ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ಅಧಿನಿಯಮ, 2017 (ಇದರಲ್ಲಿ ಇನ್ನುಮುಂದೆ “ಮೂಲ ಅಧಿನಿಯಮ” ಎಂದು ಉಲ್ಲೇಖಿಸಲಾಗಿದೆ)ರ ಪ್ರಕರಣ 2ರಲ್ಲಿ,-
(ಎ) ಖಂಡ (80)ರ ನಂತರ, ಈ ಕೆಳಕಂಡ ಖಂಡಗಳನ್ನು ಸೇರಿಸತಕ್ಕದ್ದು, ಎಂದರೆ:-
80ಎ) “ಆನ್ಲೈನ್ ಗೇಮಿಂಗ್” ಎಂದರೆ, ಅಂತರ್ಜಾಲದಲ್ಲಿ ಅಥವಾ ವಿದ್ಯುನ್ಮಾನ ಸಂಪರ್ಕಜಾಲದಲ್ಲಿ ಆಟವನ್ನಾಡಲು ಆಹ್ವಾನಿಸುವುದು ಹಾಗೂ ಇದು ಆನ್ಲೈನ್ ಮನಿ ಗೇಮಿಂಗ್ ಅನ್ನು ಒಳಗೊಳ್ಳುತ್ತದೆ;
(80ಬಿ) “ಆನ್ಲೈನ್ ಮನಿ ಗೇಮಿಂಗ್” ಎಂದರೆ, ಆಟಗಾರರು ಆಟ, ಸ್ಕೀಮು, ಸ್ಪರ್ಧೆ ಅಥವಾ ಯಾವುದೇ ಇತರೆ ಚಟುವಟಿಕೆ ಅಥವಾ ಪ್ರಕ್ರಿಯೆಯನ್ನು ಒಳಗೊಂಡಿರುವ ಯಾವುದೇ ಸಂಗತಿಯಲ್ಲಿ ಅದರ ಫಲಿತಾಂಶ ಅಥವಾ ಕಾರ್ಯಕ್ಷಮತೆಯು ಕೌಶಲ್ಯ ಅವಕಾಶ ಅಥವಾ ಎರಡನ್ನೂ ಆಧರಿಸಿರಲಿ ಅಥವಾ ಇಲ್ಲದಿರಲಿ ಮತ್ತು ಅದು ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನ ಅಡಿಯಲ್ಲಿ ಅಂಗೀಕಾರಾರ್ಹವಾಗಿರಲಿ ಅಥವಾ ಅನ್ಯಥಾವಾಗಿರಲಿ, ವರ್ಚುಯಲ್ ಡಿಜಿಟಲ್ ಆಸ್ತಿಯನ್ನು ಒಳಗೊಂಡು ಹಣ ಅಥವಾ ಹಣದ ಮೌಲ್ಯವನ್ನು ಗೆಲ್ಲುವ ನಿರೀಕ್ಷೆಯಲ್ಲಿ ವರ್ಚುಯಲ್ ಡಿಜಿಟಲ್ ಆಸ್ತಿಯನ್ನು ಒಳಗೊಂಡಂತೆ ಹಣ ಅಥವಾ ಹಣದ ಮೌಲ್ಯವನ್ನು ಪಾವತಿಸಿ ಅಥವಾ ಠೇವಣಿ ಮಾಡಿ ಆಡುವ ಆನ್ಲೈನ್ ಆಟ;"
(ಬಿ) ಖಂಡ (102)ರ ತರುವಾಯ, ಈ ಕೆಳಕಂಡ ಖಂಡವನ್ನು ಸೇರಿಸತಕ್ಕದ್ದು, ಎಂದರೆ:-
“(102ಎ) “ನಿರ್ದಿಷ್ಟಪಡಿಸಿದ ಕ್ರಮಾರ್ಹ ಕ್ಲೇಮು” ಎಂದರೆ:--
(i) ಬೆಟ್ಟಿಂಗ್;
(ii) ಕ್ಯಾಸಿನೊಗಳು;
(iii) ಜೂಜು;
(iv) ಕುದುರೆ ರೇಸಿಂಗ್;
(v) ಲಾಟರಿ; ಅಥವಾ
(vi) ಆನ್ಲೈನ್ ಮನಿ ಗೇಮಿಂಗ್, -ಇವುಗಳಲ್ಲಿ ಒಳಗೊಂಡಿರುವ ಅಥವಾ ಅವುಗಳ ರೂಪದಲ್ಲಿರುವ ಕ್ರಮಾರ್ಹ ಕ್ಲೇಮು ;”
(ಸಿ) ಖಂಡ (105) ರ ತರುವಾಯ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
“ಪರಂತು, ನಿರ್ದಿಷ್ಟಪಡಿಸಿದ ಕ್ರಮಾರ್ಹ ಕ್ಲೇಮುಗಳ ಪೂರೈಕೆಗಾಗಿ ಡಿಜಿಟಲ್ ಅಥವಾ ವಿದ್ಯುನ್ಮಾನ ವೇದಿಕೆಯನ್ನು ಹೊಂದಿರುವ, ಪ್ರವರ್ತಿಸುವ ಅಥವಾ ನಿರ್ವಹಿಸುವ ವ್ಯಕ್ತಿಯೂ ಸೇರಿದಂತೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಅಂಥ ಕ್ರಮಾರ್ಹ ಕ್ಲೇಮುಗಳ ಪೂರೈಕೆಯನ್ನು ಆಯೋಜಿಸುವ ಅಥವಾ ವ್ಯವಸ್ಥೆ ಮಾಡುವ, ಅಂಥ ಕ್ರಮಾರ್ಹ ಕ್ಲೇಮುಗಳು ಅವನಿಂದಾಗಲಿ ಅಥವಾ ಅವನ ಮೂಲಕವಾಗಲಿ ಪೂರೈಸಿರಲಿ ಮತ್ತು ಅಂಥ ಕ್ರಮಾರ್ಹ ಕ್ಲೇಮುಗಳ ಪೂರೈಕೆಗಾಗಿ ವರ್ಚುಯಲ್ ಡಿಜಿಟಲ್ ಆಸ್ತಿಯನ್ನು ಒಳಗೊಂಡಂತೆ, ಹಣ ಅಥವಾ ಹಣದ ಮೌಲ್ಯದ ಪ್ರತಿಫಲವನ್ನು ಯಾವುದೇ ರೀತಿಯಲ್ಲಿ ಆತನಿಗೆ ಸಂದಾಯ ಮಾಡಿರಲಿ ಅಥವಾ ಆತನಿಗೆ ಅಥವಾ ಆತನ ಮೂಲಕ ತಲುಪಿಸಿರಲಿ ಅಥವಾ ಆತನ ವಿಲೇವಾರಿಯಲ್ಲಿ ಇರಿಸಿರಲಿ, ಅಂಥ ವ್ಯಕ್ತಿಯನ್ನು ಕ್ರಮಾರ್ಹ ಕ್ಲೇಮುಗಳ ಪೂರೈಕೆದಾರನೆಂದು ಭಾವಿಸತಕ್ಕದ್ದು ಮತ್ತು ನಿರ್ದಿಷ್ಟಪಡಿಸಿದ ಕ್ರಮಾರ್ಹ ಕ್ಲೇಮುಗಳ ಅಂಥ ಪೂರೈಕೆದಾರನು ಅಂಥ ಕ್ರಮಾರ್ಹ ಕ್ಲೇಮುಗಳಿಗೆ ಸಂಬಂಧಿಸಿದಂತೆ ತೆರಿಗೆ ಸಂದಾಯ ಮಾಡುವುದಕ್ಕೆ ಹೊಣೆಗಾರನಾಗಿರುವ ಪೂರೈಕೆದಾರನಾಗಿದ್ದರೆ ಹೇಗೋ ಹಾಗೆ, ಈ ಅಧ್ಯಾದೇಶದ ಎಲ್ಲಾ ಉಪಬಂಧಗಳು ಆತನಿಗೆ ಅನ್ವಯಿಸತಕ್ಕದ್ದು;
(ಡಿ) ಖಂಡ (117)ರ ತರುವಾಯ, ಈ ಕೆಳಕಂಡ ಖಂಡವನ್ನು ಸೇರಿಸತಕ್ಕದ್ದು, ಎಂದರೆ:-
117ಎ) “ವರ್ಚುಯಲ್ ಡಿಜಿಟಲ್ ಆಸ್ತಿ” ಎಂದರೆ, ಆದಾಯ ತೆರಿಗೆ ಅಧಿನಿಯಮ, 1961(19618 ಕೇಂದ್ರ ಅಧಿನಿಯಮ ಸಂ.43)ರ ಪ್ರಕರಣ 2ರ ಖಂಡ (47 ಎ) ನಲ್ಲಿ ಅದಕ್ಕೆ ನೀಡಲಾದ ಅದೇ ಅರ್ಥವನ್ನು ಹೊಂದಿರತಕ್ಕದ್ದು:.