(1) ಪ್ರಾಧಿಕಾರದ ಲೆಕ್ಕಪತ್ರಗಳು ಕರ್ನಾಟಕ ಆರ್ಥಿಕ ಸಂಹಿತೆ, 1958ರ ಉಪಬಂಧಗಳನ್ನು ಅನುಸರಿಸತಕ್ಕದ್ದು ಮತ್ತು ನಮೂನೆ-2ರಲ್ಲಿ ಹೇಳಿರುವವುಗಳ ಜೊತೆಗೆ ಗೊತ್ತುಪಡಿಸಲಾದಂಥ ಪುಸ್ತಕಗಳು ಮತ್ತು ರಿಜಿಸ್ಟರುಗಳು ಹಾಗೂ ನಮೂನೆಗಳನ್ನು ಅಂಗೀಕರಿಸತಕ್ಕದ್ದು ಮತ್ತು ನಿರ್ವಹಿಸತಕ್ಕದ್ದು. ವರ್ಷದ ಕೊನೆಯಲ್ಲಿ Annual Statement of Accounts ಮತ್ತು Balance Sheet ತಯಾರಿಸತಕ್ಕದ್ದು.
(2) ಪ್ರಾಧಿಕಾರದ ಲೆಕ್ಕಪತ್ರಗಳನ್ನು ಪರಿಶೋಧಿಸುವಂತಹ ರೀತಿಯು ಮತ್ತು ಪರಿಶೋಧಕರ ವರದಿಯ ಒಳಾಂಶಗಳು ನಮೂನೆ-3ಯಲ್ಲಿ ಸೂಚಿಸುವಂತೆ ಇರತಕ್ಕದ್ದು;
(3) ಲೆಕ್ಕ ಪರಿಶೋಧಕರು ತಾವು ಲೆಕ್ಕಪರಿಶೋಧನೆಯನ್ನು ಪ್ರಾರಂಭಿಸಲು ಉದ್ದೇಶಿಸಿರುವಂಥ ದಿನಾಂಕದ ಬಗ್ಗೆ ಎರಡು ವಾರಗಳಿಗಿಂತ ಕಡಿಮೆ ಇಲ್ಲದಂತೆ ಮುಂಚಿತವಾಗಿ ಪ್ರಾಧಿಕಾರಕ್ಕೆ ಲಿಖಿತ ನೋಟೀಸು ನೀಡತಕ್ಕದ್ದು;
ಪರಂತು, ಈ ನಿಯಮದಲ್ಲಿ ಏನೇ ಇದ್ದರೂ, ಲೆಕ್ಕಪರಿಶೋಧಕರು, ವಿಶೇಷ ಕಾರಣಗಳಿಗಾಗಿ, ಅವುಗಳನ್ನು ಬರೆದು ದಾಖಲಿಸಿ, ಎರಡು ವಾರಗಳಿಗಿಂತ ಕಡಿಮೆ ಅವಧಿಯ ನೋಟೀಸು ನೀಡಬಹುದು ಅಥವಾ ಪ್ರಾಧಿಕಾರಕ್ಕೆ ನೋಟೀಸು ನೀಡದೆ ವಿಶೇಷ ಅಥವಾ ಸವಿವರ ಲೆಕ್ಕಪರಿಶೋಧನೆಯನ್ನು ಪ್ರಾರಂಭಿಸಬಹುದು;
(4) ಲೆಕ್ಕಪರಿಶೋಧಕನು ಅಥವಾ ಲೆಕ್ಕಪರಿಶೋಧಕರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವ ಉದ್ದೇಶಗಳಿಗಾಗಿ, ಪ್ರಾಧಿಕಾರದ ಎಲ್ಲಾ ಲೆಕ್ಕಪತ್ರಗಳು ಮತ್ತು ಇತರೆ ದಾಖಲೆಗಳನ್ನು ನೋಡಲು ಅವಕಾಶವನ್ನು ಹೊಂದಿರತಕ್ಕದ್ದು.
(5) ಲೆಕ್ಕಪರಿಶೋಧಕನು, ಲೆಕ್ಕಪರಿಶೋಧನೆಯನ್ನು ಪೂರ್ಣಗೊಳಿಸಿದ ತರುವಾಯ ಮೂರು ತಿಂಗಳುಗಳ ಒಳಗಾಗಿ ಲೆಕ್ಕಪರಿಶೋಧನಾ ವರದಿಯ ಒಂದು ಪ್ರತಿಯನ್ನು ಪ್ರಾಧಿಕಾರಕ್ಕೆ ಮತ್ತು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡತಕದ್ದು;
(6) ಜಮೆ ಮತ್ತು ಖರ್ಚುಗಳ ಪರಿಶೋಧಿತ ವಾರ್ಷಿಕ ಲೆಕ್ಕ ಪತ್ರಗಳು ಸಾರ್ವಜನಿಕ ಪರಿಶೀಲನೆಗೆ ಮುಕ್ತವಾಗಿರತಕ್ಕದು ಮತ್ತು ರಾಜ್ಯ ಸರ್ಕಾರದ ಅನುಮೋದನೆ ಪಡೆದು ಅದನ್ನು ಅಧಿಕೃತ ರಾಜ್ಯ ಪತ್ರದಲ್ಲಿ ಪ್ರಕಟಿಸತಕ್ಕದು.
ನಮೂನೆ-1 ವಾರ್ಷಿಕ ವರದಿ (ನಿಯಮ 10ನ್ನು ನೋಡಿ) ---------------- ವರ್ಷಕ್ಕಾಗಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ವಾರ್ಷಿಕ ಆಡಳಿತ ವರದಿ.
(1) ಆಡಳಿತ,-
(1) ಪ್ರಾಧಿಕಾರದ ರಚನೆ.
(2) ಪ್ರಾಧಿಕಾರದ ಸದಸ್ಯರ ಹೆಸರುಗಳು ಮತ್ತು ಅವರ ಹುದ್ದೆ.
(3) ನಡೆಸಲಾದ ಸಭೆಗಳ ಸಂಖ್ಯೆ ಮತ್ತು ಅಧಿನಿಯಮದ 4ನೇ ಪ್ರಕರಣದಲ್ಲಿ ಗೊತ್ತುಪಡಿಸಲಾದಷ್ಟು ಸಂಖ್ಯೆಯ ಸಭೆಗಳನ್ನು ನಡೆಸದಿರುವುದಕ್ಕೆ ಕಾರಣಗಳು.
(4) ಸಭೆಗಳಿಗೆ ನಿರಂತರವಾಗಿ ಗೈರುಹಾಜರಾದಂಥ ಸದಸ್ಯರ ಹೆಸರುಗಳು.
(5) ಪ್ರಾಧಿಕಾರದ ಸಮಿತಿ ಮತ್ತು ಉಪ ಸಮಿತಿಗಳ ರಚನೆ.
(6) ಸಮಿತಿಗಳು ಮತ್ತು ಉಪ ಸಮಿತಿಗಳು ನಡೆಸಿದ ಸಭೆಗಳು.
(7) ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿ.
(8) ಪ್ರಾಧಿಕಾರದ ಅಧಿಕಾರಿಗಳು ಮತ್ತು ಸಿಬ್ಬಂದಿಗಾಗಿ ಇರುವ ಆವರಣಗಳು.
(9) ಪೀಠೋಪಕರಣಗಳು ಮತ್ತು ಲೇಖನ ಸಾಮಾಗ್ರಿಗಳು.
(10) ಪ್ರಾಧಿಕಾರದ ಸ್ಥಿರಾಸ್ತಿ.
(11) ಮೋಟಾರು ವಾಹನಗಳು, ಸಾಧನ ಸಾಮಾಗ್ರಿ, ಜೋಡಣೆಗಳು.
(12) ಪುಸ್ತಕಗಳು, ನಮೂನೆಗಳು, ದಾಖಲೆಗಳ ನಿರ್ವಹಣೆ.
(13) ನಗದು, ಅಮೂಲ್ಯ ಸಾಮಾಗ್ರಿಗಳು, ಮುಖ್ಯ ದಾಖಲೆಗಳು ಮತ್ತು ಕಡತಗಳು, ಅವುಗಳ ಅಭಿರಕ್ಷೆ ಮತ್ತು ಸಂರಕ್ಷಣೆ.
(2) ಬಜೆಟ್ ಮತ್ತು ಸ್ಕೀಂಗಳು,-
(1) ವಾರ್ಷಿಕ ಜಮೆಗಳು ಮತ್ತು ಖರ್ಚುಗಳು:-
| ಕಾಮಗಾರಿಗಳ, ಕಟ್ಟಡಗಳ, ಸ್ಕೀಂಗಳ, ಸೇವೆಯ ಹೆಸರು | ಹಿಂದಿನ ವರ್ಷದ ಅಂತ್ಯದವರೆಗೆ ಮಾಡಿದ ವೆಚ್ಚ, ಆಗಿರುವ ವಾಸ್ತವಿಕ ಪ್ರಗತಿ | ಪ್ರಸಕ್ತ ವರ್ಷದ ವೆಚ್ಚ |
| 1 | 2 | 3 |
(2) 1ನೇ ಬಾಬಿನಲ್ಲಿ ಉಲ್ಲೇಖಿಸಲಾದ ಕಾಮಗಾರಿಯ ಪ್ರಗತಿಯಲ್ಲಿ ವಿಳಂಬವೇನಾದರೂ ಆಗಿದ್ದರೆ, ಅದಕ್ಕೆ ಕಾರಣಗಳು.
(3) ಸ್ಕೀಂಗಳನ್ನು, ಪ್ರಾಜೆಕ್ಟ್ಗಳನ್ನು ಪರಿಷ್ಕರಣೆ ಏನಾದರೂ ಮಾಡಿದ್ದರೆ, ಆ ಪರಿಷ್ಕರಣೆಗಳಿಗೆ ಕಾರಣಗಳು.
(4) ತಪ್ಪಿತಸ್ಥರಾಗಿರುವ ಏಜೆನ್ಸಿಗಳು ಮತ್ತು ಇಲಾಖೆಗಳು, ಅಂಥ ಏಜೆನ್ಸಿಗಳ ಮತ್ತು ಇಲಾಖೆಗಳ ಮೇಲೆ ತೆಗೆದುಕೊಂಡ ಕ್ರಮ.
(5) ಪ್ರಾಧಿಕಾರ ನಿಧಿಯ ಪ್ರಸ್ತುತ ಸ್ಥಿತಿಗತಿ,-
i. (ಎ) ಹಣ ಠೇವಣಿ ಇಟ್ಟಿರುವ ಬ್ಯಾಂಕಿನ ಹೆಸರು.
(ಬಿ) ಖಾತೆ ಸಂಖ್ಯೆ ಮತ್ತು ಖಾತೆಯ ಸ್ವರೂಪ.
(ಸಿ) ಬಾಕಿ ii. ಠೇವಣಿಗಳು ಮತ್ತು ಠೇವಣಿಗಳ ಸ್ವರೂಪ.
iii. ಎತ್ತಲಾದ ಸಾಲಗಳು ಮತ್ತು ಅವುಗಳ ವೆಚ್ಚ.
iv. ಅನುದಾನಗಳು, ಧನಸಹಾಯಗಳು, ವಂತಿಗೆಗಳು, ದೇಣಿಗೆಗಳು, ಕಾಣಿಕೆಗಳು.
(6) ಲೆಕ್ಕಪತ್ರಗಳ ನಿರ್ವಹಣೆ ಮತ್ತು ಲೆಕ್ಕಪರಿಶೋಧನೆ ಮತ್ತು ಅದರ ಹಂತ.
(7) ಹಣಕಾಸು ವರ್ಷದ ಅವಧಿಯಲ್ಲಿ ಹಣ ದುರುಪಯೋಗ ಮತ್ತು ನಷ್ಟ, ಆಸ್ತಿಯ ನಷ್ಟ, ಆಸ್ತಿಯ ಒತ್ತುವರಿ, ಕಳ್ಳತನ ಇವು ಯಾವುದಾದರೂ ಇದ್ದರೆ ಅವು ತೆಗೆದುಕೊಂಡ ಕ್ರಮ ಅಥವಾ ಮಾಡಿದ ಶಿಫಾರಸ್ಸು.
(8) ಆಯುಕ್ತರು, ಅವರ ಅಧಿಕಾರಿಗಳು ಅಥವಾ ಅಧಿಕೃತ ಏಜೆನ್ಸಿಗಳು ಪ್ರಾಜೆಕ್ಟ್ಗಳ ಮತ್ತು ಸ್ಕೀಂಗಳ ಪರಿಶೀಲನೆ ಮಾಡುವುದು, ಅಂಥ ಪರಿಶೀಲನೆಗಳ ಮೇಲಿನ ಟಿಪ್ಪಣಿಗಳು ಮತ್ತು ಜಾರಿ ಏಜೆನ್ಸಿಗಳು ಕೈಗೊಂಡ ಕ್ರಮಗಳು.
(9) ಯಾವುದೇ ಇತರ ಪ್ರಮುಖ ವಿಷಯಗಳು, ಷರಾಗಳೊಂದಿಗೆ.
(3) ರಾಜ್ಯ ಮಟ್ಟದ ಸಲಹಾ ಸಮಿತಿ.-
- ವರ್ಷದ ಅವಧಿಯಲ್ಲಿ ರಾಜ್ಯ ಮಟ್ಟದ ಸಲಹಾ ಸಮಿತಿಯು ನಡೆಸಿದ ಸಭೆಗಳ ಸಂಕ್ಷಿಪ್ತ ವರದಿ ಮತ್ತು ಸಭೆಗಳ ದಾಖಲೆ.
- ವರ್ಷದ ಅವಧಿಯಲ್ಲಿ ಪ್ರಮುಖ ವಿಷಯಗಳ ಮೇಲೆ ಪ್ರಾಧಿಕಾರಕ್ಕೆ ರಾಜ್ಯಮಟ್ಟದ ಸಲಹಾ ಸಮಿತಿಯು ನೀಡಿದ ಸಲಹೆಯ ಸಂಕ್ಷಿಪ್ತ ವರದಿ.
- ಮೇಲ್ಕಂಡ ವಿಷಯಗಳಿಗೆ ಸಂಬಂಧಿಸಿದಂತೆ ಪಾಲನೆಯ ಸಂಕ್ಷಿಪ್ತ ವರದಿ.
ನಮೂನೆ-2 ಪ್ರಾಧಿಕಾರದ ಲೆಕ್ಕಪತ್ರಗಳು (ನಿಯಮ 13ನ್ನು ನೋಡಿ)
- ಲೆಕ್ಕಪತ್ರ ಪುಸ್ತಕಗಳು, ರಿಜಿಸ್ಟರ್.
- ಲೆಡ್ಜರ್ ಮತ್ತು ಲೆಡ್ಜರುಗಳ ನಿರ್ವಹಣೆ.-
(1) ಪ್ರಾಧಿಕಾರದ ನಿಧಿಗೆ ಸಂಬಂಧಪಟ್ಟಂತೆ ಪ್ರಾಧಿಕಾರದ ಕಛೇರಿಯಲ್ಲಿ ಈ ಮುಂದಿನ ರಿಜಿಸ್ಟರುಗಳನ್ನು ನಿರ್ವಹಿಸತಕ್ಕದ್ದು,-
(ಎ) ವೇತನ ಪುಸ್ತಕ.
(ಬಿ) ಲೆಕ್ಕ ಪತ್ರಗಳ ಲೆಡ್ಜರು.
(ಸಿ) ನಗದು ಪುಸ್ತಕ.
(ಡಿ) ವಂತಿಗೆಗಳ ವಸೂಲಿಗಳನ್ನು ಸೂಚಿಸುವ ಬೇಡಿಕೆ, ಸಂಗ್ರಹಣೆ ಮತ್ತು ಬಾಕಿ ರಿಜಿಸ್ಟರು.
(ಇ) ಮಾಡಬೇಕಾದ ವಸೂಲಿಗಳನ್ನು ತೋರಿಸುವ ರಿಜಿಸ್ಟರು.
(ಎಫ್) ಪ್ರಾಧಿಕಾರದ ಭೂಮಿ ಮತ್ತು ಆಸ್ತಿಗಳಿಗೆ ಸಂಬಂಧಪಟ್ಟಂತೆ ಬಾಡಿಗೆಯ ಅಥವಾ ಭೂಕಂದಾಯದ ಬೇಡಿಕೆ ಮತ್ತು ಸಂಗ್ರಹಣೆಗಳ ರಿಜಿಸ್ಟರು.
(ಜಿ) ರಸೀತಿ ಪುಸ್ತಕಗಳು ಮತ್ತು ಅವುಗಳ ಕೌಂಟರ್ ಫಾಯಿಲ್ಗಳೊಂದಿಗೆ ಇತರೆ ಸ್ವೀಕೃತಿಗಳ ರಿಜಿಸ್ಟರುಗಳು.
(ಹೆಚ್) ಸಾದಿಲ್ವಾರು ವೆಚ್ಚಗಳ ರಿಜಿಸ್ಟರು.
(ಐ) ಮುದ್ರಾಂಕ ರಿಜಿಸ್ಟರು.
(ಜೆ) ಭದ್ರತಾ ಪತ್ರಗಳು, ಸ್ಟಾಕ್ಗಳು ಮತ್ತು ಡಿಬೆಂಚರುಗಳ ರಿಜಿಸ್ಟರು.
(ಕೆ) ಸಿಬ್ಬಂದಿ ಮತ್ತು ಲೆಕ್ಕಪರಿಶೋಧನೆ ರಿಜಿಸ್ಟರು.
(ಎಲ್) ಲೇಖನ ಸಾಮಗ್ರಿ ಮತ್ತು ಮುದ್ರಿತ ನಮೂನೆಗಳು; ಪೀಠೋಪಕರಣಗಳು; ಮತ್ತು ಸೈಕಲ್ಗಳು, ಟೈಪ್ರೈಟರ್ಗಳು, ಕಂಪ್ಯೂಟರ್ಗಳು, ವಾಟರ್ ಕೂಲರ್ಗಳು, ಹವಾ ನಿಯಂತ್ರಕಗಳು, ಉಪಕರಣಗಳು ಮತ್ತು ಸ್ಥಾವರಗಳು ಮತ್ತು ಇತರೆ ಸಾಮಗ್ರಿಗಳಿಗೆ ಸಂಬಂಧಪಟ್ಟಂತೆ ಸ್ವೀಕೃತಿಗಳು, ನೀಡಿಕೆಗಳು ಮತ್ತು ಬಾಕಿಯನ್ನು ತೋರಿಸುವ ದಾಸ್ತಾನು ಪುಸ್ತಕಗಳು.
(ಎಂ) ಖಾಯಂ ಮುಂಗಡ ಲೆಕ್ಕಪತ್ರಗಳು.
(ಎನ್) ಸ್ಥಿರಾಸ್ತಿಗಳ ರಿಜಿಸ್ಟರು.
(ಓ) ಡೆಡ್ ಸ್ಟಾಕ್ ವಸ್ತುಗಳ ರಿಜಿಸ್ಟರು.
(ಪಿ) ವಾರ್ಷಿಕ ಆದಾಯ ಮತ್ತು ವ್ಯಯ ಲೆಕ್ಕಪತ್ರ ಹಾಗೂ ಆಸ್ತಿ ಮತ್ತು ಹೊಣೆಗಾರಿಕೆ (Balance Sheet)
(2) ತನ್ನ ಲೆಕ್ಕಪತ್ರಗಳನ್ನು ನಿರ್ವಹಿಸುವಲ್ಲಿ, ಪ್ರಾಧಿಕಾರವು ಈ ಮುಂದಿನ ಕಾರ್ಯವಿಧಾನಗಳನ್ನು ಪಾಲಿಸತಕ್ಕದ್ದು, ಎಂದರೆ:-
(ಎ) ಪ್ರತಿಯೊಂದು ಹಣಕಾಸು ವರ್ಷಕ್ಕಾಗಿ ಲೆಕ್ಕಪತ್ರಗಳನ್ನು ಪ್ರತ್ಯೇಕವಾಗಿ ನಿರ್ವಹಿಸತಕ್ಕದ್ದು.
(ಬಿ) ಎಲ್ಲಾ ಲೆಕ್ಕ ಪುಸ್ತಕಗಳಿಗೆ ಮತ್ತು ರಿಜಿಸ್ಟರುಗಳಿಗೆ ಭದ್ರವಾಗಿ ರಟ್ಟು ಹಾಕಿರತಕ್ಕದ್ದು.
(ಸಿ) ಎಲ್ಲಾ ಲೆಕ್ಕ ಪುಸ್ತಕಗಳ ಪುಟಗಳಿಗೆ ಕ್ರಮ ಸಂಖ್ಯೆ ನೀಡತಕ್ಕದ್ದು ಮತ್ತು ಪ್ರತಿಯೊಂದು ಪುಟಕ್ಕೆ ಪ್ರಾಧಿಕಾರದ ಮೊಹರಿನಿಂದ ಮುದ್ರೆ ಹಾಕತಕ್ಕದ್ದು.
(ಡಿ) ರಸೀದಿ ಪುಸ್ತಕಗಳನ್ನು ನೀಡುವುದಕ್ಕಿಂತ ಮುಂಚೆ ಅವುಗಳ ಪುಟಗಳಿಗೆ ಅದೇ ರೀತಿ ಮುದ್ರೆ ಹಾಕತಕ್ಕದು. ಆಯುಕ್ತರು ಪ್ರತಿಯೊಂದು ಪುಸ್ತಕವನ್ನು ನೀಡುವುದಕ್ಕೆ ಮುಂಚೆ ಅವುಗಳ ಮೇಲೆ ಒಳಗೊಂಡಿರುವ ಪುಟಗಳ ಸಂಖ್ಯೆಯ ಬಗ್ಗೆ ಒಂದು ಪ್ರಮಾಣ ಪತ್ರವನ್ನು ದಾಖಲು ಮಾಡತಕ್ಕದ್ದು.
ನಮೂನೆ-3 ಲೆಕ್ಕ ಪರಿಶೋಧಕರ ವರದಿಗಳು (13(2)ನೇ ನಿಯಮ ನೋಡಿ)
(1) ಪ್ರಾಧಿಕಾರದ ನಿಧಿಯ ಲೆಕ್ಕಪತ್ರಗಳ ಪರಿಶೋಧನೆ ಮಾಡುವಾಗ, ಲೆಕ್ಕಪರಿಶೋಧಕನು ನಗದು ಶುಲ್ಕನ್ನು ಪರಿಶೀಲಿಸತಕ್ಕದ್ದು ಮತ್ತು ನಗದನ್ನು ಪರಿಶೀಲನೆಗಾಗಿ ಕೂಡಲೇ ತೋರಿಸಲಾಯಿತೇ ಎಂಬುದನ್ನು ವರದಿಯಲ್ಲಿ ಹೇಳತಕ್ಕದ್ದು.
(2) ಲೆಕ್ಕಪರಿಶೋಧಕನು ಲೆಕ್ಕಪರಿಶೋಧನೆ ಮಾಡುವಾಗ ಡಿಬೆಂಚರುಗಳು, ಷೇರು ಪ್ರಮಾಣಪತ್ರಗಳು, ಸರ್ಕಾರಿ ಬಾಂಡ್ಗಳು ಮತ್ತು ಇತರ ಭದ್ರತಾ ಪತ್ರಗಳನ್ನು ಮತ್ತು ಬ್ಯಾಂಕಿನ ಪಾಸ್ ಪುಸ್ತಕಗಳನ್ನು ಪರಿಶೀಲಿಸತಕ್ಕದ್ದು ಮತ್ತು ಅವುಗಳು ಸರಿಯಾಗಿವೆ ಎಂದು ಕಂಡುಬಂದಿತ್ತೇ ಎಂಬುದನ್ನು ವರದಿ ಮಾಡತಕ್ಕದ್ದು.
(3) ಲೆಕ್ಕಪರಿಶೋಧಕನು ಲೆಕ್ಕಪರಿಶೋಧನೆ ಮಾಡುವಾಗ ಉದ್ಭವಿಸುವ ಇತರ ಪ್ರಶ್ನೆಗಳ ಜೊತೆಗೆ,-
(ಎ) ನಿರ್ವಹಿಸಬೇಕೆಂದು ಅಗತ್ಯಪಡಿಸಲಾದ ಲೆಕ್ಕಪತ್ರಗಳನ್ನು ಮತ್ತು ರಿಜಿಸ್ಟರುಗಳನ್ನು ಸರಿಯಾಗಿ ಇಡಲಾಗಿದೆಯೇ;
(ಬಿ) ಪ್ರಾಧಿಕಾರಕ್ಕೆ ಬರಬೇಕಾಗಿರುವ ವಂತಿಗೆಗಳನ್ನು ಮತ್ತು ಇತರ ಜಮೆಗಳನ್ನು ಸಕಾಲದಲ್ಲಿ ವಸೂಲಿ ಮಾಡಲಾಗಿದೆಯೇ ಮತ್ತು ಬಹಳ ದಿನದಿಂದ ಬಾಕಿ ಇದ್ದ ಮೊತ್ತವನ್ನು ವಸೂಲಿ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೇ, ಕ್ರಮ ತೆಗೆದುಕೊಳ್ಳದಿದ್ದಲ್ಲಿ ಯಾವ ಪ್ರಕರಣಗಳಲ್ಲಿ ಅಂಥ ಕ್ರಮ ತೆಗೆದುಕೊಳ್ಳಲಾಗಿಲ್ಲ;
(ಸಿ) ಎಲ್ಲಾ ಸಂಗ್ರಹಣೆಗಳನ್ನು ತ್ವರಿತವಾಗಿ ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆಯೇ;
(ಡಿ) ಯಾವುದೇ ವಂತಿಗೆಯನ್ನು ಮನ್ನಾ ಮಾಡಲಾಗಿದೆಯೇ ಅಥವಾ ಅದರ ಮೊತ್ತವನ್ನು ಕಡಿಮೆ ಮಾಡಲಾಗಿದೆಯೇ, ಹಾಗಿದ್ದಲ್ಲಿ, ಯುಕ್ತ ಅಧಿಕಾರ ಪಡೆದು ಅದನ್ನು ಮಾಡಲಾಗಿದೆಯೇ;
(ಇ) ವಹಿಸಲಾದ ವೆಚ್ಚವು ಮಂಜೂರಾದ ಬಜೆಟ್ಗೆ ಅನುಸಾರವಾಗಿದೆಯೇ ಮತ್ತು ಅಂಥ ಬಜೆಟ್ನಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದ್ದರೆ, ಆ ಬದಲಾವಣೆಗಳು ಯಾವುವು?;
(ಎಫ್) ವೆಚ್ಚದ ಪ್ರತಿಯೊಂದು ಬಾಬ್ತಿನ ಬಗ್ಗೆ ಸಕ್ಷಮ ಪ್ರಾಧಿಕಾರದಿಂದ ಮಂಜೂರಾತಿ ಪಡೆಯಲಾಗಿದೆಯೇ ಮತ್ತು ಅದಕ್ಕೆ ಸೂಕ್ತ ವೋಚರಿನ ಸಮರ್ಥನೆ ಇದೆಯೇ;
(ಜಿ) ಮೇಲ್ನೋಟಕ್ಕೆ ದುಂದು ವೆಚ್ಚವೆಂದು ಲೆಕ್ಕ ಪರಿಶೋಧಕನು ಅಭಿಪ್ರಾಯ ಪಟ್ಟಿರುವಂಥ ವೆಚ್ಚದ ಯಾವುದೇ ಬಾಬ್ತು ಇದೆಯೇ; ಮತ್ತು
(ಎಚ್) ತಕ್ಷಣದ ಖರ್ಚಿಗೆ ಅಗತ್ಯವಿಲ್ಲದ ಎಲ್ಲಾ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿದೆಯೇ ಮತ್ತು ಹೆಚ್ಚುವರಿ ನಿಧಿಗಳನ್ನು ಸಮರ್ಪಕವಾಗಿ ಹೂಡಿಕೆ ಮಾಡಲಾಗಿದೆಯೇ ಎಂಬುದನ್ನು ವರದಿ ಮಾಡತಕ್ಕದ್ದು.
(4) ಲೆಕ್ಕ ಪರಿಶೋಧಕನು ವೆಚ್ಚಗಳಲ್ಲಿ ಪ್ರಾಧಿಕಾರಕ್ಕೆ ಬರಬೇಕಾದ ವಂತಿಗೆಗಳ ಸಂಗ್ರಹಣೆಯಲ್ಲಿ ಅಥವಾ ಲೆಕ್ಕಪತ್ರಗಳಲ್ಲಿ ತನ್ನ ಗಮನಕ್ಕೆ ಬಂದ ಯಾವುದೇ ಮುಖ್ಯ ಅನೌಚಿತ್ಯಗಳು ಅಥವಾ ಅಕ್ರಮದ ಬಗ್ಗೆ, ಮತ್ತು ಹಣವು ನಷ್ಟ ಅಥವಾ ಪೋಲಾಗಿರುವ ಬಗ್ಗೆ ಎಲ್ಲಾ ಪ್ರಕರಣಗಳನ್ನು, ಆ ನಷ್ಟಕ್ಕೆ ಅಥವಾ ಪೋಲಾದುದಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಜವಾಬ್ದಾರರಾದ ವ್ಯಕ್ತಿಗಳ ಹೆಸರುಗಳ ಸಹಿತ ವರದಿ ಮಾಡತಕ್ಕದ್ದು.
(5) ಲೆಕ್ಕ ಪರಿಶೋಧಕನು ಈ ವರದಿಗೆ ಈ ಮುಂದಿನವುಗಳನ್ನು ಲಗತ್ತಿಸತಕ್ಕದ್ದು,-
(ಎ) ಬಜೆಟ್ ಲೆಕ್ಕ ಶೀರ್ಷಿಕೆಗಳ ಅಡಿಯಲ್ಲಿ ಸ್ವೀಕೃತಿ ಮತ್ತು ವೆಚ್ಚಗಳ ವಿವರ ಪತ್ರ;
(ಬಿ) ಆದಾಯ ಮತ್ತು ವೆಚ್ಚದ ವಿವರ ಪತ್ರ;
(ಸಿ) ಆಸ್ತಿ ಮತ್ತು ಹೊಣೆಗಾರಿಕೆಗಳ ಕ್ರೂಢೀಕೃತ ವಿವರ ಪತ್ರ;
(ಡಿ) ಡಿಬೆಂಚರುಗಳು, ಷೇರು ಪ್ರಮಾಣ ಪತ್ರಗಳು, ಸರ್ಕಾರಿ ಬಾಂಡುಗಳು ಮತ್ತು ಇತರೆ ಭದ್ರತಾ ಪತ್ರಗಳ ವಿವರ ಪತ್ರ; ಮತ್ತು
(ಇ) ನಗದು ರೂಪದ ಅಥವಾ ವಸ್ತು ರೂಪದ ಹಿಂದಿನ ಬಾಕಿಗಳು ಮತ್ತು ಚಾಲ್ತಿ ಬಾಕಿಗಳನ್ನು, ವಂತಿಕೆಗಳು, ಮೊತ್ತಗಳು ಮುಂತಾದವುಗಳೂ ಸೇರಿದಂತೆ ರಾಜಸ್ವದ ಎಲ್ಲಾ ಬಾಬ್ತುಗಳ ಬೇಡಿಕೆ, ಸಂಗ್ರಹಣೆಗಳು ಮತ್ತು ಬಾಕಿಗಳ ಒಂದು ಕ್ರೂಢೀಕೃತ ವಿವರ ಪತ್ರ.
(6) ಲೆಕ್ಕಪರಿಶೋಧಕನು ಪರಿಶೋಧನೆ ಮಾಡಿದ ಲೆಕ್ಕ ಪತ್ರಗಳ ಒಂದು ಸಂಕ್ಷಿಪ್ತ ವರದಿಯನ್ನು (ಸ್ವೀಕೃತಿಗಳು, ವೆಚ್ಚಗಳು ಮತ್ತು ಜಮಾ ಖರ್ಚು ಪಟ್ಟಿ) ಸಿದ್ಧಪಡಿಸತಕ್ಕದ್ದು ಮತ್ತು ಲೆಕ್ಕಪರಿಶೋಧನಾ ವರದಿಯ ಜೊತೆಗೆ ಅದರ ಮೂರು ಪ್ರತಿಗಳನ್ನು ಸಲ್ಲಿಸತಕ್ಕದ್ದು.
ನಮೂನೆ-4 ಆಯವ್ಯಯ (ನಿಯಮ 8ನ್ನು ನೋಡಿ) ಅಧಿಕಾರಿಗಳ ವೇತನ, ಸಿಬ್ಬಂದಿ ವರ್ಗದ ವೇತನ, ನಿಗದಿತ ಪ್ರಯಾಣ ಭತ್ಯೆಗಳು, ತುಟ್ಟಿ ಭತ್ಯೆ, ಇತರ ಭತ್ಯೆಗಳ, ವಿದ್ಯಾರ್ಥಿ ವೇತನಗಳು ಆಯವ್ಯಯ ವರ್ಗೀಕರಣ (ಲೆಕ್ಕಶೀರ್ಷಿಕೆ)
| ಲೆಕ್ಕಶೀರ್ಷಿಕೆ | 2020-21ರ ಬಜೆಟ್ | 2021-22ರ ಬಜೆಟ್ | ಹೆಚ್ಚುವರಿ + ಇಳುವರಿಯ ವ್ಯತ್ಯಾಸ | ಹೆಚ್ಚುವರಿ ತೆಗೆದುಹಾಕುವ ಅಥವಾ ಪರಿಷ್ಕೃತಗೊಳಿಸುವ ಸರ್ಕಾರಿ ಆದೇಶಗಳ ಉದ್ವಾರಗೊಳಿಸುವುದರೊಂದಿಗೆ ವ್ಯತ್ಯಾಸಕ್ಕಾಗಿ ವಿವರಣೆ |
ಅಡಿ ಟಿಪ್ಪಣಿ: 1. ಪ್ರತಿಯೊಂದು ನಮೂನೆಯ ಮೇಲೆ ಒಂದೇ ಒಂದು ಮುಖ್ಯ ಶೀರ್ಷಿಕೆಯನ್ನು ಮಾತ್ರ ಕೊಡಬೇಕು.
2. ತಾತ್ಕಾಲಿಕ ಸಿಬ್ಬಂದಿಗಳಿಗೆ ಸಂಬಂಧಪಟ್ಟಂತೆ ಅಂದಾಜುಗಳಿಗಾಗಿ ಪ್ರತ್ಯೇಕ ಅನುಬಂಧವನ್ನು ಕಳುಹಿಸಬಹುದು.
3. ಇತರೆ ಭತ್ಯೆಗಳು – ಇದರಡಿಯಲ್ಲಿ ಮನೆ ಬಾಡಿಗೆ ಭತ್ಯೆ ಮತ್ತು ನಗರ ಪರಿಹಾರ ಭತ್ಯೆಗಳು ವಿವರಗಳನ್ನು ಪ್ರತ್ಯೇಕವಾಗಿ ತೋರಿಸತಕ್ಕದ್ದು.
ದಿನಾಂಕ:
ಅಂದಾಜು ಅಧಿಕಾರಿಯ ಸಹಿ ಮತ್ತು ಪದನಾಮ ನಮೂನೆ-4 (ಮುಂದುವರಿದುದು) ಪರಿಷ್ಕೃತ ದರದಂತೆ ನೇ ವರ್ಷಕ್ಕಾಗಿ ಅಧಿಕಾರಿಗಳ/ಸಿಬ್ಬಂದಿಗಳ (ಖಾಯಂ ಅಥವಾ ತಾತ್ಕಾಲಿಕ) ನಿಗದಿತ ಭತ್ಯೆಗಳು ಇತ್ಯಾದಿಗಳ ವೇತನಕ್ಕಾಗಿ ಉದ್ದೇಶಿಸಲಾದ ಏರ್ಪಾಟುಗಳ ವಿವರಗಳ ಹೇಳಿಕೆ ಆಯವ್ಯಯ ವರ್ಗೀಕರಣ.
| ಕ್ರಮ ಸಂಖ್ಯೆ | ಹೆಸರು | ಪದನಾಮ | ಅಂದಾಜುಗಳ ಪುಟಕ್ಕೆ ಉಲ್ಲೇಖ | ಹುದ್ದೆಯ ಮಂಜೂರಾದ ವೇತನ | ಅಂಕಣ 5(ಎ)ನಲ್ಲಿರುವ ದರದಂತೆ ವರ್ಷಕ್ಕಾಗಿ ಏರ್ಪಾಟು ಮಾಡಿದ ಮೊತ್ತ |
| ಕನಿಷ್ಟ | ಗರಿಷ್ಟ | ಮುಂದಿನ ವರ್ಷದ ಏಪ್ರಿಲ್ 01ರಂದು ಬಾಕಿ ಇರುವ ಸರ್ಕಾರಿ ನೌಕರನ ವಾಸ್ತವಿಕ ವೇತನ |
| (ಎ) | (ಬಿ) | (ಸಿ) |
| 1 | 2 | 3 | 4 | 5 | 6 |
| ವರ್ಷದೊಳಗೆ ಬರಬೇಕಾದ/ಬರಬೇಕಾಗಿರುವ ವೇತನ ಬಡ್ತಿ | ವರ್ಷಕ್ಕಾಗಿ ಒದಗಿಸಲಾದ ಒಟ್ಟು ಮೊತ್ತ ಅಂದರೆ ಅಂಕಣ 6 ಮತ್ತು 7 (1)ಗಳು ಒಟ್ಟು ಸೇರಿ | ಪ್ರಯಾಣದ ವೆಚ್ಚ, ಖಾಯಂ ಮಾಸಿಕ ಪ್ರಯಾಣ ಭತ್ಯೆ ಮತ್ತು ಸಾರಿಗೆ ಸೌಲಭ್ಯ ಭತ್ಯೆ | ತುಟ್ಟಿ ಭತ್ಯೆ | ನಗರ ಪರಿಹಾರ ಭತ್ಯೆ, ಮನೆ ಬಾಡಿಗೆ ಭತ್ಯೆ, ಎಸ್ ಎಲ್ ಆರ್. ಮತ್ತು ಯುವಿ ನೀರಿನ ಭತ್ಯೆ, ಯೋಜನಾ ಭತ್ಯೆ, ವೈದ್ಯಕೀಯ ಭತ್ಯೆ, ಇತ್ಯಾದಿಗಳಂಥ ಇತರ ನಿಗದಿತ ಭತ್ಯೆಗಳು | ಷರಾ |
ವೇತನ ಬಡ್ತಿಯ ದಿನಾಂಕ (ಎ) | ವೇತನ ಬಡ್ತಿಯ ದರ (ಬಿ) | ವರ್ಷಕ್ಕಾಗಿ ವೇತನ ಬಡ್ತಿಯ ಮೊತ್ತ (ಸಿ) |
| 7 | 8 | 9 | 10 | 11 | 12 |
ಟಿಪ್ಪಣಿ: 1. ತಾತ್ಕಾಲಿಕ ಸಿಬ್ಬಂದಿಗಳ ವಿಷಯದಲ್ಲಿ ಯಾವ ಪ್ರಾಧಿಕಾರ ಮತ್ತು ಅವಧಿಯಲ್ಲಿ ಅವರುಗಳನ್ನು ತೆಗೆದುಹಾಕಲಾಯಿತೋ ಅದನ್ನು ತಪ್ಪದೇ ನಮೂದಿಸತಕ್ಕದ್ದು.
2. ವ್ಯವಸ್ಥೆಯ ಸಂಖ್ಯೆಗಳು ಅನುಬಂಧ 5ರಲ್ಲಿ ನಮೂದಿಸುವುದರೊಂದಿಗೆ ಒಪ್ಪಿಕೊಳ್ಳತಕ್ಕದ್ದು.
3. ವೇತನ ಬಿಲ್ಲುಗಳಿಂದ ಬಿಟ್ಟು ಬಿಡಲಾದ ಸರ್ಕಾರಿ ನೌಕರರುಗಳ ಸಂಬಂಧದಲ್ಲಿ ಅವರುಗಳ ಹೆಸರುಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ. ಆದರೆ, ಅವರುಗಳ ಹುದ್ದೆಗಳ ಪದನಾಮಗಳನ್ನು ಮಾತ್ರ ಸೂಚಿಸಬಹುದು.
4. ತಾತ್ಕಾಲಿಕ ಸಿಬ್ಬಂದಿಗಳಿಗಾಗಿ ಪ್ರತ್ಯೇಕ ಅನುಬಂಧಗಳನ್ನು ತಯಾರಿಸತಕ್ಕದ್ದು.
ದಿನಾಂಕ:
ಅಂದಾಜು ಅಧಿಕಾರಿಯ ಸಹಿ ಮತ್ತು ಪದನಾಮ ನಮೂನೆ-4 (ಮುಂದುವರಿದುದು) ಪ್ರಾಧಿಕಾರಕ್ಕೆ ಮಂಜೂರಾದ ಒಟ್ಟು ಸಂಖ್ಯಾಬಲವನ್ನು ಮತ್ತು ಯಾವುದಾದರೂ ತರುವಾಯ ಬದಲಾವಣೆಗಳಿದ್ದರೆ ಅವುಗಳನ್ನು ತೋರಿಸುವ ವಿವರ ಪಟ್ಟಿ.
ಇಲಾಖೆಯ ಹೆಸರು _ _ _ _ _ _ _ _ _ _ _ _ _ _ _ _ _ _ _ ಆಯವ್ಯಯ ವರ್ಗೀಕರಣ _ _ _ _ _ _ _ _ _ _ _ _ _ _ _ _ _ _ _ _ (ಲೆಕ್ಕಶೀರ್ಷಿಕೆ) ಯೋಜನೆ/ಯೋಜನೇತರ
| ವೇತನ ಶ್ರೇಣಿ | 00000-0000ರ ಅಂದಾಜು ಅನುಬಂಧ 'ಬಿ' ನಲ್ಲಿ ಸೇರಿಸಿದಂತೆ ಮಂಜೂರು ಮಾಡಲಾದ ಹುದ್ದೆಗಳ ಸಂಖ್ಯೆ | ಹುದ್ದೆಗಳ ತುರವಾಯ ವ್ಯತ್ಯಾಸ, ಅಂದರೆ, ಹುದ್ದೆಗಳನ್ನು ರದ್ದುಗೊಳಿಸುವುದು / ಸೃಷ್ಟಿಸುವುದು | ಹುದ್ದೆಗಳಿಗಾಗಿ ** ಸರ್ಕಾರಿ ಆದೇಶಗಳ ಮಂಜೂರಾತಿ ಪ್ರಾಧಿಕಾರಕ್ಕೆ ಉಲ್ಲೇಖ |
| 1 | 2 | 3 | 4 |
ಖಾಯಂ ಹುದ್ದೆಗಳು ತಾತ್ಕಾಲಿಕ ಹುದ್ದೆಗಳು | | | |
ಇಲಾಖೆಯಿಂದ ಸ್ವೀಕರಿಸಲಾದ ಹುದ್ದೆಗಳ ವಿವರಗಳು ಕ್ರಮವಾಗಿವೆ ಮತ್ತು ಅವುಗಳನ್ನು ಸರ್ಕಾರಿ ಆದೇಶ ಸಂಖ್ಯೆ: , ನಿಯಮಿತ ಪ್ರಮಾಣ (ಮಾನದಂಡ) ದಂತೆ ಅವುಗಳನ್ನು ಸರಿಯಾಗಿ ನೋಡಲಾಗಿದೆ ಎಂದು ದೃಢೀಕರಿಸಲಾಗಿದೆ.
ಟಿಪ್ಪಣಿ:- ಸರ್ಕಾರಿ ಆದೇಶಗಳ ಪ್ರತಿಗಳನ್ನು ವಿವರಣ ಪತ್ರಕ್ಕೆ ಲಗತ್ತಿಸತಕ್ಕದ್ದು.
ಸರ್ಕಾರದ ಕಾರ್ಯದರ್ಶಿ, -------------------ಇಲಾಖೆ, ಬೆಂಗಳೂರು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ವಿಮಲಾಕ್ಷಿ ಬಿ.)
ಸರ್ಕಾರದ ಅಧೀನ ಕಾರ್ಯದರ್ಶಿ
ಪ್ರವಾಸೋದ್ಯಮ ಇಲಾಖೆ
PR-753