ಆಯೋಗದಲ್ಲಿ ಉದ್ಭವಿಸುವ ಎಲ್ಲ ಪ್ರಶ್ನೆಗಳನ್ನು ಆಯೋಗದ ಸದಸ್ಯರ ಸಭೆಯಲ್ಲಾಗಲಿ ಅಥವಾ ಆಯೋಗದ ಸದಸ್ಯರಿಗೆ ಸುತ್ತೋಲೆ ಕಳುಹಿಸುವ ಮೂಲಕವಾಗಲಿ ನಿರ್ಣಯಿಸತಕ್ಕದ್ದು:
ಪರಂತು, ಯಾರೇ ಸದಸ್ಯನು, ಪ್ರಶ್ನೆಯನ್ನು ಸಭೆಯಲ್ಲಿ ನಿರ್ಣಯಿಸಬೇಕೆಂದು ಅಪೇಕ್ಷಿಸಿದರೆ, ಅಂಥ ಪ್ರಶ್ನೆಯನ್ನು ಆಯೋಗದ ಸಭೆಯಲ್ಲಿ ಪರಿಶೀಲಿಸತಕ್ಕದ್ದು ಮತ್ತು ನಿರ್ಣಯಿಸತಕ್ಕದ್ದು:
ಮತ್ತೂ ಪರಂತು, ಸಾಂದರ್ಭಿಕ ರಜೆಯ ಹೊರತಾಗಿ ಇತರ ರಜೆಯಲ್ಲಿರುವ ಸದಸ್ಯನಿಗೆ ಯಾವುದೇ ಪ್ರಶ್ನೆಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಕಳುಹಿಸಿಕೊಡುವುದು ಅಗತ್ಯವಾಗತಕ್ಕದ್ದಲ್ಲ.