ಎಲ್ಲಾ ಶಾಲೆಗಳಲ್ಲಿ ಕನ್ನಡ ಭಾಷಾ ಕಲಿಕೆಯನ್ನು ಕಡ್ಡಾಯವಾಗಿ ಜಾರಿಗೊಳಿಸಲು ಹಾಗೂ ಕನ್ನಡ ಭಾಷಾ ಕಲಿ ಕೆ ಅನುಷ್ಠಾನ ಮಾಡಿರುವ ಬಗ್ಗೆ ಮೇಲ್ವಿಚಾರಣೆ ನಡೆಸಿ ಜಾರಿಗೊಳಿಸದ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳ ಲು ಸರ್ಕಾರದ ಅಧಿಸೂಚನೆ ಸಂ ಖ್ಯೆ:ಇಡಿ 240 ಪಿಜಿಸಿ 2017, ದಿನಾಂಕ:10-05-2017 ರಲ್ಲಿ ನೇಮಿಸಲಾದ ಅಧಿಕಾರಿಗಳು ಅವರವರ ವ್ಯಾಪ್ತಿಯಲ್ಲಿ ಬರುವ ಶಾಲೆಗಳಿಗೆ ಸಕ್ಷಮ ಪ್ರಾಧಿಕಾರಿಯಾಗಿರತಕ್ಕದ್ದು.
ಶೈಕ್ಷಣಿಕ ಜಿಲ್ಲೆಗಳ ವ್ಯಾಪ್ತಿಯ ಲ್ಲಿ ಬರುವ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ 6. ಸಕ್ಷಮ ಪ್ರಾಧಿಕಾರಿಯ ಕರ್ತ ವ್ಯಗಳು.- (1) ತಮ್ಮ ಚಾಲ್ತಿಯಲ್ಲಿರುವ ಎಲ್ಲಾ ಮಾಧ್ಯಮದ ಶಾಲೆಗಳನ್ನು ಗುರ್ತಿಸಿಕೊಂಡಿರತಕ್ಕದ್ದು;
(2) ಎಲ್ಲಾ ಶಾಲೆಗಳಲ್ಲಿ ಕನ್ನಡ ಭಾಷಾ ಕಲಿಕೆ ಕಡ್ಡಾಯವಾಗಿ ಜಾರಿಗೊಳಿಸಲು ಅಗತ್ಯವಾದ ಕ್ರಮವಹಿಸತಕ್ಕದ್ದು. ಈ ಸಂಬಂಧ ಅಗತ್ಯ ಸುತ್ತೋಲೆ ಮತ್ತು ಮಾರ್ಗಸೂ ಚಿಗಳನ್ನು ಸಕ್ಷಮ ಪ್ರಾಧಿಕಾರಿಗಳು ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ತಮ್ಮ ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಹೊರಡಿಸತಕ್ಕದ್ದು;
(3) ಪ್ರತಿ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿಯೇ ಪ್ರತಿ ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲೆಗಳಲ್ಲಿ ಕನ್ನಡ ಭಾಷಾ ಕಲಿಕೆ ಜಾರಿಗೊಳಿಸಿರುವ ಬಗ್ಗೆ ಶಾಲಾವಾರು ವರದಿಯನ್ನು ಕ್ರೋಢೀಕರಿಸಿ ದಾಖಲಿಸತಕ್ಕದ್ದು ಹಾಗೂ ಜಾರಿಗೊಳಿಸಿರುವ ಬಗ್ಗೆ ಶಾಲಾವಾರು ವರದಿಯನ್ನು ಕ್ರೋಢೀಕರಿಸಿ ದಾಖಲಿಸತಕ್ಕದ್ದು ಹಾಗೂ ಪಾಲಿಸಿರುವ ಮತ್ತು ಪಾಲಿಸದೇ ಇರುವ ಶಾಲೆಗಳ ಮಾಹಿತಿಯನ್ನು (ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಾಹಿತಿಗಳನ್ನು) ಪ್ರತ್ಯೇಕವಾಗಿ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಿಗಳಿಗೆ ಉಪನಿರ್ದೇಶಕರ ಮುಖಾಂತರ ಸಲ್ಲಿಸತಕ್ಕದ್ದು;
(4) ಈ ನಿಯಮಗಳನ್ನು ಜಾರಿಗೊಳಿಸದೇ ಇರುವ ಶಾಲೆಗಳ ವಿರುದ್ಧ ಹಾಗೂ ಈ ಕುರಿತು ಯಾವುದೇ ದೂರುಗಳು ಬಂದಲ್ಲಿ ಸಕ್ಷಮ ಪ್ರಾಧಿಕಾರಿಯು ಈ ಬಗ್ಗೆ ಅಧಿನಿಯಮದ 6ನೇ ಪ್ರಕರಣದ (1)ನೇ ಉಪ-ಪ್ರಕರಣದಂತೆ ವಿಚಾರಣೆ ನಡೆಸತಕ್ಕದ್ದು.
(5) ಸಕ್ಷಮ ಪ್ರಾಧಿಕಾರಿಯು ಈ ಸಂಬಂಧ ವಿಚಾರಣೆ ನಡೆಸು ವ ಮುನ್ನಾ ಶಾಲೆಗೆ ಭೇಟಿ ನೀಡಲು, ಅಗತ್ಯ ದಾಖಲೆಗಳನ್ನು ಪರಿಶೀಲಿಸಲು, ನೋಟಿಸ್ ಜಾರಿಮಾಡಲು ಅಥವಾ ಅಗತ್ಯ ಕ್ರಮವಹಿಸತಕ್ಕದ್ದು.
(6) ಈ ವಿಚಾರಣೆಯ ನ್ನು ಸಕ್ಷಮ ಪ್ರಾಧಿಕಾರಿಯು ನೋಟೀಸ್ ಜಾರಿಮಾಡಿದ ದಿನದಿ ಂದ ಮೂವತ್ತು ದಿನಗೊಳಗಾಗಿ ಆರೋಪ ಸಾಬೀತಾದರೆ ಅಂತಹ ಶಾಲೆಗಳು ಕನ್ನಡ ಭಾಷಾ ನಡೆಸುವುದು. ಒಂದು ವೇಳೆ ವಿಚಾರಣೆಯ ನಂತರ ಶಾಲೆಗಳ ವಿರುದ್ಧ ಕಲಿಕೆ ಅಧಿನಿಯಮ 2015ರ, ಕರ್ನಾಟಕ ಶಿಕ್ಷಣ ಅಧಿನಿಯಮ, 1983ರ 7ನೇಪ್ರಕರಣ ಹಾಗೂ ಈ ನಿಯಮಗಳ 4ನೇ ನಿಯಮದ ಉಲ್ಲಂಘನೆ ಮಾಡಿದಂತಾಗುತ್ತದೆ. ಅಂತಹ ಶಾಲೆಗಳಿಗೆ ಕರ್ನಾಟಕ ಶಿಕ್ಷಣ ಅಧಿನಿಯಮ, 1983ರ 128ನೇ ಪ್ರಕರಣದಲ್ಲಿ ತಿಳಿಸಿದಂತೆ ದಂಡವನ್ನು ವಿಧಿಸಲು ಸಕ್ಷಮ ಪ್ರಾಧಿಕಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ; ಮತ್ತು
(7) ಸಕ್ಷಮ ಪ್ರಾಧಿಕಾರಿಯು ಪ್ರತಿ ಶಾಲೆಯಲ್ಲಿ ಸರ್ಕಾರ ನಿಗಧಿಪಡಿಸಿರುವ ಪ್ರಥಮ ಮತ್ತು ದ್ವಿತೀಯ ಭಾ ಷೆಯ ಕನ್ನಡ ಪಠ್ಯಪುಸ್ತಕಗಳನ್ನು ಬಳಸಿ ಕನ್ನಡ ಭಾಷೆ ಕಲಿಕೆ ಕಡ್ಡಾಯವಾಗಿ ಜಾರಿಯಲ್ಲಿರುವ ಬಗ್ಗೆ ಹಾಗೂ ಪಠ್ಯಪುಸ್ತಕಗಳ ಲಭ್ಯತೆಯ ಬಗ್ಗೆ ನಿಯಮದ ಚೌಕಟ್ಟಿನಲ್ಲಿ ಖಾತ್ರಿ ಮಾಡಿಕೊಳ್ಳ ತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ವಿ.ನಾಗೇಶ ರಾವ್ ಸರ್ಕಾರದ ಅಧೀನ ಕಾರ್ಯದರ್ಶಿ ಶಿಕ್ಷಣ ಇಲಾಖೆ (ಪ್ರಾಥಮಿಕ)