(1) ಈ ಅಧ್ಯಾದೇಶವನ್ನು ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ (ತಿದ್ದುಪಡಿ) ಅಧ್ಯಾದೇಶ, 2023 ಎಂದು ಕರೆಯತಕ್ಕದ್ದು.
(2) ಈ ಅಧ್ಯಾದೇಶದ ಉಪಬಂಧಗಳು ರಾಜ್ಯ ಸರ್ಕಾರವು ಸರ್ಕಾರಿ ರಾಜ್ಯಪತ್ರದಲ್ಲಿ ಅಧಿಸೂಚನೆಯ ಮೂಲಕ ಗೊತ್ತುಪಡಿಸಬಹುದಾದಂಥ ದಿನಾಂಕದಂದು ಜಾರಿಗೆ ಬರತಕ್ಕದ್ದು.
ಪರಂತು, ಈ ಅಧ್ಯಾದೇಶದ ಬೇರೆ ಬೇರೆ ಉಪಬಂಧಗಳಿಗೆ ಬೇರೆ ಬೇರೆ ದಿನಾಂಕಗಳನ್ನು ಗೊತ್ತುಪಡಿಸಬಹುದು ಮತ್ತು ಈ ಅಧ್ಯಾದೇಶದ ಪ್ರಾರಂಭಕ್ಕೆ ಸಂಬಂಧಿಸಿದ ಯಾವುದೇ ಅಂಥ ಉಪಬಂಧದಲ್ಲಿನ ಯಾವುದೇ ಉಲ್ಲೇಖವನ್ನು ಆ ಉಪಬಂಧ ಜಾರಿಗೆ ಬರುವುದಕ್ಕೆ ಸಂಬಂಧಿಸಿದ ಉಲ್ಲೇಖವೆಂಬುದಾಗಿ ಅರ್ಥೈಸತಕ್ಕದ್ದು.