Section 3ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರ ನೇಮಕಾತಿಗಾಗಿ ಅರ್ಹತೆ
ಅಧ್ಯಕ್ಷರು, ಸಾರ್ವಜನಿಕ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಅನುಭವ ಹೊಂದಿರತಕ್ಕ ವ್ಯಕ್ತಿಯಾಗಿರತಕ್ಕದ್ದು. ವ್ಯವಸ್ಥಾಪಕ ನಿರ್ದೇಶಕನು ಆಡಳಿತದಲ್ಲಿ ಅನುಭವ ಹೊಂದಿರುವ ಮತ್ತು ವಾಣಿಜ್ಯ ವಿಷಯಗಳನ್ನು ವ್ಯವಹರಿಸಲು ಸಮರ್ಥನಾಗಿರುವ ವ್ಯಕ್ತಿಯಾಗಿರತಕ್ಕದ್ದು.