ಸಂವಿಧಾನದ ಮೇರೆಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಮೇರೆಗೆ, ಆಯೋಗದ ಪ್ರಕಾರ್ಯಗಳ ನೆರವೇರಿಕೆಗೆ ಈ ಅಧ್ಯಾಯದ ಉಪಬಂಧಗಳು ಅನ್ವಯವಾಗತಕ್ಕದ್ದು.
ಆಯೋಗದಲ್ಲಿ ಉದ್ಭವಿಸುವ ಎಲ್ಲ ಪ್ರಶ್ನೆಗಳನ್ನು ಆಯೋಗದ ಸದಸ್ಯರ ಸಭೆಯಲ್ಲಾಗಲಿ ಅಥವಾ ಆಯೋಗದ ಸದಸ್ಯರಿಗೆ ಸುತ್ತೋಲೆ ಕಳುಹಿಸುವ ಮೂಲಕವಾಗಲಿ ನಿರ್ಣಯಿಸತಕ್ಕದ್ದು:
ಪರಂತು, ಯಾರೇ ಸದಸ್ಯನು, ಪ್ರಶ್ನೆಯನ್ನು ಸಭೆಯಲ್ಲಿ ನಿರ್ಣಯಿಸಬೇಕೆಂದು ಅಪೇಕ್ಷಿಸಿದರೆ, ಅಂಥ ಪ್ರಶ್ನೆಯನ್ನು ಆಯೋಗದ ಸಭೆಯಲ್ಲಿ ಪರಿಶೀಲಿಸತಕ್ಕದ್ದು ಮತ್ತು ನಿರ್ಣಯಿಸತಕ್ಕದ್ದು:
ಮತ್ತೂ ಪರಂತು, ಸಾಂದರ್ಭಿಕ ರಜೆಯ ಹೊರತಾಗಿ ಇತರ ರಜೆಯಲ್ಲಿರುವ ಸದಸ್ಯನಿಗೆ ಯಾವುದೇ ಪ್ರಶ್ನೆಗೆ ಸಂಬಂಧಪಟ್ಟ ಕಾಗದ ಪತ್ರಗಳನ್ನು ಕಳುಹಿಸಿಕೊಡುವುದು ಅಗತ್ಯವಾಗತಕ್ಕದ್ದಲ್ಲ.
ಅಧ್ಯಕ್ಷನಿಗೆ ಆಯೋಗದ ಸಭೆಯಲ್ಲಿ ಹಾಜರಿರಲು ಸಾಧ್ಯವಾಗದಿದ್ದರೆ, ಹಾಜರಿರುವ ಅತ್ಯಂತ ಹಿರಿಯ ಸದಸ್ಯನು ಅವನ ಪರವಾಗಿ ಕಾರ್ಯನಿರ್ವಹಿಸತಕ್ಕದ್ದು:
ಪರಂತು, ಅಧ್ಯಕ್ಷನು ನಿರ್ದಿಷ್ಟಪಡಿಸಬಹುದಾದಂಥ ಯಾವುದೇ ಪ್ರಕರಣದ ಸಂಬಂಧದಲ್ಲಿ ಅಂಥ ಸಭೆಯಲ್ಲಿ ಕೈಗೊಂಡ ನಿರ್ಣಯದ ಬಗ್ಗೆ ಅವನಿಗೆ ತಿಳಿಸತಕ್ಕದ್ದು; ಮತ್ತು ಹಾಗೆ ಅವನಿಗೆ ತಿಳಿಸಿದ ಮೇಲೆ, ಅಧ್ಯಕ್ಷನು, ತಾನು ಹಾಜರಿರುವ ಆಯೋಗದ ಸಭೆಯಲ್ಲಿ ಯಾವುದೇ ಅಂಥ ನಿರ್ಣಯವನ್ನು ಪುನರ್ಪರಿಶೀಲನೆ ಮಾಡಬೇಕೆಂದು ಅಭಿಪ್ರಾಯಪಟ್ಟರೆ, ಅಂಥ ನಿರ್ಣಯವನ್ನು ತದನುಸಾರವಾಗಿ ಪುನರ್ಪರಿಶೀಲನೆ ಮಾಡತಕ್ಕದ್ದು ಮತ್ತು ಅಂತಹ ಪುನರ್ಪರಿಶೀಲನೆ ಆಗುವವರೆಗೆ, ಅಂತಹ ನಿರ್ಣಯದ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳತಕ್ಕದ್ದಲ್ಲ.
ಆಯೋಗದ ವ್ಯವಹರಣೆಗಳು, ಯಾವುದೇ ಖಾಲಿಸ್ಥಾನದ ಮೂಲಕವಾಗಲಿ ಅಥವಾ ಸದಸ್ಯರ ಗೈರುಹಾಜರಿಯ ಮೂಲಕವಾಗಲಿ ಅಸಿಂಧುವಾಗತಕ್ಕದ್ದಲ್ಲ.
1 9. ಕೋರಂ.-ಆಯೋಗದ ಸಭೆಗೆ1 ಕೋರಂ ಆಗಿರತಕ್ಕದ್ದು. ಆದರೆ, ಯಾವುದೇ ಸಭೆಯ [ನಾಲ್ಕು] ಕಾರ್ಯಕಲಾಪವನ್ನು ಯಾರೇ ಸದಸ್ಯನ ಗೈರುಹಾಜರಿಯ ಕಾರಣ ಸುಗಮವಾಗಿ ನಡೆಸಲು ಸಾಧ್ಯವಿಲ್ಲವೆಂದು ಪ್ರಿಸೈಡಿಂಗ್ ಅಧಿಕಾರಿಯು ಅಭಿಪ್ರಾಯಪಟ್ಟರೆ, ಅವನು ಆ ಕಾರ್ಯಕಲಾಪವನ್ನು ಮುಂದೂಡಬಹುದು.
ಆಯೋಗವು ನಿರ್ದೇಶಿಸಬಹುದಾದಂಥ ರೀತಿಯಲ್ಲಿ ಆಯೋಗದ ಎಲ್ಲ ನಿರ್ಣಯಗಳನ್ನು ಕಾರ್ಯದರ್ಶಿಯು ದಾಖಲಿಸತಕ್ಕದ್ದು. ಆಯೋಗದ ಒಂದು ನಿರ್ಣಯದ ಬಗ್ಗೆ ಭಿನ್ನಾಭಿಪ್ರಾಯ ಹೊಂದಿರುವ ಯಾರೇ ಸದಸ್ಯನು ತನ್ನ ಭಿನ್ನಾಭಿಪ್ರಾಯವನ್ನು ಮತ್ತು ತಾನು ಸೂಕ್ತವೆಂದು ಭಾವಿಸಿದರೆ ಅಂಥ ಭಿನ್ನಾಭಿಪ್ರಾಯಕ್ಕೆ ತನ್ನ ಕಾರಣಗಳನ್ನು ಸಹ ದಾಖಲಿಸಲು ಮುಕ್ತ ಅವಕಾಶ ಹೊಂದಿರತಕ್ಕದ್ದು.
1 ಸಹಿಹಾಕುವುದು.- ಯಾವುದೇ [ಕಾರ್ಯದರ್ಶಿ ಅಥವಾ ಸಹಾಯಕ ಕಾರ್ಯದರ್ಶಿ] 11. ಪತ್ರಗಳಿಗೆ1 ಪ್ರಾಧಿಕಾರವು ಆಯೋಗದೊಂದಿಗೆ ಸಮಾಲೋಚಿಸಬೇಕಾದಾಗಲೆಲ್ಲಾ ಅಥವಾ ಪ್ರಾಧಿಕಾರಕ್ಕೆ ಸಲಹೆ ನೀಡುವ ಅಥವಾ ಪ್ರಾಧಿಕಾರಕ್ಕೆ ಪ್ರಸ್ತಾವಗಳನ್ನು ಕಳುಹಿಸಬೇಕಾದಾಗಲೆಲ್ಲಾ ಆಯೋಗದ ಅಭಿಪ್ರಾಯ 2 ಸಹಿ [ಅಥವಾ ಸಹಾಯಕ ಕಾರ್ಯದರ್ಶಿಯು] ಅಥವಾ ನಿರ್ಣಯವನ್ನು ಕಾರ್ಯದರ್ಶಿಯು2 ಮಾಡಿದ ಒಂದು ಪತ್ರದ ಮೂಲಕ ತಿಳಿಸತಕ್ಕದ್ದು ಮತ್ತು ಅಭಿಪ್ರಾಯ ಮತ್ತು ನಿರ್ಣಯವು ಸರ್ವಾನುಮತದ್ದಾಗಿಲ್ಲದ ಸಂದರ್ಭದಲ್ಲಿ, ಆ ಭಿನ್ನಾಭಿಪ್ರಾಯದ ಸಂಗತಿಯನ್ನು ಅಥವಾ ಅದರ ಕಾರಣಗಳನ್ನು ಆಯೋಗವು ತಿಳಿಸಬೇಕೆಂದು ನಿರ್ದೇಶಿಸಿದ ಹೊರತು ಹಾಗೆ ತಿಳಿಸತಕ್ಕದ್ದಲ್ಲ.