ಬಂಧಪತ್ರಗಳು, ಡಿಬೆಂಚರುಗಳು ಮತ್ತು ಇತರ ಭದ್ರತಾ ಪತ್ರಗಳ ರಿಜಿಸ್ಟರುಗಳನ್ನು ಮಂಡಳಿಯು ಇಡತಕ್ಕದ್ದು. ಅದರಲ್ಲಿ, ಪ್ರತಿಯೊಂದು ಅಂಥ ಬಂಧಪತ್ರದ, ಡಿಬೆಂಚರಿನ ಅಥವಾ ಇತರ ಭದ್ರತಾ ಪತ್ರಗಳ ಸಂಖ್ಯೆ ಮತ್ತು ದಿನಾಂಕವನ್ನು ಮತ್ತು ಆ ಮೂಲಕ ಭದ್ರತೆ ಒದಗಿಸಲಾದ ಮೊತ್ತವನ್ನು ಮತ್ತು ಅವುಗಳ ಪಕ್ಷಕಾರರ ಹೆಸರುಗಳನ್ನು ಮತ್ತು ಅವರ ವಿಳಾಸಗಳನ್ನು ಮತ್ತು ಅದಕ್ಕೆ ಸಂಬಂಧಿಸಿದ ಎಲ್ಲ ಇತರ ಅಗತ್ಯ ವಿವರಗಳನ್ನು ನಮೂದಿಸತಕ್ಕದ್ದು.