ಆಯೋಗದ ಪ್ರಕಾರ್ಯಗಳು ಈ ಮುಂದಿನಂತಿರತಕ್ಕದ್ದು, ಎಂದರೆ:-
(ಎ) ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಕಲ್ಯಾಣ ಮತ್ತು ಸಂರಕ್ಷಣೆಗಾಗಿ ಭಾರತ ಸಂವಿಧಾನದಲ್ಲಿ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಅಥವಾ ಸರ್ಕಾರದ ಯಾವುದೇ ಆದೇಶದ ಅಡಿಯಲ್ಲಿ ಉಪಬಂಧಿಸಲಾದ ವಿವಿಧ ರಕ್ಷಾಕ್ರಮಗಳ ಕಾರ್ಯಕ್ಬಮತೆಯನ್ನು ಪರಿಶೋಧಿಸುವುದು ಮತ್ತು ಪರೀಕ್ಷಿಸುವುದು; ಮತ್ತು
(ಬಿ) ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳಿಗೆ ಸೇರಿರುವವರನ್ನು ಅವರ ಹಕ್ಕುಗಳಿಂದ ಮತ್ತು ಸಂರಕ್ಷಣೆಯಿಂದ ವಂಚಿತಗೊಳಿಸಿರುವುದಕ್ಕೆ ಸಂಬಂಧಿಸಿದ ನಿರ್ದಿಷ್ಟ ದೂರುಗಳನ್ನು ವಿಚಾರಿಸುವುದು ಮತ್ತು ಅಂಥ ವಿಷಯದ ಬಗ್ಗೆ ಸೂಕ್ತ ಪ್ರಾಧಿಕಾರಗಳನ್ನು ಸಂಪರ್ಕಿಸುವುದು;
(ಸಿ) ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಸಾಮಾಜಿಕ - ಆರ್ಥಿಕ ಅಭಿವೃದ್ಧಿಯ ಯೋಜನಾ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ಮತ್ತು ಆ ಬಗ್ಗೆ ಸಲಹೆಗಳನ್ನು ನೀಡುವುದು ಮತ್ತು ರಾಜ್ಯದಲ್ಲಿ ಅವರ ಅಭಿವೃದ್ಧಿಯಲ್ಲಾದ ಪ್ರಗತಿಯ ಮೌಲ್ಯನಿರ್ಣಯ ಮಾಡುವುದು;
(ಡಿ) ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಸಂರಕ್ಷಣೆ, ಕಲ್ಕಾಣ ಮತ್ತು ಸಾಮಾಜಿಕ - ಆರ್ಥಿಕ ಅಭಿವೃದ್ಧಿಗಾಗಿ ರಕ್ಷಾಕ್ರಮಗಳನ್ನು ಮತ್ತು ಇತರೆ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಕ್ಕಾಗಿ ರಾಜ್ಯಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಶಿಫಾರಸು ಮಾಡುವುದು ಮತ್ತು ವಾರ್ಷಿಕವಾಗಿ ಮತ್ತು ಆಯೋಗವು ತಾನು ಸೂಕ್ತವೆಂದು ಭಾವಿಸಬಹುದಾದ ಅಂಥ ಇತರೆ ಸಮಯದಲ್ಲಿ ರಾಜ್ಯಸರ್ಕಾರಕ್ಕೆ ವರದಿ ಸಲ್ಲಿಸುವುದು.
(ಇ) ನಿಯಮಿಸಬಹುದಾದಂತೆ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಸಂರಕ್ಷಣೆ, ಕಲ್ಯಾಣ, ಅಭಿವೃದ್ಧಿ ಮತ್ತು ಪ್ರಗತಿಗೆ ಸಂಬಂಧಪಟ್ಟಂತೆ ಅಂಥ ಇತರೆ ಪ್ರಕಾರ್ಯಗಳನ್ನು ನಿರ್ವಹಿಸುವುದು:
ಪರಂತು, ಈ ಪ್ರಕರಣದಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ವಿಷಯದ ಬಗ್ಗೆ, ಭಾರತ ಸಂವಿಧಾನದ 338ನೇ ಅನುಚ್ಛೇದದ ಅಡಿಯಲ್ಲಿ ಸ್ಥಾಪಿಸಲಾದ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ರಾಷ್ಟ್ರೀಯ ಆಯೋಗವು ವ್ಯವಹರಿಸುತ್ತಿದ್ದರೆ, ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ರಾಜ್ಯ ಆಯೋಗವು ಅಂಥ ವಿಷಯದ ಮೇಲೆ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವುದು ನಿಂತುಹೋಗತಕ್ಕದ್ದು.