(1) ಪ್ರಾಧಿಕಾರವು ತನ್ನ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯಗಳಿಗೆ ಅನುಸಾರವಾಗಿ,-
(ಎ) ನಿರ್ಮಾಣ ಕಾಮಗಾರಿಗಳಿಗಾಗಿ;
(ಬಿ) ಭೂಮಿಗಳು ಮತ್ತು ಕಟ್ಟಡಗಳನ್ನು ಅರ್ಜಿಸುವುದಕ್ಕಾಗಿ; ಅಥವಾ
(ಸಿ) ಸರ್ಕಾರಕ್ಕೆ ಕೊಡಬೇಕಾದ ಯಾವುದೇ ಸಾಲವನ್ನು ಸಂದಾಯ ಮಾಡಲು, ಅಥವಾ
(ಡಿ) ಅಧಿನಿಯಮದ ಅಥವಾ ಈ ಹಿಂದೆ ಜಾರಿಯಲ್ಲಿದ್ದ ಯಾವುದೇ ಇತರ ಅಧಿನಿಯಮದ ಅಡಿಯಲ್ಲಿ ಎತ್ತಿದ ಸಾಲವನ್ನು ಮರುಪಾವತಿ ಮಾಡಲು; ಅಥವಾ ಈ ಅಧಿನಿಯಮದ ಮೂಲಕ ಅಥವಾ ಮೇರೆಗೆ ಅಧಿಕೃತಗೊಳಿಸಲಾದ ಯಾವುದೇ ಶುಲ್ಕಗಳ ಮತ್ತು ಬಾಕಿಗಳ ಭದ್ರತೆಗಳ ಮೇಲೆ ಸಾಲ, ಡಿಬೆಂಚರು ಅಥವಾ ಇತರ ರೂಪದಲ್ಲಿ ಅವಶ್ಯವಾಗಬಹುದಾದಷ್ಟು ಮೊತ್ತದ ಸಾಲವನ್ನು ಪಡೆಯಬಹುದು;
ಪರಂತು,-
i) ಸರ್ಕಾರದ ಪೂರ್ವ ಮಂಜೂರಾತಿ ಇಲ್ಲದೆ ಯಾವುದೇ ಸಾಲವನ್ನು ಪಡೆಯತಕ್ಕದ್ದಲ್ಲ; ಮತ್ತು ii) ಸಾಲದ ಮೊತ್ತ, ಬಡ್ಡಿ ದರ ಮತ್ತು ಸಾಲಗಳನ್ನು ಪಡೆದ ದಿನಾಂಕ, ಮರುಪಾವತಿಯ ಕಾಲ ಮತ್ತು ವಿಧಾನ ಮತ್ತು ಇತರ ವಿಷಯಗಳೂ ಸೇರಿದಂತೆ ನಿಬಂಧನೆಗಳು ಸರ್ಕಾರದ ಅನುಮೋದನೆಗೆ ಒಳಪಟ್ಟಿರತಕ್ಕದ್ದು.
(2) (1) ನೇ ಉಪನಿಯಮದ ಅಡಿಯಲ್ಲಿ ಯಾವುದೇ ಹಣದ ಮೊತ್ತವನ್ನು ಸಾಲ ಪಡೆದಾಗ,-
(ಎ) ಸರ್ಕಾರದ ಪೂರ್ವ ಮಂಜೂರಾತಿ ಪಡೆಯದೆ, ಸಾಲದ ಮೊತ್ತದ ಯಾವುದೇ ಭಾಗವನ್ನು, ಸಾಲವನ್ನು ಯಾವ ಉದ್ದೇಶಕ್ಕಾಗಿ ಪಡೆಯಲಾಗಿದೆಯೋ ಆ ಉದ್ದೇಶಕ್ಕಲ್ಲದೆ ಇತರ ಯಾವುದೇ ಉದ್ದೇಶಕ್ಕಾಗಿ ವಿನಿಯೋಗಿಸತಕ್ಕದ್ದಲ್ಲ;
(ಬಿ) (1)ನೇ ಉಪ ನಿಯಮದ (ಎ) ಖಂಡದ ಅಡಿಯಲ್ಲಿ ಪಡೆಯಲಾದ ಸಾಲದ ಮೊತ್ತದ ಯಾವುದೇ ಭಾಗವನ್ನು ಯಾವ ಕಾಮಗಾರಿಗಳ ನಿರ್ಮಾಣಕ್ಕಾಗಿ ಅಂಥ ಹಣವನ್ನು ಸಾಲ ಪಡೆಯಲಾಗಿದೆಯೋ ಆ ಕಾಮಗಾರಿಗಳ ನಿರ್ಮಾಣಕ್ಕಾಗಿ ವಿಶೇಷವಾಗಿ ನಿಯೋಜಿಸಿಕೊಂಡಿರುವವರನ್ನು ಹೊರತುಪಡಿಸಿ ಪ್ರಾಧಿಕಾರದ ಇತರ ಅಧಿಕಾರಿಗಳು ಅಥವಾ ನೌಕರರಿಗೆ ಸಂಬಳ ಅಥವಾ ಭತ್ಯೆಗಳನ್ನು ಸಂದಾಯ ಮಾಡಲು ವಿನಿಯೋಗಿಸತಕ್ಕದ್ದಲ್ಲ;
(ಸಿ) ಲೆಕ್ಕ ಪತ್ರಗಳಲ್ಲಿನ ಪ್ರತಿಯೊಂದು ತಿದ್ದುಪಾಟು ಅಥವಾ ಬದಲಾವಣೆಯನ್ನು ಕೆಂಪುಶಾಯಿನಲ್ಲಿ (ಮೂಲ ನಮೂದನೆಯಲ್ಲಿ ಒಂದು ಗೆರೆಯನ್ನು ಎಳೆಯುವ ಮೂಲಕ) ಸ್ಪಷ್ಟವಾಗಿ ಮಾಡಬೇಕು ಮತ್ತು ಅದನ್ನು ಸರಿಪಡಿಸಬೇಕು ಮತ್ತು ಅದಕ್ಕೆ ಲೆಕ್ಕಪತ್ರಾಧಿಕಾರಿಯವರು ಚಿಕ್ಕರುಜು ಹಾಕಿ ದೃಢೀಕರಿಸಿರಬೇಕು. ಪುಸ್ತಕಗಳು ಮತ್ತು ವೋಚರುಗಳಲ್ಲಿ ಮಾಡಿದ ಎಲ್ಲಾ ತಿದ್ದುಪಾಟುಗಳು ಮತ್ತು ಮಾರ್ಪಾಟುಗಳನ್ನು ಅದೇ ರೀತಿಯಲ್ಲಿ ದೃಢೀಕರಿಸಬೇಕು. ಎರೇಸರುಗಳು, ವೈಟ್ನರ್ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸತಕ್ಕದ್ದು ಮತ್ತು ಸೂಕ್ತವಾಗಿ ದಸ್ತಾವೇಜಿನಲ್ಲಿ ಅಳಿಸಿರುವುದನ್ನು, ವೈಟ್ನರ್ ಹಾಕಿರುವುದನ್ನು ಯುಕ್ತವಾಗಿ ದೃಢೀಕರಿಸಿದ ಹೊರತು ಅದನ್ನು ಅಂಗೀಕರಿಸತಕ್ಕದ್ದಲ್ಲ; ಮತ್ತು
(ಡಿ) ಪ್ರಾಧಿಕಾರದ ಕಛೇರಿಯಲ್ಲಿ ಸ್ವೀಕರಿಸಲಾದ ಎಲ್ಲಾ ಮೊತ್ತಗಳನ್ನು ಅಥವಾ ಪ್ರಾಧಿಕಾರದ ಲೆಕ್ಕಕ್ಕೆ ಜಮೆ ಮಾಡಲು ಯಾವುದೇ ಬ್ಯಾಂಕಿನಲ್ಲಿ ಸಂದಾಯ ಮಾಡಿದ ಮೊತ್ತಗಳನ್ನು ಯುಕ್ತ ಲೆಕ್ಕಶೀರ್ಷಿಕೆ ಅಡಿಯಲ್ಲಿ ಲೆಕ್ಕಕ್ಕೆ ತೆಗೆದುಕೊಳ್ಳತಕ್ಕದ್ದು ಮತ್ತು ಆ ನಮೂದುಗಳಿಗೆ ಪ್ರಾಧಿಕಾರದ ಲೆಕ್ಕ ಪತ್ರಾಧಿಕಾರಿಯು ಮತ್ತು ಆಯುಕ್ತರು ಚಿಕ್ಕರುಜು ಹಾಕತಕ್ಕದ್ದು.
(3) ಯಾವುದೇ ಬಿಲ್ಲುಗಳು, ಪ್ರಯಾಣಭತ್ಯೆ ಬಿಲ್ಲುಗಳು ಮತ್ತು ಸಾದಿಲ್ವಾರು ಬಿಲ್ಲುಗಳನ್ನು ಸಿದ್ಧಪಡಿಸುವಲ್ಲಿ ಮತ್ತು ನಿಯಂತ್ರಿಸುವಲ್ಲಿ ರಾಜ್ಯ ಆರ್ಥಿಕ ಸಂಹಿತೆಯಲ್ಲಿ ಮತ್ತು ರಾಜ್ಯ ಖಜಾನೆ ಸಂಹಿತೆಯಲ್ಲಿ ಒಳಗೊಂಡಿರುವ ನಿಯಮಗಳು ಅನ್ವಯವಾಗತಕ್ಕದ್ದು;
(4) ಅಂಚೆ ಮುದ್ರಾಂಕಗಳನ್ನು ಖರೀದಿಸಿ ಅವುಗಳನ್ನು ಪ್ರಾಧಿಕಾರದ ಕಛೇರಿಯಲ್ಲಿ ಬಳಕೆಗಾಗಿ ನೀಡತಕ್ಕದ್ದು. ಅಂಚೆ ಮುದ್ರಾಂಕಗಳ ವೆಚ್ಚದ ಸಂಬಂಧದಲ್ಲಿ ಪ್ರತ್ಯೇಕ ಸಾದಿಲ್ವಾರು ಬಿಲ್ಲಿನ ಮೂಲಕ ಹಣ ತೆಗೆಯತಕ್ಕದ್ದು.
(5) ವೆಚ್ಚವನ್ನು ಈ ಮುಂದಿನ ಪ್ರಧಾನ ಶೀರ್ಷಿಕೆ ಮತ್ತು ಉಪಶೀರ್ಷಿಕೆಗಳ ಅಡಿಯಲ್ಲಿ ವರ್ಗೀಕರಿಸತಕ್ಕದ್ದು:-
| ಪ್ರಧಾನ ಶೀರ್ಷಿಕೆ | ಉಪಶೀರ್ಷಿಕೆ |
| (ಎ)ಅಧ್ಯಕ್ಷರು ಮತ್ತು ಸದಸ್ಯರಿಗೆ ಭತ್ಯೆಗಳು ಮತ್ತು ಫೀಜುಗಳು. | ಪ್ರಾಧಿಕಾರದ ಅಧ್ಯಕ್ಷರು ಮತ್ತು ಸದಸ್ಯರಿಗೆ ಭತ್ಯೆಗಳು ಅಥವಾ ಫೀಜುಗಳು. |
| (ಬಿ)ಸಿಬ್ಬಂದಿ ವರ್ಗದ ಸಂಬಳ | (i) ಆಯುಕ್ತರ ಸಂಬಳ (ii) ಸಿಬ್ಬಂದಿ ವರ್ಗದ ಸಂಬಳ |
| (ಸಿ)ಭತ್ಯೆಗಳು | (i) ಪ್ರಯಾಣ ಭತ್ಯೆ (ii) ಇತರ ಭತ್ಯೆಗಳು |
| (ಡಿ)ಸಾದಿಲ್ವಾರುಗಳು | (i)ಬಾಡಿಗೆ ದರಗಳ ಮತ್ತು ತೆರಿಗೆಗಳು (ii)ಅಂಚೆ ಮತ್ತು ಟೆಲಿಗ್ರಾಂ ವೆಚ್ಚ (iii)ಲೇಖನ ಸಾಮಾಗ್ರಿ (iv)ಪುಸ್ತಕಗಳು ಮತ್ತು ನಿಯತಕಾಲಿಕೆಗಳು |
| (v)ವಿದ್ಯುತ್ ಮತ್ತು ಲೈಟಿಂಗ್ ವೆಚ್ಚಗಳು (vi)ದೂರವಾಣಿ ವೆಚ್ಚಗಳು (vii)ಮುದ್ರಣ ವೆಚ್ಚಗಳು (viii)ಪೀಠೋಪಕರಣಗಳು (ix)ಇತರೆ |
| (ಇ)ಕಾನೂನು ಸಂಬಂಧಿ ವೆಚ್ಚಗಳು | (i)ವಕೀಲರ ಫೀಜುಗಳು (ii)ಮುದ್ರಾಂಕ ವೆಚ್ಚಗಳು (iii)ನ್ಯಾಯಾಲಯ ಫೀಜುಗಳು |
| (ಎಫ್) ಸಾಲಗಳು ಮತ್ತು ಮುಂಗಡಗಳು | (i)ಸಾಲಗಳ ಮರುಪಾವತಿ (ii) ಸಾಲಗಳ ಮೇಲಿನ ಬಡ್ಡಿ (iii) ಸಾಲಗಳು ಮತ್ತು ಮುಂಗಡಗಳು |
| (ಜಿ) ಇತರ ವೆಚ್ಚಗಳು | (i) ಅನುದಾನಗಳು ಮತ್ತು ವಿದ್ಯಾರ್ಥಿ ವೇತನಗಳು (ii)ಸಾಲಗಳು ಮತ್ತು ಕಟ್ಟಡಗಳ ಮೇಲಿನ ಬಂಡವಾಳ ವೆಚ್ಚ. (iii)ನಿರ್ವಹಣೆ ಮತ್ತು ದುರಸ್ತಿಗಳು (iv)ಭದ್ರತಾ ಪತ್ರಗಳು, ಡಿಬೆಂಚರುಗಳು, ಸ್ಟಾಕ್ಗಳು ಅಥವಾ ಇತರ ಬೆಲೆಯುಳ್ಳ ಭದ್ರತೆಗಳ ಖರೀದಿಗಳು. |