(1) ಜಿಲ್ಲಾ ಪಂಚಾಯತಿಯು ತನಗೆ ಸೇರಿದ, ಯಾವುದೇ ಸ್ಥಿರಸ್ವತ್ತನ್ನು ಗುತ್ತಿಗೆಗೆ ನೀಡಲು, ಮಾರಾಟ ಮಾಡಲು ಅಥವಾ ದಾನದ ಮೂಲಕ ಪಡೆಯಲು, ವಿನಿಮಯದ ಮೂಲಕ ಮಾಡಲು ಅಥವಾ ಅನ್ಯಥಾ ವರ್ಗಾವಣೆ ಮಾಡಲು ಪ್ರಸ್ತಾವಿಸಿದಲ್ಲಿ, ಗುತ್ತಿಗೆ, ಮಾರಾಟ ಅಥವಾ ಅನ್ಯಥಾ ವರ್ಗಾವಣೆ ಮಾಡಲು ಪ್ರಸ್ತಾವಿಸಿದ ಸ್ವತ್ತುಗಳ ಪೂರ್ಣ ವಿವರಗಳನ್ನು ನಿರ್ದಿಷ್ಟಪಡಿಸಿ ಪ್ರಸ್ತಾವಿತ ಗುತ್ತಿಗೆ, ಮಾರಾಟ ಅಥವಾ ಇತರ ವರ್ಗಾವಣೆಯ ಬಗ್ಗೆ ನೋಟೀಸನ್ನು ಪ್ರಕಟಿಸತಕ್ಕದ್ದು.
(2) (1)ನೇ ಉಪ-ನಿಯಮದಡಿಯಲ್ಲಿ ನೋಟೀಸಿಗೆ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು ಸಹಿ ಮಾಡತಕ್ಕದ್ದು ಮತ್ತು ಪ್ರತಿಗಳನ್ನು.-
(ಎ) ಜಿಲ್ಲಾ ಪಂಚಾಯಿತಿಯ ಕಛೇರಿಯಲ್ಲಿ;
(ಬಿ) ಜಿಲ್ಲಾಧಿಕಾರಿ ಕಛೇರಿಯಲ್ಲಿ;
(ಸಿ) ಗ್ರಾಮದ ಮತ್ತು ಜಿಲ್ಲಾ ಚಾವಡಿಯಲ್ಲಿ; ಮತ್ತು
(ಡಿ) ಗುತ್ತಿಗೆ ಮಾರಾಟ ಅಥವಾ ಅನ್ಯಥಾ ರೀತಿಯಲ್ಲಿ ವರ್ಗಾವಣೆ ಮಾಡಲು ಪ್ರಸ್ತಾವಿಸಿದ ಸ್ವತ್ತಿನಲ್ಲಿ, ಎದ್ದು ಕಾಣುವ ಸ್ಥಳದಲ್ಲಿ ಅಂಟಿಸತಕ್ಕದ್ದು:
ಪರಂತು, ಪ್ರಸ್ತಾವಿತ ಸ್ಥಿರ ಸ್ವತ್ತನ್ನು ಸಾರ್ವಜನಿಕ ಹರಾಜಿನ ಮೂಲಕ ಮಾರಾಟ ಮಾಡಬೇಕಾಗಿದ್ದಲ್ಲಿ, (1)ನೇ ಉಪ-ಪ್ರಕರಣದಡಿಯಲ್ಲಿಯ ನೋಟೀಸನ್ನು, ಜಿಲ್ಲಾ ಪಂಚಾಯಿತಿಯ ಪ್ರದೇಶದಲ್ಲಿ ವ್ಯಾಪಕ ಪ್ರಸಾರದಲ್ಲಿರುವ ಒಂದು ಅಥವಾ ಹೆಚ್ಚು ಪ್ರಮುಖ ಸ್ಥಳೀಯ ವೃತ್ತ ಪತ್ರಿಕೆಗಳಲ್ಲಿ ಅವುಗಳಲ್ಲಿ ಒಂದು ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟಿಸತಕ್ಕದ್ದು ಮತ್ತು ಜಿಲ್ಲಾ ಪಂಚಾಯಿತಿಯು, ಎದ್ದು ಕಾಣುವ ಸ್ಥಳಗಳೆಂದು ಭಾವಿಸುವಂತ ಸ್ಥಳಗಳಲ್ಲಿ ಡಂಗುರ ಸಾರುವ ಮೂಲಕ ಕೂಡ ಪ್ರಕಟಿಸತಕ್ಕದ್ದು.