(1) ಈ ಅಧ್ಯಾದೇಶವನ್ನು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಅಧ್ಯಾದೇಶ 2001 ಎಂದು ಕರೆಯತಕ್ಕದ್ದು.
(2) ಇದು ರಾಜ್ಯಸರ್ಕಾರವು ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದ ಅಂಥ [ದಿನಾಂಕದಂದು] ಜಾರಿಗೆ ಬರತಕ್ಕದ್ದು.
ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ ಅಧ್ಯಾದೇಶ, 2001, Social Welfare Department
2001 · PDF page 3
Hover any section to copy its link or text, ask Copilot about it, or bookmark it.
ಈ ಅಧ್ಯಾದೇಶದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
ಕರ್ನಾಟಕ ರಾಜ್ಯ ಪತ್ರದ ಭಾಗ IV-A ವಿಶೇಷ ಪತ್ರಿಕೆ ಸಂಖ್ಯೆ 1923 ದಿನಾಂಕ 27-11-2001, ಅಧಿಸೂಚನೆ ಸಂಖ್ಯೆ ಸಂವ್ಯಶಾಇ 27 ಶಾಸನ 2001, ದಿನಾಂಕ 27-11-2001.
(ಎ) “ಆಯೋಗ” ಎಂದರೆ, 3ನೇ ಪ್ರಕರಣದ ಅಡಿಯಲ್ಲಿ ರಚಿಸಲಾದ ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗ;
(ಬಿ) “ಸದಸ್ಯ” ಎಂದರೆ, ಆಯೋಗದ ಒಬ್ಬ ಸದಸ್ಯ;
(ಸಿ) “ಅನುಸೂಚಿತ ಜಾತಿಗಳು'' ಎಂಬುದು, ಭಾರತ ಸಂವಿಧಾನದ 366ನೇ ಅನುಚ್ಛೇದದ (24)ನೇ ಖಂಡದಲ್ಲಿ ಗೊತ್ತುಪಡಿಸಲಾದ ಅರ್ಥವನ್ನು ಹೊಂದಿರತಕ್ಕದ್ದು;
(ಡಿ) “ಅನುಸೂಚಿತ ಬುಡಕಟ್ಟುಗಳು'' ಎಂಬುದು ಭಾರತ ಸಂವಿಧಾನದ 366ನೇ ಅನುಚ್ಛೇದದ (25)ನೇ ಖಂಡದಲ್ಲಿ ಗೊತ್ತುಪಡಿಸಲಾದ ಅರ್ಥವನ್ನು ಹೊಂದಿರತಕ್ಕದ್ದು.