(1) ಯಾವ ಯಾವ ಶಾಲೆಗಳಲ್ಲಿ 2015-16ನೇ ಸಾಲಿನಿಂದ ಕನ್ನಡ ಪ್ರಥಮ ಅಥವಾ ದ್ವಿತೀಯ ಭಾಷೆಯ ನ್ನಾಗಿ ಕಲಿಸುವುದನ್ನು ಪ್ರಕರಣ 3(2) ರನ್ವಯ ಪ್ರಾರಂಭಿಸಿರುವುದಿಲ್ಲಮೋ ಅಂಥ ಶಾಲೆಗಳಲ್ಲಿ 2017-18ನೇ ಶೈಕ್ಷಣಿಕ ವರ್ಷದಿಂದ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯ ನ್ನಾಗಿ ಕಲಿಸುವುದನ್ನು ಆರಂಭಿಸತಕ್ಕದ್ದು ಹಾಗೂ 2018-19ನೇಶೈಕ್ಷಣಿಕ ವರ್ಷದಲ್ಲಿ 1ನೇ ಮತ್ತು 2ನೇತರಗತಿಗಳಲ್ಲಿ ಹಾಗೂ ಇದೇ ರೀತಿ 10ನೇ ತರಗತಿಯವರೆಗೆ ಕೆಳಕಂಡಂತೆ ಕನ್ನಡ ಭಾಷಾ ಕಲಿ ಕೆಯನ್ನು ಹಂತಹಂತವಾಗಿ ವಿಸ್ತರಿಸತಕ್ಕದ್ದು.
| ಶೈಕ್ಷಣಿಕ ವರ್ಷ | ತರಗತಿ |
| 2017-18 | 1ನೇ ತರಗತಿ |
| 2018-19 | 1 ಮತ್ತು 2ನೇ ತರಗತಿ |
| 2019-20 | 1, 2 ಮತ್ತು 3ನೇ ತರಗತಿ |
| 2020-21 | 1, 2, 3 ಮತ್ತು 4ನೇ ತರಗತಿ |
| 2021-22 | 1, 2, 3, 4 ಮತ್ತು 5ನೇ ತರಗತಿ |
| 2022-23 | 1, 2, 3, 4, 5 ಮತ್ತು 6ನೇತರಗತಿ |
| 2023-24 | 1, 2, 3, 4, 5, 6 ಮತ್ತು 7ನೇ ತರಗತಿ |
| 2024-25 | 1, 2, 3, 4, 5, 6, 7 ಮತ್ತು 8ನೇತರಗತಿ |
| 2025-26 | 1, 2, 3, 4, 5, 6, 7, 8 ಮತ್ತು 9ನೇತರಗತಿ |
| 2026-27 | 1, 2, 3, 4, 5, 6, 7, 8, 9 ಮತ್ತು 10ನೇ ತರಗತಿ |
(2). ಯಾವ ಶಾಲೆಯಲ್ಲಿ ಪ್ರಾರಂಭಿಕ ತರಗತಿಯು 1ನೇ ತರಗತಿಯಾಗಿರುವುದಿಲ್ಲಮೊ ಅಂತಹ ಶಾಲೆಯಲ್ಲಿನ ಪ್ರಾರಂಭಿಕ ತರಗತಿಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಮೇಲಿನ ಕೋಷ್ಠಕದಲ್ಲಿ ತಿಳಿಸಿರುವ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸತಕ್ಕದ್ದು.