(1) ಪ್ರಾಧಿಕಾರವು, ಮುಂಬರುವ ಎಪ್ರಿಲ್ ಮೊದಲನೇ ದಿನಾಂಕದಂದು ಪ್ರಾರಂಭವಾಗುವ, ವರ್ಷದ ಆಯವ್ಯಯದಲ್ಲಿ ಒಳಗೊಂಡಿರುವ ಧನವಿಯೋಗ, ಕಾರ್ಯವಿಧಾನಗಳನ್ನು ನಿರ್ಧರಿಸತಕ್ಕದ್ದು. ಪ್ರಾಧಿಕಾರದಿಂದ ಹೊರಡಿಸಲಾದಂತಹ ಆಯವ್ಯಯದ ಮೂರು ಪ್ರತಿಗಳನ್ನು ಸರ್ಕಾರಕ್ಕೆ ಕಳುಹಿಸತಕ್ಕದ್ದು.
(2) ಅಂತಹ ಅಂದಾಜು ಆಯವ್ಯಯದಲ್ಲಿ ಪ್ರಾಧಿಕಾರವು ಇತರ ಅಂಶಗಳನ್ನೂ ಒಳಗೊಂಡಂತೆ, ಎ) ಅಧಿನಿಯಮ ಮತ್ತು ಈ ನಿಯಮಗಳ ಮೂಲಕ ಪ್ರಾಧಿಕಾರದ ಮೇಲೆ ಹೊರಿಸಲಾದ ಹಲವು ಕರ್ತವ್ಯಗಳನ್ನು ಪೂರೈಸುವುದಕ್ಕಾಗಿ ಅಗತ್ಯಪಡಿಸಬಹುದಾದಂತಹ ಸೇವೆಗಳಿಗಾಗಿ ಸಾಕಷ್ಟು ಮತ್ತು ಸೂಕ್ತ ಅವಕಾಶವನ್ನು ಕಲ್ಪಿಸುವುದು;
ಬಿ) ಪ್ರಾಧಿಕಾರವು, ತಾನು ಕರಾರು ಮಾಡಿಕೊಂಡ ಸಾಲಗಳಿಗೆ ಸಂಬಂಧಿಸಿದಂತೆ ಬದ್ಧತೆಗೊಳಪಡುವ ಅಸಲು ಮತ್ತು ಬಡ್ಡಿಗಳ ಎಲ್ಲಾ ಕಂತುಗಳ ನಂದಾಯಕ್ಕಾಗಿ ಅವಕಾಶ ಕಲ್ಪಿಸುವುದು;
ಸಿ) ಸರ್ಕಾರ ಮತ್ತು ಇತರ ಸರ್ಕಾರಿ ಏಜೆನ್ಸಿಗಳಿಗೆ ಪಂದಾಯವಾಗಬೇಕಾದ ಎಲ್ಲಾ ಮೊತ್ತಗಳ ಪಾವತಿಗಾಗಿ ಅವಕಾಶ ಕಲ್ಪಿಸುವುದು;
ಡಿ) ಮೂರು ತಿಂಗಳ ಅವಧಿಗಾಗಿ ಸಿಬ್ಬಂದಿ ವೆಚ್ಚವನ್ನು ಭರಿಸಲು ಅಗತ್ಯ ಪಡಿಸಬಹುದಾದಂತಹ ಮೊತ್ತಕ್ಕಿಂತ ಕಡಿಮೆಯಿಲ್ಲದಂತೆ ಸದರಿ ವರ್ಷದ ಕೊನೆಯಲ್ಲಿ ಬಾಕಿಗೆ ಅವಕಾಶ ಕಲ್ಪಿಸಿಕೊಡುವುದು.