:-ಕರ್ನಾಟಕ ಅಬಕಾರಿ (ಮದ್ಯಸಾರ, ಬಿಯರ್, ವೈನ್ ಅಥವಾ ಮದ್ಯಗಳ ಇಳುವರಿ, ತಯಾರಿಕೆ ಮತ್ತು ಅಪವ್ಯಯದ ನಿಯಂತ್ರಣ) ನಿಯಮಗಳು, 1998 (ಇದರಲ್ಲಿ, ಇನ್ನು ಮುಂದೆ ಸದರಿ ನಿಯಮಗಳೆಂದು ಉಲ್ಲೇಖಿಸಲಾಗಿದೆ) 2 ನೇ ನಿಯಮದ ಖಂಡ (ಸಿ) ರಲ್ಲಿ, “ಬ್ರೀವರಿಗಳು” ಎಂಬ ಪದಗಳ ಬದಲಾಗಿ “ಬ್ರೀವರಿಗಳು, ಕ್ರಾಫ್ಟ್ಬ್ರೀವರಿಗಳು” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು. 3. 3 ಮತ್ತು 4 ನೇ ನಿಯಮಗಳ ತಿದ್ದುಪಡಿ :- ಸದರಿ ನಿಯಮಗಳ 3 ಮತ್ತು 4ನೇ ನಿಯಮಗಳಲ್ಲಿ “ಡಿಸ್ಟಿಲರಿ/ಬ್ರೀವರಿ/ವೈನರಿ ಅಥವಾ ಉತ್ಪಾದನಾ ಘಟಕ”ಎಂಬ ಪದಗಳ ಬದಲಾಗಿ “ಡಿಸ್ಟಿಲರಿ/ಬ್ರೀವರಿ/ಕ್ರಾಫ್ಟ್ ಬ್ರೀವರಿ/ವೈನರಿ ಅಥವಾ ಉತ್ಪಾದನಾ ಘಟಕ”ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.
Loading…