ಸದರಿ ನಿಯಮಗಳ ನಿಯಮ 6 ರಲ್ಲಿ,-
(i) (1) ನೇ ಉಪ ನಿಯಮದ ಖಂಡ (ಎ) ರಲ್ಲಿ, “200” ಎಂಬ ಅಂಕಿಗಳ ಬದಲಾಗಿ, “300” ಎಂಬ ಅಂಕಿಗಳನ್ನು ಪ್ರತಿಸ್ಥಾಪಿಸತಕ್ಕದ್ದು; ಮತ್ತು
(ii) (2) ನೇ ಉಪ ನಿಯಮದ ಖಂಡ (ಎ) ಮತ್ತು ಖಂಡ (ಬಿ) ರಲ್ಲಿ, “ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರತಕ್ಕದ್ದು” ಎಂಬ ಪದಗಳ ನಂತರ “ವಸ್ತುನಿಷ್ಠ ಬಹು ಆಯ್ಕೆ ಮಾದರಿಯಲ್ಲಿ” ಎಂಬ ಪದಗಳನ್ನು ಸೇರಿಸತಕ್ಕದ್ದು.