- ಸಂಬಂಧಪಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಕಂದಾಯ ಗ್ರಾಮಗಳು, ಉಪ ಗ್ರಾಮಗಳು ಮತ್ತು ಜನವಸತಿ ಪ್ರದೇಶಗಳಲ್ಲಿ 6300, 6300 ಮೂಲಕ ಪ್ರಚಾರ ಮಾಡುವುದು. ಗ್ರಾಮ ಸಭೆ ಮಾಹಿತಿಯನ್ನು ಪ್ರಚುರಪಡಿಸಲು ಒಂದು ಮಾದರಿ ಕರಪತ್ರವನ್ನು ಹೊರಡಿಸಬೇಕು.
ಗ್ರಾಮ ಸಭೆಯ ಕರಪತ್ರ / ನೋಟೀಸ್ಗಳನ್ನು ಜನಸಾಮಾನ್ಯರಿಗೆ ಗೊತ್ತಾಗುವಂತೆ ಆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಂದಾಯ ಗ್ರಾಮಗಳ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸುವುದು.
ಗ್ರಾಮ ಸಭೆಯ ಕರಪತ್ರ / ನೋಟೀಸ್ಗಳನ್ನು ಗ್ರಾಮ ಪಂಚಾಯತಿಯ ಗ್ರಂಥಾಲಯಗಳಲ್ಲಿ ಸಾರ್ವಜನಿಕರಿಗೆ ವೀಕ್ಷಣೆಗೆ ಲಭ್ಯವಾಗುವಂತೆ ಕ್ರಮ ವಹಿಸುವುದು.
ಗ್ರಾಮ ಸಭೆಯ ಕರಪತ್ರ / ನೋಟೀಸ್ ಅನ್ನು ಮನೆ ಮನೆಗೂ ತಲುಪಿಸುವುದು ಹಾಗೂ ಸಹಿ ಪಡೆಯತಕ್ಕದ್ದು. ಗ್ರಾಮ ಸಭೆಯ ಕರಪತ್ರ / ನೋಟಿಸುಗಳನ್ನು ಗ್ರಾಮ ಪಂಚಾಯತಿಯ ಗ್ರಂಥಾಲಯದ ನೋಟೀಸ್ ಬೋರ್ಡ್, ಗ್ರಾಮದ ಸಾರ್ವಜನಿಕ ಸ್ಥಳಗಳಲ್ಲಿ ಗ್ರಾಮ ಪಂಚಾಯತಿಯಿಂದ ನೋಟೀಸ್ ಬೋರ್ಡ್ ಅನ್ನು ಸಿದ್ದಪಡಿಸಿ, ಅದರಲ್ಲಿ ಪ್ರದರ್ಶಿಸಲು ಕ್ರಮ ವಹಿಸುವುದು ಹಾಗೂ ಗ್ರಾಮದ ಅಂಗನವಾಡಿ, ಶಾಲೆ, ಹಾಲು ಉತ್ಪಾದಕರ ಸಂಘ ಮತ್ತು ಸ್ವ-ಸಹಾಯ ಮಹಿಳಾ ಸಂಘಗಳ ನೋಟೀಸ್ ಬೋರ್ಡ್ನಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವಂತೆ ಪ್ರದರ್ಶಿಸುವುದು ಮತ್ತು ಮೈಕ್ ಮುಖಾಂತರ ಪ್ರಚಾರ ಮಾಡತಕ್ಕದ್ದು. 6. ಗ್ರಾಮ ಸಭೆಯ ಕರಪತ್ರ ಮತ್ತು ನೋಟೀಸ್ಗಳನ್ನು ಗ್ರಾಮ ಪಂಚಾಯತಿಯ ಪಬ್ಲಿಕ್ ಪೋರ್ಟಲ್ಗಳಾದ ಪಂಚಮಿತ್ರ ಮತ್ತು ಪಂಚತಂತ್ರ ತಂತ್ರಾಂಶದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗುವಂತೆ ಅನುವು ಮಾಡುವುದು ಹಾಗೂ ಗ್ರಾಮ ಸಭೆಯ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸುವುದು. 7. ಗ್ರಾಮ ಸಭೆಯ ಮಾಹಿತಿಯನ್ನು ದೂರದರ್ಶನದ ಪ್ರಾದೇಶಿಕ ಚಾನೆಲ್ಗಳಲ್ಲಿ, ಕೇಬಲ್ ಟಿ.ವಿ. ರೇಡಿಯೋ ಹಾಗೂ ವಾರ್ತಾ ಪತ್ರಿಕೆಗಳಲ್ಲಿ ಪ್ರಸಾರದ ಮೂಲಕ ತಿಳಿಸುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚುರಪಡಿಸುವುದು. 8. ಗ್ರಾಮ ಸಭೆಯ ಕರಪತ್ರ/ನೋಟಿಸ್ನಲ್ಲಿ ಸಭೆಯ ದಿನಾಂಕ, ಸ್ಮಳ, ವೇಳೆ, ಅಧ್ಯಕ್ಷತೆ, ಮತ್ತು ಸಭೆಯಲ್ಲಿ ಚರ್ಚಿಸಲಾಗುವ ವಿಷಯಗಳ (ಅಜಿಂಡಾ) ಪಟ್ಟಿಯನ್ನು ಕಡ್ನಾಯವಾಗಿ ನಮೂದಿಸುವುದು. ಗ್ರಾಮ ಸಭೆಯ ಕರಪತ್ರದಲ್ಲಿನ ಅಜಿಂಡಾದಲ್ಲಿ ನಮೂದಿಸಲಾಗುವ ಪ್ರತಿ ವಿಷಯದ ಬಗ್ಗೆ ಮಾಹಿತಿಯನ್ನು ಕಿರು ಟಿಪ್ಪಣಿ ರೀತಿ ನೀಡಿದ್ದಲ್ಲಿ, ಗ್ರಾಮ ಸಭೆಯಲ್ಲಿ ಭಾಗವಹಿಸುವ ಸದಸ್ಯರಿಗೆ ಚರ್ಚಿಸಬೇಕಾದ ವಿಷಯದ ಮಾಹಿತಿ ಲಭ್ಯವಾಗುತ್ತದೆ. 9. ಗ್ರಾಮ ಸಭೆಯ ಕರಪತ್ರಗಳನ್ನು ಗ್ರಾಮ ಪಂಚಾಯತಿಯ ಸದಸ್ಯರು ಹಾಗೂ ವಿವಿಧ ಸಮಿತಿ ಸಭೆಯ ಅಧ್ಯಕ್ಷರಿಗೆ ಹಾಗೂ ಸಂಘದ ಪ್ರತಿನಿಧಿಗಳಿಗೆ ಆಹ್ವಾನ ಪತ್ರದೊಂದಿಗೆ ನೀಡುವುದರ ಮೂಲಕ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮತ್ತು ಸಾರ್ವಜನಿಕರು ಹೆಚ್ಚು ಸಂಖ್ಯೆಯಲ್ಲಿ ಪಾಲ್ಕೊಳ್ಳುವಂತೆ ನೋಡಿಕೊಳ್ಳುವುದು ಹಾಗೂ ಜವಾಬ್ದಾರಿಯನ್ನು ಜನಪ್ರತಿನಿಧಿಗಳಿಗೂ ವಹಿಸಬಹುದಾಗರುತ್ತದೆ. 10. ಗ್ರಾಮ ಸಭೆಯು ಶಾಸನಬದ್ಧವಾದ ಸಭೆಯಾಗಿದ್ದು, ಸಾರ್ವಜನಿಕ ಕಾರ್ಯಕ್ರಮವಾಗಿರುವುದಿಲ್ಲ. ಆದ್ದರಿಂದ ಕರಪತ್ರಗಳಲ್ಲಿ ಕೇವಲ ಗ್ರಾಮ ಸಭೆಯ ಮಾಹಿತಿ ಮಾತ್ರ ಇರತಕ್ಕದ್ದು. ಯಾವುದೇ ಹೆಸರುಗಳನ್ನು ಸೇರಿಸಲು ಅವಕಾಶವಿರುವುದಿಲ್ಲ.