ಎ) ಸರ್ಕಾರದಿಂದ ಬಂದ ಅನುದಾನವನ್ನು ವಿವಿಧ ಮೂಲಗಳಿಂದ ಬಂದ ಸಾಲಗಳು ಮತ್ತು ಮುಂದಿನ ಹಣಕಾಸು ವರ್ಷಕ್ಕಾಗಿ ಕಂದಾಯ ಲೆಕ್ಕ ಮತ್ತು ಬಂಡವಾಳ ಲೆಕ್ಕವನ್ನು ಪ್ರತ್ಯೇಕವಾಗಿಸಿ ಇತರ ವರಮಾನವು ಸೇರಿದಂತೆ ಸ್ವೀಕೃತ ಅಂದಾಜುಗಳು. ಬಿ) ಕಾರ್ಯರೂಪದಲ್ಲಿರುವ ಅಥವಾ ಕಾರ್ಯರೂಪಕ್ಕೆ ತರಬೇಕೆಂದು ಉದ್ದೇಶಿಸಲಾಗಿರುವ ಸ್ಕೀಮುಗಳು ಮತ್ತು ಪರಿಯೋಜನೆಗಳ ಮೇಲಣ ಅಂದಾಜು ವೆಚ್ಚಗಳು ಸಮಿತಿಯ ವೆಚ್ಚಗಳು ಯಾವುದಾದರೂ ಇದ್ದರೆ ಅವು, ಸಿಬ್ಬಂದಿ ವರ್ಗ ಮತ್ತು ಅಧಿಕಾರಿಗಳ ಇತರ ವೇತನಗಳು ಮತ್ತು ಭತ್ಯೆಗಳು, ಸಾದಿಲ್ವಾರುಗಳು, ದಾಸ್ತಾನಿನ ಸಂಗ್ರಹಣೆ ಮುಂದಿನ ಹಣಕಾಸು ವರ್ಷಕ್ಕಾಗಿ ಕಂದಾಯ ಲೆಕ್ಕ ಮತ್ತು ಬಂಡವಾಳ ಲೆಕ್ಕವನ್ನು ಪ್ರತ್ಯೇಕಿಸಿ ಮೋಟಾರು ವಾಹನಗಳೂ ಸೇರಿದಂತೆ ಉಪಕರಣಗಳು ಮತ್ತು ಯಂತ್ರಗಳ ವೆಚ್ಚಗಳು. ಸಿ) ರಾಜ್ಯ ಸರ್ಕಾರವು ಅಗತ್ಯ ಪಡಿಸಬೇಕಾದಂತ ಇತರ ವಿವರಣೆಗಳೂ ಇರತಕ್ಕದ್ದು.
4. ರಾಜ್ಯ ಸರ್ಕಾರವು ತಾನು ಸೂಕ್ತವೆಂದು ಭಾವಿಸಬಹುದಾದಂತ ಮಾರ್ಪಾಟುಗಳೊಂದಿಗೆ ತನಗೆ ಕಳುಹಿಸಲಾದ ವಾರ್ಷಿಕ ಯೋಜನೆ ಆಯವ್ಯಯ ಪತ್ರ ಮತ್ತು ಸಿಬ್ಬಂದಿ ವರ್ಗದ ಪಟ್ಟಿಯನ್ನು ಮಂಜೂರು ಮಾಡಬಹುದು.
7. ಪೂರಕ ಯೋಜನೆ ಮತ್ತು ಆಯವ್ಯಯ ಪತ್ರ:-
- ಮಂಡಳಿಯ ಅಧಿನಿಯಮದ 12 ನೇ ಪ್ರಕರಣದ ಮೇರೆಗೆ ಮಂಜೂರಾದ ವಾರ್ಷಿಕ ಯೋಜನೆಯ ಸಂಬಂಧದಲ್ಲಿ ವರ್ಷದ ಯಾವುದೇ ಕಾಲದಲ್ಲಿ, ಪೂರಕ ಯೋಜನೆ ಮತ್ತು ಆಯವ್ಯಯ ಪತ್ರ ಮತ್ತು ಹೆಚ್ಚಿನ ಸಿಬ್ಬಂದಿ ವರ್ಗದ ಪಟ್ಟಿಯಾವುದಾದರೂ ಇದ್ದರೆ ಅದನ್ನು ಅನುಮೋದನೆಗಾಗಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಬಹುದು.
- ಮಂಡಳಿಯು ಸಂಬಂಧಪಟ್ಟ ಅಭಿವೃದ್ದಿ ಇಲಾಖೆ ಜಿಲ್ಲಾ ಪರಿಷತ್ತುಗಳು ರ್ಕಾನಿರ್ವಾಹಕ ಏಜನ್ಸಿಗಳೊಂದಿಗೆ ಸಮಾಲೋಚಿಸಿ ಯಾವುದೇ ಕಾಲದಲ್ಲಿ ಸರ್ಕಾರದಿಂದ ಮಂಜೂರಾಗಿರುವ ಯೋಜನೆಯಲ್ಲಿ ಸೇರಿರುವ ಯಾವುದೇ ಪರಿಶೋಧನೆ ಅಥವಾ ಸ್ಕೀಮ್ ಅಥವಾ ಅದರ ಯಾವುದೇ ಭಾಗವನ್ನು ಮಾರ್ಪಾಡು ಮಾಡಬಹುದು.
ಪರಂತು, ಅದರ ಕಾರ್ಯಾಚರಣೆಗಾಗಿ ಮೂಲತ: ಮಂಜೂರಾಗಿದ್ದ ಮೊಬಲಗಿಸನ ಶೇಕಡಾ 25 ಕ್ಕಿಂತ ಹೆಚ್ಚು ವೆಚ್ಚವನ್ನು ಒಳಗೊಂಡಿದ್ದರೆ ಅಥವಾ ಯಾವುದೇ ಪರಿಯೋಜನೆ ಅಥವಾ ಅದರ ಯಾವುದೇ ಪರಿಯೋಜನೆ ಅಥವಾ ಸ್ಕೀಮುಗಳ ಮೂಲ ವ್ಯಾಪ್ತಿ ಅಥವಾ ಉದ್ದೇಶವನ್ನು ಬಾಧಿಸುತ್ತಿದ್ದರೆ ಸರ್ಕಾರದ ಪೂರ್ವ ಮಂಜೂರಾತಿಯಲ್ಲದೆ ಅಂಥ ಯಾವುದೇ ಬದಲಾವಣೆಯನ್ನು ಮಾಡತಕ್ಕುದ್ದಲ್ಲ.
- ಮಂಡಳಿಯು ವಾರ್ಷಿಕ ಯೋಜನೆ ಅಥವಾ ಪೂರಕ, ಯೋಜನೆಯಲ್ಲಿ ಸೇರಿಸಿದ್ದ ಹೊರತು ಯಾವುದೇ ಸ್ಕೀಮುಗಳು ಅಥವಾ ಪರಿಯೋಜನೆಯನ್ನು ಮಂಡಳಿಯು ಕಾರ್ಯರೂಪಕ್ಕೆ ತರತಕ್ಕದ್ದಲ್ಲ.
- ಮಂಡಳಿಯು ಯೋಜನೆಯ ಅನುಸಾರವಾಗಿ ತಾನು ಅನುಮೋದಿಸಿದ ಯಾವುದೇ ಪರಿಯೋಜನೆ ಅಥವಾ ಸ್ಕೀಮನ್ನು ಕಾರ್ಯರೂಪಕ್ಕೆ ತರುವುದಕ್ಕೆ ಸಂಬಂಧಪಟ್ಟಂತೆ ಅಲ್ಲದೆ ಲಾಭಕ್ಕಾಗಿ ಯಾವುದೇ ವ್ಯಾಪಾರ ಅಥವಾ ಹಣಕಾಸಿನ ಚಟುವಟಿಕೆಗಳನ್ನು ನಡೆಸಲು ಸಕ್ಷಮವಾಗಿ ತಕ್ಕದಲ್ಲ.
- ಲೆಕ್ಕಪತ್ರಗಳು ಮತ್ತು ಆಯವ್ಯಯ ಪತ್ರದ ಮಂಡನೆ:-
- ಕಾರ್ಯದರ್ಶಿಯವರು ಮುಂದೆ ಬರುವ ಏಪ್ರಿಲ್ ಒಂದನೇ ದಿನಾಂಕದಂದು ಪ್ರಾರಂಭಗೊಳ್ಳುವ ಹಣಕಾಸು ವರ್ಷದ ನಿರೀಕ್ಷಿತ ಸ್ವೀಕೃತಿಗಳು ಮತ್ತು ವೆಚ್ಚಗಳ ಒಂದು ಆಯವ್ಯಯ ಅಂದಾಜಿನೊಂದಿಗೆ ಮುಂದೆ ಬರುವ ಹಣಕಾಸು ವರ್ಷದ ಮಾರ್ಚ್ 31 ನೇ ದಿನಾಂಕದಂದು ಕೊನೆಗೊಳ್ಳುವ ಹಣಕಾಸು ವರ್ಷದ ವಾಸ್ತವಿಕ ಮತ್ತು ನಿರೀಕ್ಷಿತ ಸ್ವೀಕೃತಿಗಳು ಮತ್ತು ವೆಚ್ಚದ ಒಂದು ಪೂರ್ಣ ಲೆಕ್ಕಪತ್ರವನ್ನು ತಯಾರಿಸಿ ನವೆಂಬರ್ 1 ನೇ ದಿನಾಂಕ ಮತ್ತು ಜವರಿ 1 ನೇ ದಿನಾಂಕದ ನಡುವೆ ನಡೆಯುವ ಒಂದು ಸಭೆಯ ಮುಂದೆ ಇಡುವಂತೆ ಮಾಡತಕ್ಕದ್ದು.
- ಅನಂತರ ಮಂಡಳಿಯು ಮುಂದೆ ಬರುವ ಏಪ್ರಿಲ್ 1 ನೇ ದಿನಾಂಕದಂದು ಪ್ರಾರಂಭಗೊಳ್ಳುವ ಹಣಕಾಸು ವರ್ಷದ ಆಯವ್ಯಯದಲ್ಲಿ ಒಳಗೊಂಡಿರುವ ಧನ ವಿನಿಯೋಗಗಳನ್ನು ಮತ್ತು ಮಾರ್ಗೋಪಾಯಗಳನ್ನು ನಿರ್ಧರಿಸತಕ್ಕದ್ದು. ಮಂಡಳಿಯು ಅಂಗೀಕರಿಸಿದಂತೆ ಅಯವ್ಯಯವನ್ನು ಸರ್ಕಾರವು ನಿಗಧಿಪಡಿಸಿರಬಹುದಾದಂಥ ದಿನಾಂಕಕ್ಕೆ ಮುಂಚೆ ಸರ್ಕಾರಕ್ಕೆ ಕಳುಹಿಸತಕ್ಕದ್ದು.