ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) ‘‘ಸಹಾಯಕ ಕಾರ್ಯದರ್ಶಿ'' ಎಂದರೆ, ಆಯೋಗದ ಸಹಾಯಕ ಕಾರ್ಯದರ್ಶಿ ಅಥವಾ ಅವನ ಗೈರುಹಾಜರಿಯಲ್ಲಿ ತತ್ಕಾಲದಲ್ಲಿ ಸಹಾಯಕ ಕಾರ್ಯದರ್ಶಿಯ ಕರ್ತವ್ಯಗಳನ್ನು 1 ನಿರ್ವಹಿಸುತ್ತಿರುವಂಥ ಇತರ ವ್ಯಕ್ತಿ;] 1. 1966ರ ಅಧಿನಿಯಮ ಸಂಖ್ಯೆ 25ರ ಮೂಲಕ01.09.1966 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
2 1 ‘‘ಆಯೋಗ'' ಎಂದರೆ,2 ಲೋಕಸೇವಾ ಆಯೋಗ; (ಎಎ)] [ಕರ್ನಾಟಕ] 1. 1966ರ ಅಧಿನಿಯಮ ಸಂಖ್ಯೆ 25ರ ಮೂಲಕ 01.09.1966 ರಿಂದ ಜಾರಿಗೆ ಬರುವಂತೆ ಪುನಃ ಅಕ್ಷರ ನೀಡಲಾಗಿದೆ. 2. ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶ, 1973ರ ಮೂಲಕ 01.11.1973 ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ. (ಬಿ) ‘‘ಸರ್ಕಾರ'' ಎಂದರೆ, ರಾಜ್ಯ ಸರ್ಕಾರ;
(ಸಿ) ‘‘ಸದಸ್ಯ'' ಎಂದರೆ, ಆಯೋಗದ ಸದಸ್ಯ ಮತ್ತು ಅದರಲ್ಲಿ ಆಯೋಗದ ಅಧ್ಯಕ್ಷನೂ ಸೇರುತ್ತಾನೆ;
(ಡಿ) ‘‘ನಿಯಮಿಸಲಾದುದು'' ಎಂದರೆ, ಈ ಅಧಿನಿಯಮದ ಮೇರೆಗೆ ರಚಿಸಲಾದ ನಿಯಮಗಳ ಮೂಲಕ ನಿಯಮಿಸಲಾದುದು;
(ಇ) ‘‘ಕಾರ್ಯದರ್ಶಿ'' ಎಂದರೆ, ಆಯೋಗದ ಕಾರ್ಯದರ್ಶಿ; ಅಥವಾ ಅವನ ಗೈರುಹಾಜರಿಯಲ್ಲಿ, ತತ್ಕಾಲದಲ್ಲಿ ಕಾರ್ಯದರ್ಶಿಯ ಕರ್ತವ್ಯಗಳನ್ನು ನಿರ್ವಹಿಸುತ್ತಿರುವಂಥ ಇತರ ವ್ಯಕ್ತಿ.