(1) ವಾರ್ಷಿಕ ಹಣಕಾಸು ವಿವರಪತ್ರವು ನಮೂನೆ 1 ರಲ್ಲಿರತಕ್ಕದ್ದು ಹಾಗೂ ಕಾಮಗಾರಿ ಯೋಜನೆಯ ವಿವರಣೆಯು ನಮೂನೆ 2 ರಲ್ಲಿರತಕ್ಕದ್ದು.
(2) ಮಂಡಳಿಯು, ತನ್ನ ಕಾಮಗಾರಿ ಯೋಜನೆಯ ಜೊತೆಗೆ ಮುಂದುವರಿಸಿದ ಯೋಜನೆಗಳ ಸಂಬಂಧದಲ್ಲಿ ಹಿಂದಿನ ವರ್ಷಗಳಲ್ಲಿ ಸಾಧಿಸಿದ ಪ್ರಗತಿ, ಮಾಡಲಾಗಿರುವ ವೆಚ್ಚ ಮತ್ತು ಪ್ರಾಪ್ತವಾದ ಮೊತ್ತ ಇವುಗಳ ಜೊತೆಗೆ ಪ್ರತಿಯೊಂದು ಯೋಜನೆಯ ಇತಿವೃತ್ತ ಮತ್ತು ವಿವರಗಳನ್ನು ನೀಡುವ ಒಂದು ಟಿಪ್ಪಣಿಯನ್ನು ಸಹ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡತಕ್ಕದ್ದು. ಆ ಟಿಪ್ಪಣಿಯು, ವಿಶೇಷವಾಗಿ ಪ್ರತಿಯೊಂದು ಯೋಜನೆಯ ಆರ್ಥಿಕ ಪರಿಣಾಮಗಳನ್ನು ನಿರೂಪಿಸತಕ್ಕದ್ದು.