4)ನೇ ನಿಯಮವನ್ನು ನೋಡಿ) ವಾರ್ಷಿಕ ವರದಿ ಪ್ರಾಧಿಕಾರದ ವಾರ್ಷಿಕ ವರದಿ:
- ಪ್ರಾಧಿಕಾರವು, ನಮೂನೆ-5ರಲ್ಲಿ ಮುಂದಿನ ವರ್ಷದ ಜೂನ್ 30ನೇ ದಿನಾಂಕಕ್ಕಿಂತ ಮೊದಲು, ಪ್ರತಿಯೊಂದರ ಕಣಕಾಸು ವರ್ಷಕ್ಕೆ ಅದರ ವಾರ್ಷಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
- ವರದಿಯು, ಪ್ರಾಧಿಕಾರದ ಚಟುವಟಿಕೆಗಳು, ಕಣಕಾಸಿನ ಸ್ಥಿತಿಗತಿ, ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಚಟುವಟಿಕೆಗಳನ್ನು ಕಣಕಾಸು ವರ್ಷದಲ್ಲಿ ಸರ್ಕಾರದಿಂದ ಉಲ್ಲೇಖಿಸಿದ ಸಂಗತಿಗಳ ಕುರಿತು ತೆಗೆದುಕೊಂಡ ಕ್ರಮಗಳನ್ನು ಒಳಗೊಂಡಿರತಕ್ಕದ್ದು.
- ವರದಿಯು ರಾಜ್ಯ ಮಟ್ಟದ ಸಲಹಾ ಸಮಿತಿಯ ಶಿಫಾರಸುಗಳ ಸಾರಾಂಶವನ್ನು ಸಹ ಒಳಗೊಂಡಿರತಕ್ಕದ್ದು.
(1) ಆಡಳಿತ:
- ಪ್ರಾಧಿಕಾರದ ರಚನೆ 2. ಪ್ರಾಧಿಕಾರದ ಸದಸ್ಯರ ಹೆಸರುಗಳು ಮತ್ತು ಅವರ ಅಧಿಕಾರ.
- ಅಧಿನಿಯಮದ 8(1)ನೇ ಪ್ರಕರಣದಲ್ಲಿ ನಿಗದಿಪಡಿಸಲಾದಂತೆ ನಡೆಸಿದ ಸಭೆಗಳ ಸಂಖ್ಯೆ ಮತ್ತು ಅಂತಹ ಸಭೆಗಳನ್ನು ನಡೆಸದಿರುವುದಕ್ಕೆ ಕಾರಣಗಳು.
- ಸಭೆಗಳಲ್ಲಿ ನಿರಂತರವಾಗಿ ಗೈರುಹಾಜರಾದಂತಹ ಸದಸ್ಯರ ಹೆಸರು.
- ಪ್ರಾಧಿಕಾರ ಸಮಿತಿಗಳ ರಚನೆ.
- ಸಮಿತಿಗಳಿಂದ ನಡೆಸಲಾದ ಸಭೆಗಳು.
- ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ.
- ಕಚೇರಿಗಳ ಆವರಣ.
- ಪೀಠೋಪಕರಣಗಳು ಮತ್ತು ಲೇಖನ ಸಾಮಾಗ್ರಿಗಳು.
- ಸ್ಥಿರಾಸ್ತಿ 11. ವೇಗವಾದ ವಾಹನಗಳು, ಸಾಧನ ಸಾಮಗ್ರಿಗಳು, ಸ್ಥಿರ ವಸ್ತುಗಳು.
- ಪುಸ್ತಕಗಳು, ನಮೂನೆಗಳು, ದಾಖಲೆಗಳ ನಿರ್ವಹಣೆ.
- ನಗದು, ಅಮೂಲ್ಯ ವಸ್ತುಗಳು, ಪ್ರಮುಖ ದಾಖಲೆಗಳು ಮತ್ತು ಕರಾರುಗಳು, ಅದರ ಅಭಿರಕ್ಷೆ ಮತ್ತು ಸಂರಕ್ಷಣೆ.
(2) ರಾಜ್ಯ ಮಟ್ಟದ ಸಲಹಾ ಸಮಿತಿ:
- ವರ್ಷದ ಅವಧಿಯಲ್ಲಿ ಸಲಹಾ ಸಮಿತಿಯಿಂದ ನಡೆಸಲಾದ ಸಭೆಯ ಸಂಕ್ಷಿಪ್ತ ಸಾರಾಂಶ/ಸಂಗ್ರಹ ಮತ್ತು ಸಭೆಗಳ ದಾಖಲೆ 2. ಸಲಹಾ ಸಮಿತಿಯಿಂದ ನೀಡಲಾದ ಸಲಹೆಯ ಸಂಕ್ಷಿಪ್ತ ಸಾರಾಂಶ.
- ಮೇಲಿನ ಉಲ್ಲೇಖಗಳ ಅನುಪಾಲನೆಯ ಸಂಕ್ಷಿಪ್ತ ಸಾರಾಂಶ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ನುಮ ಬಿ.ಎಸ್)
ಸರ್ಕಾರದ ಅಧೀನ ಕಾರ್ಯದರ್ಶಿ
ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ,
ಜೈವಿಕ ತಂತ್ರಜ್ಞಾನ ಮತ್ತು
ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ.
(ವಿಜ್ಞಾನ ಮತ್ತು ತಂತ್ರಜ್ಞಾನ).