ಎ) ಈ ಅಧಿನಿಯಮದಿಂದ ಅಥವಾ ಇತರ ಯಾವುದೇ ಕಾನೂನಿನಿಂದ ಮಂಡಳಿಯ ಮೇಲೆ ವಿಧಿಸಿದ ಹಲವಾರು ಕರ್ತವ್ಯಗಳನ್ನು ಪೂರೈಸಲು ಅಗತ್ಯವಿರಬಹುದಾದಂಥ ಸೇವೆಗಳಿಗೆ ಸಾಕಷ್ಟು ಮತ್ತು ಸೂಕ್ತ ಉಪ ಬಂಧ ಕಲ್ಪಿಸತಕ್ಕದ್ದು.
ಬಿ) ತಾನು ಒಪ್ಪಂದ ಮಾಡಿಕೊಂಡಿರುವ ಸಾಲಗಳ ಸಂಬಂಧದಲ್ಲಿ ಮಂಡಳಿಯು ಬದ್ಧವಾಗನುದಾದ ಅಸಲು ಮತ್ತು ಅದರ ಮೇಲಿನ ಬಡ್ಡಿಯ ಎಲ್ಲ ಕಂತುಗಳೂ ಬಾಕಿ ಬಿದ್ದಂತೆಲ್ಲ ಸಂದಾಯ ಮಾಡಲು ವ್ಯವಸ್ಥೆ ಮಾಡತಕ್ಕದ್ದು.
ಸಿ) ಸದರಿ ವರ್ಷದ ಅಂತ್ಯದಲ್ಲಿ ಸರ್ಕಾರವು ಆಗಿಂದ್ದಾಗ್ಗೆ ನಿಗಧಿಪಡಿಸಬಹುದಾದಂಥ ವರಮಾನದ ಮೊತ್ತ ಅಥವಾ ವರಮಾನದ ಶೇಕಡಾ ಪ್ರಮಾಣಕ್ಕಿಂತ ಕಡಿಮೆಯಲ್ಲದ ಒಂದು ಬಾಕಿಗೆ ಅವಕಾಶ ನೀಡತಕ್ಕದ್ದು.
ಡಿ) 1) ನೇ ಉಪನಿಯಮದಲ್ಲಿ ಹೇಳಲಾದ ದಿನಾಂಕದಂದು ಅಥವಾ ಅದಕ್ಕೆ ಮುಂಚೆ ಮಂಡಳಿಯು ಆಯವ್ಯಯ ಅಂದಾಜನ್ನು ಅನುಮೋದಿಸಲು ತಪ್ಪಿದರೆ, ಕಾರ್ಯದರ್ಶಿಯವರು ಆಯವ್ಯಯ ಅಂದಾಜನ್ನು ಸರ್ಕಾರಕ್ಕೆ ಕಳುಹಿಸತಕ್ಕದ್ದು, ಸರ್ಕಾರವು ಅದನ್ನು ಮಾರ್ಪಾಟುಗಳೊಂದಿಗೆ ಅಥವಾ ಮಾರ್ಪಾಟುಗಳಿಲ್ಲದೆ ಅನುಮೋದಿಸತಕ್ಕದ್ದು. ಸರ್ಕಾರದಿಂದ ಹಾಗೆ ಅನುಮೋದಿತವಾದ ಆಯವ್ಯಯವನ್ನು ಸರ್ಕಾರವು ಪ್ರಮಾಣಿಕರಿಸತಕ್ಕದ್ದು. ಮತ್ತು ಅನಂತರ ಮಂಡಳಿಯ ಯುಕ್ತವಾಗಿ ಅನುಮೋದಿಸಿದೆಯೆಂದು ಭಾವಿಸತಕ್ಕದ್ದು.
9. ಲೆಕ್ಕ ಪತ್ರಗಳ ನಿರ್ವಹಣೆ ಮತ್ತು ವೆಚ್ಚಗಳ ನಿರ್ಬಂಧಗಳು:
- ವಾರ್ಷಿಕ ಲೆಕ್ಕಗಳೂ ಸೇರಿದಂತೆ ಮಂಡಳಿ ನಿಧಿಯ ಆದಾಯ ಮತ್ತು ವೆಚ್ಚಗಳ ಲೆಕ್ಕ ಪತ್ರಗಳನ್ನು ಸರ್ಕಾರವು ನೀಡುವ ಯಾವುದೇ ನಿರ್ದೇಶನಕ್ಕೊಳಪಟ್ಟು, ಕಾರ್ಯದರ್ಶಿಯವರ ಸಲಹೆಯ ಮೇರೆಗೆ ಹಣಕಾಸು ನಿಯಂತ್ರಣಾಧಿಕಾರಿಯವರು ಅಳವಡಿಸಿದಂಥ ರೀತಿಯಲ್ಲಿ ಮತ್ತು ಅಂಥ ನಮೂನೆಯಲ್ಲಿ ಇಡತಕ್ಕದ್ದು . ಮಾಸಿಕ ಮತ್ತು ವಾರ್ಷಿಕ ಲೆಕ್ಕ ಪತ್ರಗಳನ್ನು ಅನುಬಂಧಿಸಲಾದ ಮಾದರಿ ಪ್ರಪತ್ರದಲ್ಲಿ (ಪ್ರಪತ್ರ ನಂ.4) ತಯಾರಿಸತಕ್ಕುದ್ದು.
- ಮಂಡಳಿ ನಿಧಿಯಿಂದ ವೆಚ್ಚವನ್ನು ಅಧಿನಿಯಮದಲ್ಲಿ ಅನ್ಯಥಾ ವ್ಯಕ್ತವಾಗಿ ಉಪಬಂಧಿಸಲಾಗಿರುವಂತೆ, ಈ ನಿಯಮಗಳ ಮೇರೆಗೆ ನಿಯಮಿಸಲಾದಂಥ ಮಂಜೂರಾತಿಗಳು ಷರತ್ತುಗಳು ಮತ್ತು ಪರಿಮಿತಿಗಳಿಗೆ ಒಳಪಟ್ಟು ವಹಿಸತಕ್ಕದ್ದು. ಈ ನಿಯಮಗಳಿಗೆ ಒಳಪಟ್ಟು ಮಂಡಳಿಯು ಅಂತಹ ವಿಷಯಗಳಿಗೆ ವಿನಿಮಯಗಳ ಮೇರೆಗೆ ಮತ್ತುಷ್ಟು ವ್ಯವಸ್ಥೆ ಮಾಡಬಹುದು.
- ಮಂಡಳಿಯು ಕಾರ್ಯ ಸಾಧ್ಯವಾದಷ್ಟು ಮಟ್ಟಿಗೆ, ಹಣಕಾಸು ವರ್ಷದ ಮುಕ್ತಾಯದ ತರುವಾಯ ನಡೆಯುವ ಮೊದಲನೇ ಸಾಮಾನ್ಯ ಸಭೆಂiiಲ್ಲಿ ಆ ವರ್ಷದ ಲೆಕ್ಕ ಪತ್ರಗಳನ್ನು ಅಂಗೀಕರಿಸತಕ್ಕದ್ದು. ಈ ವಾರ್ಷಿಕ ಲೆಕ್ಕಪತ್ರಗಳನ್ನು ಅಂಗೀಕರಿಸತಕ್ಕದ್ದು. ಈ ವಾರ್ಷಿಕ ಲೆಕ್ಕ ಪತ್ರಗಳನ್ನು ಮೇಲಿನ (1) ನೇ ಉಪನಿಯಮದ ಮೇರೆಗೆ ನಿಯಮಿಸಲಾದ ನಮೂನೆಯಲ್ಲಿ ಮಂಡಳಿಯು ತಯಾರಿಸತಕ್ಕದ್ದು. ಮತ್ತು ಅಂಗೀಕರಿಸತಕ್ಕದ್ದು.
10 . ಲೆಕ್ಕಗಳ ರವಾನೆ:- ಮಂಡಳಿಯು, ತಾನು ಅಂತಿಮವಾಗಿ ವಾರ್ಷಿಕ ಲೆಕ್ಕಪತ್ರಗಳನ್ನು ಅಂಗೀಕರಿಸಿದ ಕೂಡಲೇ ವಾರ್ಷಿಕ ಲೆಕ್ಕಗಳನ್ನು ಸರ್ಕಾರಕ್ಕೆ ರವಾನಿಸತಕ್ಕದ್ದ ಮತ್ತು ರಾಜ್ಯ ಸರ್ಕಾರವು ಆಗಿಂದಾಗ್ಗೆ ನಿರ್ದೇಶಿಸಬಹುದಾದಂತ ಅದಕ್ಕೆ ಸಂಬಂಧಿಸಿದಂತಹ ವಿವರಗಳನ್ನು ಮತ್ತು ಮೋಚರುಗಳನ್ನು ಒದಗಿಸತಕ್ಕದ್ದು.