ಸದರಿ ನಿಯಮಗಳ 6ನೇ ನಿಯಮದ ಕೊನೆಯಲ್ಲಿ ಈ ಮುಂದಿನ ಪರಂತುಕವನ್ನು ಸೇರಿಸತಕ್ಕದ್ದು, ಎಂದರೆ:-
“ಪರಂತು,ನಮೂನೆ ಸಿಎಲ್-2 ಅಥವಾ ನಮೂನೆ ಸಿಎಲ್-11(ಸಿ) ರಲ್ಲಿ ಸನ್ನದು ಹೊಂದಿರುವ ವ್ಯಕ್ತಿಯಿಂದ ನಮೂನೆ ಸಿಎಲ್-5 ರಲ್ಲಿ ಸನ್ನದು ಹೊಂದಿರುವ ವ್ಯಕ್ತಿಗೆ ಮಾದಕ ವಸ್ತುಗಳನ್ನು ಸಾಗಣೆ ಮಾಡಲು ಸಾಗಾಣಿಕೆ ರಹದಾರಿ ಅಗತ್ಯವಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿ,ಸಿಎಲ್-2 ಅಥವಾ ಸಿಎಲ್-11(ಸಿ) ಸನ್ನದುದಾರರಿಂದ ನೀಡಲಾದ ಬಿಲ್ ಅನ್ನು ಸ್ವತಃ “ಸಾಗಾಣಿಕೆ ರಹದಾರಿ”ಎಂದು ಪರಿಗಣಿಸಲಾಗುತ್ತದೆ”. 4. 6-ಎ, 8, 8-ಎ ಮತ್ತು 8-ಬಿ ನೇ ನಿಯಮಗಳ ತಿದ್ದುಪಡಿ:– ಸದರಿ ನಿಯಮಗಳ 6-ಎ, 8, 8-ಎ ಮತ್ತು 8-ಬಿ ರ ನಿಯಮಗಳಲ್ಲಿ, “ಬ್ರೀವರಿ” ಎಂಬ ಪದಗಳು ಎಲ್ಲೆಲ್ಲಿ ಇವೆಯೋ, ಅಲ್ಲಿ “ಬ್ರೀವರಿ, ಕ್ರಾಫ್ಟ್ ಬ್ರೀವರಿ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.