ಮಂಡಳಿಯು ಹಣವನ್ನು ಸಂಗ್ರಹಿಸುವುದಕ್ಕಾಗಿ ಅಥವಾ ಅದು ಎರವಲು ಪಡೆದ ಅಥವಾ ಅದರಿಂದ ಬಾಕಿಯಿರುವ ಹಣಕ್ಕೆ ಭದ್ರತೆ ಒದಗಿಸುವುದಕ್ಕಾಗಿ ಮಂಡಳಿಯು ನೀಡಿದ ಪ್ರತಿಯೊಂದು ಬಂಧಪತ್ರ, ಬಾಧ್ಯತೆ, ಡಿಬೆಂಚರ್ ಅಥವಾ ಇತರ ಭದ್ರತಾ ಪತ್ರವು ಮಂಡಳಿಯ ಸಾಮಾನ್ಯ ಮೊಹರು ಹಾಕಿರುವ ಮತ್ತು ಕಾರ್ಯನಿರ್ವಾಹಕ ಸದಸ್ಯನು ಅಥವಾ ಈ ಸಂಬಂಧವಾಗಿ ಮಂಡಳಿಯಿಂದ ಪ್ರಾಧಿಕೃತನಾದ ಯಾರೇ ಇತರ ಅಧಿಕಾರಿಯು ತಾನೇ ಸಹಿ ಮಾಡಿರುವ ಒಂದು ಪತ್ರವಾಗಿರತಕ್ಕದ್ದು.