ನಮೂನೆ Ii
ಗುತ್ತಿಗೆ ಮೇಲೆ ವರ್ಗಾವಣೆ
ಸನ್ ಎರಡು ಸಾವಿರದ. . . . . . . . . . . . . . . . . . .ನೇ ಇಸವಿ. . . . . . . . ಮಾಹೆ. . . . . . . . . . . . . . . . . . .ದಿನದಂದು. . . . . . . . . . . .ನಲ್ಲಿ ವಾಸಿಸುತ್ತಿರುವ . . . . . . . . . . . .ನಲ್ಲಿ ವ್ಯವಹಾರ ನಡೆಸುತ್ತಿರುವ ಶ್ರೀ. . . . . . . . . . . . . . .(ಇಲ್ಲಿ ಇನ್ನು ಮುಂದೆ “ಗುತ್ತಿಗೆ ನೀಡುವವರು” ಎಂದು ಕರೆಯಲಾಗಿದೆ ಮತ್ತು ಈ ಪದವು ಸಂದರ್ಭವು ಅವಕಾಶ ನೀಡಿದಲ್ಲಿ ಅವರ ವಾರಸುದಾರರು, ನಿರ್ವಾಹಕರು, ಆಡಳಿತಗಾರರು ಮತ್ತು ಕಾನೂನು ಸಮ್ಮತ ಪ್ರತಿನಿಧಿಗಳು ಹಾಗೂ ಹಸ್ತಾಂತರ ಪಡೆದವರನ್ನು ಒಳಗೊಳ್ಳುತ್ತದೆ) ಅವರು ಒಂದು ಪಕ್ಷವಾಗಿಯೂ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993(1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ಇದರ ಮೇರೆಗೆ ರಚಿತವಾದ. . . . . . . . . . . . . . ಜಿಲ್ಲಾ ಪಂಚಾಯಿತಿಗಳ (ಇಲ್ಲಿ ಮುಂದೆ “ಗುತ್ತಿಗೆ ಪಡೆದವರು” ಎಂದು ಕರೆಯಲಾಗಿದೆ. ಈ ಪದವು ಸಂದರ್ಭವು ಅವಕಾಶ ನೀಡಿದಲ್ಲಿ ಅವರ ಅಧಿಕಾರ ಸ್ಥಾನದ ಉತ್ತರಾಧಿಕಾರಿ ಮತ್ತು ಹಸ್ತಾಂತರ ಪಡೆದವರನ್ನು ಒಳಗೊಳ್ಳುತ್ತದೆ) ಇನ್ನೊಂದು ಪಕ್ಷಕಾರರಾಗಿ ತಮ್ಮಗಳ, ನಡುವೆ ಮಾಡಿಕೊಂಡ ಗುತ್ತಿಗೆ ಕರಾರೇನೆಂದರೆ.-
ಈ ಮೂಲಕ ಮೀಸಲಿರಿಸಿದ ಬಾಡಿಗೆ ಮತ್ತು ಇದರಲ್ಲಿ ಹೇಳಲಾಗಿರುವ ಗುತ್ತಿಗೆ ಪಡೆಯುವವರ ಒಡಂಬಡಿಕೆಗಳಿಗೆ ಪ್ರತಿಫಲವಾಗಿ ಗುತ್ತಿಗೆ ನೀಡುವವರು. . . . . . . . . . . . .ಜಿಲ್ಲೆಯ. . . . ಸರ್ವೆ ನಂಬರಿನಲ್ಲಿರುವ ಮತ್ತು ಇದಕ್ಕೆ ಲಗತ್ತಿಸಿದ ಷೆಡ್ಯೂಲ್ನಲ್ಲಿ ಹೆಚ್ಚು ನಿರ್ದಿಷ್ಟವಾಗಿ ವಿವರಿಸಲಾಗಿರುವ . . . . . . . . . . . . . . . . . ಎಂದು ಕರೆಯಲಾಗಿರುವ ಎಲ್ಲಾ ಭೂಮಿಯನ್ನು ಅದರಲ್ಲಿರುವ ಕಟ್ಟಡ ಮತ್ತು ಆವರಣಗಳ ಸಮೇತ ಗುತ್ತಿಗೆ ಪಡೆದವರಿಗೆ 20. . . . . . . . ರ ಮಾಹೆಯ ದಿನಾಂಕದಿಂದ. . . . . . . . . . . . .ವರ್ಷಗಳ ಅವಧಿಯವರೆಗೆ ಅದಕ್ಕಾಗಿ ಎಲ್ಲಾ ಮುರುಗಡೆಗಳನ್ನು ಕಳೆದು. . . . . . . . . . . . . . . . .ರೂಪಾಯಿಗಳ ಮಾಸಿಕ ಬಾಡಿಗೆ ಮುಂಗಡವಾಗಿ ಪಡೆದು ವಹಿಸಿಕೊಟ್ಟಿರುತ್ತಾರೆ. ಸದರಿ ಬಾಡಿಗೆಯ ಮೊದಲ ಸಂದಾಯವನ್ನು 20. . . . . . . . .ರ. . . . . . ಮಾಹೆಯ. . . . . . . . . . . . . . . . . . . . . .ದಿನದಂದು ಮಾಡತಕ್ಕದ್ದು.
- ಗುತ್ತಿಗೆ ಬಾಡಿಗೆಯನ್ನು ಗುತ್ತಿಗೆ ನೀಡಿದವರೊಂದಿಗೆ ಈ ಮುಂದಿನಂತೆ ಒಡಂಬಡಿಕೆ ಮಾಡಿಕೊಳ್ಳುತ್ತಾರೆ.-
(1) ಕಾಯ್ದಿರಿಸಿದ ಬಾಡಿಗೆಯನ್ನು ಪ್ರತಿ ತಿಂಗಳ ಮೊದಲ ದಿನದಂದು ಅಥವಾ ಅದಕ್ಕೂ ಮೊದಲೇ ಮುಂಗಡವಾಗಿ ಮತ್ತು ಮೇಲೆ ಹೇಳಿದ ವಿಧಾನದಲ್ಲಿ ಸಂದಾಯ ಮಾಡಲಾಗುವುದು.
(2) ಸದರಿ ಆವರಣದ ಸಂಬಂಧದಲ್ಲಿ ಸಂದಾಯ ಮಾಡತಕ್ಕ ಹಾಲಿ ಇರುವ ಮತ್ತು ಭವಿಷ್ಯದ ತೆರಿಗೆಗಳು, ಋಣ ಭಾರಗಳು, ಆಕಾರಗಳು ಮತ್ತು ಇತರ ಹಣ ಸಂದಾಯಗಳನ್ನು ವಹಿಸಿಕೊಳ್ಳಲಾಗುವುದು, ಸಂದಾಯ ಮಾಡಲಾಗುವುದು ಮತ್ತು ಚುಕ್ತಾ ಮಾಡಲಾಗುವುದು.
(3) ತಮಗೆ ವಹಿಸಿಕೊಡಲಾದ ಆವರಣದ ಒಳಭಾಗ ಮತ್ತು ಹೊರಭಾಗ ಮತ್ತು ಅದಕ್ಕೆ ಸೇರ್ಪಡೆಯಾದ ಎಲ್ಲಾ ನಿರ್ಮಿತಿಗಳನ್ನು ಸುತ್ತಲ ಗೋಡೆ ಮತ್ತು ಬೇಲಿಗಳು, ಚರಂಡಿ, ಮಣ್ಣು, ಇತರ ನೈರ್ಮಲ್ಯ ವ್ಯವಸ್ಥೆಯ ನೀರಿನ ಪೈಪುಗಳು ಮತ್ತು ಸಲಕರಣೆಗಳು, ವಿದ್ಯುತ್ ಜೋಡಣೆಗಳು ಮತ್ತು ಅಳವಡಿಕೆಗಳನ್ನು ಸೂಕ್ತವಾದ ಬಾಡಿಗೆಗೆ ನೀಡಬಹುದಾದ ರೀತಿಯಲ್ಲಿ ದುರಸ್ತಿ ಮತ್ತು ಉತ್ತಮ ಸುಸ್ಥಿತಿಯಲ್ಲಿ ಇಟ್ಟುಕೊಂಡು ಬರಲಾಗುವುದು.
(4) ಗುತ್ತಿಗೆ ನೀಡುವವರ ಲಿಖಿತ ಪೂರ್ವಾನುಮತಿಯನ್ನು ಪಡೆಯದೆ, ಈ ವಹಿಸಿಕೊಡಲಾದ ಕಟ್ಟಡದಲ್ಲಿ ಯಾವ ಸಂದರ್ಭದಲ್ಲೂ ಯಾವುದೇ ಮಾರ್ಪಾಡನ್ನು ಅಥವಾ ಸೇರ್ಪಡೆಯನ್ನು ಮಾಡುವುದಿಲ್ಲ ಅಥವಾ ಮಾಡಲು ಅವಕಾಶ ನೀಡುವುದಿಲ್ಲ. ಆದರೆ ಗುತ್ತಿಗೆ ನೀಡುವವರು, ಗುತ್ತಿಗೆ ಪಡೆದವರಿಗೆ ಹಾಗೆ ಯಾವುದೇ ಮಾರ್ಪಾಡನ್ನು ಮಾಡಿಕೊಳ್ಳಲು ಅನುಮತಿ ನೀಡಿದರೆ ಆಗ ಗುತ್ತಿಗೆ ಪಡೆದವರು ಆ ಕುರಿತು ಯಾವುದೇ ಪರಿಹಾರವನ್ನು ಪಡೆಯಲು ಹಕ್ಕುದಾರರಾಗಿರುವುದಿಲ್ಲ.
(5) ಗುತ್ತಿಗೆ ನೀಡುವವರು ಕೆಲಸಗಾರರೊಂದಿಗೆ ಅಥವಾ ಅವರಿಲ್ಲದೆ ಎಲ್ಲಾ ಸಮಂಜಸ ಕಾಲಾವಧಿಯಲ್ಲಿ 1 ದಿನದ ಪೂರ್ವ ಸೂಚನೆ ನೀಡಿ, ಹಾಗೆ ವಹಿಸಿಕೊಡಲಾದ ಆವರಣವನ್ನು ಪ್ರವೇಶಿಸಿ ಅದರ ಪರಿಸ್ಥಿತಿ ಗಮನಿಸಲು ಅವಕಾಶ ನೀಡಲಾಗುವುದು ಮತ್ತು ಗುತ್ತಿಗೆ ನೀಡುವವರು ನೋಟೀಸ್ ಕೊಟ್ಟ ಮೇಲೆ ಹಾಗೂ ನೋಟೀಸ್ ಕೊಟ್ಟ ಒಂದು ತಿಂಗಳ ಒಳಗೆ ಅದಕ್ಕೆ ಅನುಗುವಣವಾಗಿ ರಿಪೇರಿ ಮಾಡಲಾಗುವುದು.
(6) ಗುತ್ತಿಗೆ ನೀಡಿದವರು ಲಿಖಿತ ಅನುಮತಿಯನ್ನು ಮೊದಲು ಪಡೆದುಕೊಳ್ಳದೇ ತಮಗೆ ವಹಿಸಿಕೊಟ್ಟ ಆವರಣ ಅಥವಾ ಭಾಗವನ್ನು ಹಸ್ತಾಂತರ ಮಾಡುವುದಿಲ್ಲ. ಮರು ಬಾಡಿಗೆಗೆ ನೀಡುವುದಿಲ್ಲ ಅಥವಾ ಅದರ ಸ್ವಾಧೀನ ಬಿಟ್ಟುಕೊಡುವುದಿಲ್ಲ.
(7) ಇದರೊಳಗೆ ಇರುವಂತಹ ಒಡಂಬಡಿಕೆಗೆ ಅನುಗುಣವಾಗಿ ಗುತ್ತಿಗೆ ಅವಧಿ ಮುಕ್ತಾಯವಾದ ತರುವಾಯ ವಹಿಸಿಕೊಡಲಾದ ಆವರಣವನ್ನು ಅದರ ಎಲ್ಲಾ ಜೋಡಣೆಗಳು ಮತ್ತು ಸೇರ್ಪಡೆಗಳೊಂದಿಗೆ ಉತ್ತಮ ಮತ್ತು ಬಾಡಿಗೆ ನೀಡುವಂತೆ ದುರಸ್ತಿಯಾದ ಸುಸ್ಥಿತಿಯಲ್ಲಿ ಬಿಟ್ಟು ಕೊಡಲಾಗುವುದು.
- ಗುತ್ತಿಗೆ ನೀಡುವವರು, ಗುತ್ತಿಗೆ ಪಡೆದವರೊಂದಿಗೆ ಈ ಮುಂದಿನಂತೆ ಒಡಂಬಡಿಕೆ ಮಾಡಿಕೊಂಡಿರುತ್ತಾರೆ.
(1) ಗುತ್ತಿಗೆ ಪಡೆದವರು ಮೀಸಲಿರಿಸಿದ ಬಾಡಿಗೆಯನ್ನು ಕ್ರಮಬದ್ಧವಾಗಿ ಸಂದಾಯ ಮಾಡುತ್ತಾ ಬಂದು ತಮ್ಮ ಪಾಲಿನ ಇದರೊಳಗೆ ಒಳಗೊಂಡ ವಿವಿಧ ಒಡಂಬಡಿಕೆ ಹಾಗೂ ನಿರ್ದಿಷ್ಟಪಡಿಸಿದ ವಿಷಯಗಳನ್ನು ಪಾಲಿಸುತ್ತ ಮತ್ತು ನೆರವೇರಿಸಲು ಬಂದಲ್ಲಿ ಗುತ್ತಿಗೆ ನೀಡುವವರು ಅಥವಾ ಅವರ ಅಧೀನ ಒಂದು ವ್ಯಾಸದ ಅಡಿಯಲ್ಲಿ ಅಥವಾ ಮೇರೆಗೆ ಕಾನೂನು ಬದ್ಧವಾಗಿ ಕ್ಲೇಮು ಮಾಡುತ್ತಿರುವ ಯಾವ ವ್ಯಕ್ತಿಯಿಂದಲೂ ಯಾವುದೇ ಅಡಚಣೆ ಇಲ್ಲದಂತೆ ಸದರಿ ಕಾಲಾವಧಿಯಲ್ಲಿ ವಹಿಸಿಕೊಡಲಾದ ಆವರಣವನ್ನು ಗುತ್ತಿಗೆ ಪಡೆದವರು ಶಾಂತಿಯುತವಾಗಿ ಹೊಂದಿದ್ದು ಅನುಭವಿಸಬಹುದು.
(2) ಸಮಂಜಸವಾದ ಸವೆತ ಮತ್ತು ಹರಿತದಿಂದಾಗಿ ಅಡಿಪಾಯ, ಮುಖ್ಯ ಗೋಡೆ ಮತ್ತು ಛಾವಣಿಗೆ ಮಾಡಬೇಕಾದ ಎಲ್ಲಾ ರಿಪೇರಿಗಳನ್ನು ಮಾಡಿಕೊಡುತ್ತೇನೆ. ಇಂತಹ ರಿಪೇರಿ ಅಗತ್ಯವಿದೆಯೆಂದು. . . . . . . . . . . . .ಜಿಲ್ಲಾ ಪಂಚಾಯಿತಿಯಲ್ಲಿ ತತ್ಕಾಲದಲ್ಲಿರುವ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ನೀಡಿದ ನಿರ್ಣಯವೇ ಅಂತಿಮವಾಗಿರುತ್ತದೆ.
- ಪರಂತು, ಈ ಪತ್ರದ 2 ಪಕ್ಷಕಾರರು ಎಲ್ಲಾ ಕಾಲಕ್ಕೂ ಈ ಮುಂದಿನಂತೆ, ಈ ಮೂಲಕ ವ್ಯಾಪ್ತವಾಗಿ ಒಪ್ಪಂದ ಮಾಡಿಕೊಂಡಿರುತ್ತಾರೆ.-
(1) ಇಲ್ಲಿ ಮೀಸಲಿರಿಸಿದ ಬಾಡಿಗೆ ಅಥವಾ ಅದರ ಯಾವುದೇ ಭಾಗವನ್ನು ಅದು ಸಂದಾಯವಾಗತಕ್ಕ ದಿನಾಂಕದಿಂದ 14 ದಿನಗಳ ಕಾಲ ಸಂದಾಯವಾಗದೇ ಉಳಿದರೆ (ಆ ಬಗ್ಗೆ ಪದ್ಧತಿಯಂತೆ ಬಂದು ಕೇಳಿರಲಿ/ಕೇಳಿರದಿರಲಿ) ಅಥವಾ ಗುತ್ತಿಗೆ ಪಡೆದವರ ಕಡೆಯಿಂದ ಇದರಲ್ಲಿ ಒಳಗೊಂಡ ಯಾವುದೇ ಒಡಂಬಡಿಕೆಯನ್ನು ಪಾಲಿಸದೇ ಹೋದಲ್ಲಿ ಅಥವಾ ನೆರವೇರಿಸದೇ ಹೋದಲ್ಲಿ ಅಥವಾ ನೆರವೇರಿಸದೇ ಹೋದಲ್ಲಿ ಆಗ ಈ ಯಾವುದೇ ಸಂದರ್ಭದಲ್ಲಿ ಗುತ್ತಿಗೆ ನೀಡಿದವರು ಆ ತರುವಾಯದ ಯಾವುದೇ ಸಮಯದಲ್ಲಿ ಹಾಗೆ ವಹಿಸಿಕೊಡಲಾದ ಆವರಣವನ್ನು ಅಥವಾ ಇಡೀ ಆವರಣದ ಹೆಸರಿನಲ್ಲಿ ಅದರ
ಯಾವುದೇ ಒಂದು ಭಾಗವನ್ನು ಪುನಃ ಪ್ರವೇಸಿಸುವುದು ಕಾನೂನು ಸಮ್ಮತವಾಗಿರತಕ್ಕದ್ದು, ಮತ್ತು ಹಾಗೆ ಮಾಡಿದ ತರುವಾಯ ಹೀಗೆ ವಹಿಸಿಕೊಂಡಿರುವುದು ಸಂಪೂರ್ಣವಾಗಿ ಅಂತ್ಯಗೊಳ್ಳತಕ್ಕದ್ದು, ಆದರೆ ಇದು, ಇದರೊಳಗೆ ಹೇಳಿರುವಂತೆ ಗುತ್ತಿಗೆ ಪಡೆಯುವವರು ತಾವು ಮಾಡಿಕೊಂಡ ಒಡಂಬಡಿಕೆಯನ್ನು ಭಂಗಗೊಳಿಸಿದ್ದಕ್ಕಾಗಿ ಗುತ್ತಿಗೆ ನೀಡುವವರು ಕ್ರಮ ಕೈಗೊಳ್ಳಲು ಇರುವ ಹಕ್ಕಿಗೆ ಯಾವುದೇ ಬಾಧೆ ಉಂಟು ಮಾಡತಕ್ಕುದ್ದಲ್ಲ.
(2) ಗುತ್ತಿಗೆ ಪಡೆದವರು ಹೀಗೆ ಗುತ್ತಿಗೆಯಾಗಿ ನೀಡಿರುವುದನ್ನು ಅಂತ್ಯಗೊಳಿಸಲು ಇಚ್ಛಿಸಿದಲ್ಲಿ ಮತ್ತು ಅಂತಹ ಇಚ್ಛೆಯನ್ನು 3 ಕ್ಯಾಲೆಂಡರ್ ತಿಂಗಳುಗಳ ಪೂರ್ವ ನೋಟೀಸನ್ನು ಬರಹದಲ್ಲಿ ಗುತ್ತಿಗೆ ನೀಡಿದವನಿಗೆ ಕೊಟ್ಟಲ್ಲಿ ಆಗ ಸದರಿ 3 ಕ್ಯಾಲೆಂಡರ್ ತಿಂಗಳುಮುಕ್ತಾಯವಾದ ತಕ್ಷಣ ಅದರ ಮೂಲಕ ವಹಿಸಿಕೊಟ್ಟ ಗುತ್ತಿಗೆ ಮತ್ತು ಇದರಲ್ಲಿ ಒಳಗೊಂಡ ಎಲ್ಲವೂ ಅಂತ್ಯಗೊಳ್ಳತಕ್ಕದ್ದು ಮತ್ತು ಶೂನ್ಯವಾಗತಕ್ಕದ್ದು. ಆದರೆ ಇದರಲ್ಲಿರುವುದು ಯಾವುದು ಇಬ್ಬರೂ ಪಕ್ಷಕಾರರ ಎದುರು, ಪಕ್ಷಕಾರರ ವಿರುದ್ಧ ಯಾವುದೇ ಮುಂಬರುವ ಕ್ಲೇಮು ಅಥವಾ ಒಡಂಬಡಿಕೆಯ ಸಂಬಂಧದಲ್ಲಿ ಅಥವಾ ಒಡಂಬಡಿಕೆಯ ಭಂಗದ ಸಂಬಂಧದಲ್ಲಿ ಕೈಗೊಳ್ಳಬಹುದಾದ ಪರಿಹಾರಕ್ಕೆ ಬಾಧೆಯನ್ನುಂಟು ಮಾಡತಕ್ಕದ್ದಲ್ಲ.
(3) ಇದರೊಳಗೆ ಮಂಜೂರು ಮಾಡಲಾದ ಕಾಲಾವಧಿ ಮುಕ್ತಾಯವಾಗುವ ಮುನ್ನಾ 3 ಕ್ಯಾಲೆಂಡರ್ ತಿಂಗಳಿನೊಳಗೆ ಗುತ್ತಿಗೆ ಪಡೆದವರು ಲಿಖಿತ ಮನವಿ ಮಾಡಿಕೊಂಡ ಮೇಲೆ ವಹಿಸಿಕೊಡಲಾದ ಆವರಣದ ಗುತ್ತಿಗೆಯನ್ನು ಇನ್ನೂ. . . . . . . . . . . . ವರ್ಷಗಳ ಅವಧಿಗೆ ಗುತ್ತಿಗೆ ನೀಡುವವರು ಗುತ್ತಿಗೆ ಪಡೆಯುವವರಿಗೆ ಮಂಜೂರು ಮಾಡಬಹುದು ಮತ್ತು ಅದಕ್ಕಾಗಿ ಇದರೊಳಗೆ ಒಳಗೊಂಡ ಎಲ್ಲಾ ಒಡಂಬಡಿಕೆ ಉಪಬಂಧಗಳ ಮೇಲೆ ನವೀಕರಿಸುವ ಒಡಂಬಡಿಕೆಯೊಂದಿಗೆ ಅಥವಾ ಅದಿಲ್ಲದೇ ಮಂಜೂರು ಮಾಡಬಹುದು.
ಇದಕ್ಕೆ ಸಾಕ್ಷಿಯಾಗಿ ಗುತ್ತಿಗೆ ನೀಡುವವರು ಮೇಲೆ ವರ್ಷ ಮತ್ತು ದಿನಾಂಕದಂದು ತಮ್ಮ ಸಹಿಯನ್ನು ಮತ್ತು ಮೊಹರನ್ನು ಹಾಕಿರುತ್ತಾರೆ. ಹಾಗೂ ಗುತ್ತಿಗೆ ಪಡೆದವರಾಗಿ. . . . . . . . . . . ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಮುದ್ರೆ ಇದಕ್ಕೆ ಹಾಕಿರುತ್ತಾರೆ. ಮೇಲೆ ಉಲ್ಲೇಖಿಸಲಾದ ಅನುಸೂಚಿ. . . . . . . . . .ಜಿಲ್ಲೆ. . . . . . . . . . . . . . .ಗ್ರಾಮದಲ್ಲಿ ಉತ್ತರಕ್ಕೆ. . . . . . . . . . . . .ದಕ್ಷಿಣಕ್ಕೆ. . . . . . . . ಪೂರ್ವಕ್ಕೆ. . . . . . . . . . . . . . . ಪಶ್ಚಿಮಕ್ಕೆ . . . . . . . . . . . . . . . . . . . . . . . . . . .ಚುಕ್ಕುಬಂದಿ ಇರುವ . . . . . . . . . . . ಸರ್ವೆ ನಂಬರಿನ. . . . . . . . . . . . . . . . . . .ವಿಸ್ತೀರ್ಣವುಳ್ಳ (ಅಷ್ಟೇ ಇರಬಹುದು ಅಥವಾ ಹೆಚ್ಚು ಕಡಿಮೆಯಿರಬಹುದು) ಯಾವತ್ತೂ ಪೂರ್ಣ ಭೂಮಿ ಮತ್ತು ಆವರಣ.
. . . . . . . . . . . . . . . . . . ಅವರ ಸಮಕ್ಷಮದಲ್ಲಿ ಮೇಲೆ ಹೆಸರಿಸಲಾದವರು ಸಹಿ ಹಾಕಿ, ಮುದ್ರೆ ಹಾಕಿ ವಶಾವಣೆ ಮಾಡಿರುತ್ತಾರೆ. . . . . . . . . . . . . . . . . . . . . . . ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರು. . . . . . . ಅವರ ಸಮಕ್ಷಮದಲ್ಲಿ ಸಹಿ ಹಾಕಿರುತ್ತಾರೆ. . . . . . . . . . . . . . . . . . ಅವರ ಸಮಕ್ಷಮ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಮೊಹರನ್ನು ಇದಕ್ಕೆ ಹಾಕಲಾಗಿದೆ.
ನಮೂನೆIII ಅಡಮಾನದ ಮೂಲಕ ವರ್ಗಾವಣೆ
ಸನ್ ಎರಡು ಸಾವಿರದ. . . . . . . . . . . . . . . . ನಲ್ಲಿ ವಾಸಿಸುತ್ತಿರುವ. . . . . . . . . .ಅವರ ಮಗನಾದ . . . . . . . . ಅವರು (ಇಲ್ಲಿ ಇನ್ನು ಮುಂದೆ “ಅಡಮಾನದಾರರು” ಎಂದು ಕರೆಯಲಾಗಿದೆ. ಈ ಪದವು ಸಂದರ್ಭವು ಅವಕಾಶ ನೀಡಿದಲ್ಲಿ ಅವರ ವಾರಸುದಾರರು, ನಿರ್ವಾಹಕರು ಮತ್ತು ಕಾನೂನು ಸಮ್ಮತ ಪ್ರತಿನಿಧಿಗಳನ್ನು ಒಳಗೊಳ್ಳುತ್ತದೆ). ಒಬ್ಬ ಪಕ್ಷಕಾರರಾಗಿಯೂ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993ರ (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ಮೇರೆಗೆ ರಚಿಸಲಾದ. . . . . . . . . . . . ಜಿಲ್ಲಾ ಪಂಚಾಯಿತಿಯು (ಇಲ್ಲಿ ಇನ್ನು ಮುಂದೆ “ಅಡಮಾನ ಪಡೆದವರು” ಎಂದು ಕರೆಯಲಾಗಿದೆ. ಈ ಪದವು ಸಂದರ್ಭವು ಅವಕಾಶ ನೀಡಿದಲ್ಲಿ ಅವರ ಅಧಿಕಾರ
ಸ್ಥಾನದ ಉತ್ತರಾಧಿಕಾರಿ ಮತ್ತು ಹಸ್ತಾಂತರ ಪಡೆದವರನ್ನು ಒಳಗೊಳ್ಳುತ್ತದೆ) ಇನ್ನೊಂದು ಪಕ್ಷಕಾರರಾಗಿಯೂ, ತಮ್ಮಗಳ ನಡುವೆ ಮಾಡಿಕೊಂಡ ಅಡಮಾನ ಪತ್ರ ಏನೆಂದರೆ.-
ಅಡಮಾನದಾರರು ಈ ಪತ್ರದ ಅನುಸೂಚಿಯಲ್ಲಿ ವಿವರಿಸಲಾದ ಯಾವತ್ತೂ ಭೂಮಿ ಮತ್ತು ಆವರಣಗಳಿಗೆ ಸಮರ್ಪಕವಾಗಿ ಮತ್ತು ನಿಜವಾಗಿ ಹಕ್ಕುಳ್ಳವರಾಗಿರುವುದರಿಂದ.
ಮತ್ತು ಅಡಮಾನ ಪಡೆದವರು ಇಲ್ಲಿ ಇನ್ನು ಮುಂದೆ ಕಂಡು ಬರುವ ರೀತಿಯಲ್ಲಿ ಮರು ಸಂದಾಯ ಮಾಡುವುದಕ್ಕೊಳಪಟ್ಟು. . . . . . . . . . . . . .ರೂಪಾಯಿಯ ಮೊಬಲಗನ್ನು ಅಡಮಾನದಾರರಿಗೆ ಸಾಲವಾಗಿ ನೀಡಲು ಒಪ್ಪಿಕೊಂಡಿರುವುದರಿಂದ.
ಈಗ ಈ ಪತ್ರವು, ಅಡಮಾನದಾರರಿಗೆ ಈ ಪತ್ರ ಬರೆಯುವುದು ಅಥವಾ ಬರೆಯುವುದಕ್ಕೆ ಮುಂಚೆ ನೀಡಲಾದ. . . . . . . . . . . . .ರೂಪಾಯಿಗಳ ಮೊಬಲಗಿನ ಪ್ರತಿಫಲವಾಗಿ (ಅದರ ಸ್ವೀಕೃತಿಯನ್ನು ಅಡಮಾನದಾರರು ಈ ಮೂಲಕ ಒಪ್ಪಿಕೊಂಡಿರುತ್ತಾರೆ) ಅಡಮಾನದಾರರು. . . . . . . . . . . . ಜಿಲ್ಲೆಯ. . . . . . . . ಗ್ರಾಮ . . . . . . . . . . . . . ನಲ್ಲಿ ಇರುವ ಮತ್ತು ಈ ಕೆಳಗೆ ಬರೆಯಲಾದ ಅನುಸೂಚಿಯಲ್ಲಿ ಹೆಚ್ಚು ನಿರ್ದಿಷ್ಟವಾಗಿ ವಿವರಿಸಲಾದ ಮತ್ತು ಅದರಲ್ಲಿ ನಿರ್ಮಿಸಲಾದ ಗೃಹವಾಟಿಕೆ ಅಥವಾ ನಿವಾಸವೂ ಸೇರಿ ಸಾಮಾನ್ಯವಾಗಿ . . . . . . . . . . . ಎಂದು ಕರೆಯುವ ಭೂಮಿಯ ಎಲ್ಲಾ ಭಾಗವನ್ನು ಅದರಲ್ಲಿರುವ ಎಲ್ಲಾ ಕಟ್ಟಡಗಳು, ಗೋದಾಮುಗಳು, ಮರಗಳು, ಸಾಮಾನ್ಯ ಬದುಗಳು, ತಗ್ಗುಗಳು, ಬೇಲಿಗಳು, ದಾರಿಗಳು, ನೀರು ಮತ್ತು ಜಲಮಾರ್ಗಗಳು, ಸ್ವಾತಂತ್ರ್ಯಗಳು, ವಿಶೇಷ ಹಕ್ಕುಗಳು, ಅನುಭೋಗ ಹಕ್ಕುಗಳು, ಸೌಲಭ್ಯಗಳು ಮತ್ತು ಸದರಿ ಯಾವತ್ತು ಭೂಮಿಗೆ ಗೃಹವಾಟಿಕೆ ಮತ್ತು ಅವರಣಗಳಿಗೆ ಅಥವಾ ಅವುಗಳಲ್ಲಿ ಯಾವುದಕ್ಕಾದರೂ ಲಗತ್ತಾದವುಗಳನ್ನು ಮತ್ತು ಅದಕ್ಕೆ ಯಾವುದೇ ರೀತಿಯಲ್ಲಿ ಇದಕ್ಕೆ ಮುಂಚೆ ಅದಕ್ಕೆ ಸಂಬಂಧಿಸಿ ಅಥವಾ ಈ ತರುವಾಯ ಅದರೊಂದಿಗೆ ಅನುಭವಿಸಲಾದ ಯಾವುದೇ ಗೃಹ ವಾಟಿಕೆ ಮತ್ತು ಆವರಣದಲ್ಲಿ ಮತ್ತು ಆಡಮಾನದಾರನು ಹೊಂದಿದ್ದ ಎಲ್ಲಾ ಹಕ್ಕು, ಮೂಲ ಹಿತಾಸಕ್ತಿ, ಸ್ವತ್ತು, ಕ್ಲೇಮು ಮತ್ತು ತಗಾದೆಗಳು ಸೇರಿ ಸದರಿ ಭೂಮಿಯನ್ನು ಈ ಮೂಲಕ ಅಡಮಾನ ಪಡೆದವರಿಗೆ ಇಲ್ಲಿ ಇನ್ನು ಮುಂದೆ ಅಡಮಾನ ಬಿಡಿಸಿಕೊಳ್ಳುವುದಕ್ಕೆ ಸಂಬಂಧಿಸಿದ ಪರಂತುಕಕ್ಕೊಳಪಟ್ಟು, ಈ ಮೂಲಕ ಎಲ್ಲಾ ಕಾಲಕ್ಕೂ ಭೋಗ್ಯದ ಮೇಲೆ ನೀಡಿ, ವರ್ಗಾಯಿಸಿ ಹಸ್ತಾಂತರ ಮಾಡಿದ್ದಾರೆ ಮತ್ತು ಅಡಮಾನ ಮಾಡುವವರು ಅಡಮಾನದ ಸ್ವತ್ತಿನ ಸ್ವಾಧೀನವನ್ನು ಅಡಮಾನ ಪಡೆಯುವವರಿಗೆ ವಹಿಸಿಕೊಟ್ಟಿರುತ್ತಾರೆಂದು, ಅಡಮಾನ ಪಡೆದವರಿಗೆ ಸದರಿ. . . . . . . . ರೂ. ಮೊಬಲಗನ್ನು ಸಂದಾಯ ಮಾಡುವವರೆಗೆ ಅಡಮಾನ ಪಡೆದವರು ಹಾಗೆ ಸ್ವತ್ತಿನ ಸ್ವಾಧೀನ ಹೊಂದಿರುವುದು ಮುಂದುವರೆಯತಕ್ಕದೆಂದು ಮತ್ತು ಅಡಮಾನದ ಹಣದ ಸಂಬಂಧದಲ್ಲಿ ಬರಬೇಕಾದ ಬಡ್ಡಿಗೆ ಬದಲಾಗಿ ಅಡಮಾನ ಪಡೆಯುವವರು ಸದರಿ ಸ್ವತ್ತಿನಿಂದ ಬರುವ ಬಾಡಿಗೆಗಳು, ಲಾಭಗಳನ್ನು ವಿನಿಯೋಗಿಸಿಕೊಳ್ಳತಕ್ಕದ್ದೆಂದು ಈ ಮೂಲಕ ಘೋಷಿಸಿರುತ್ತಾರೆ. ಮತ್ತು ಅಡಮಾನದಾರರು ಅಡಮಾನ ಪಡೆದವರೊಂದಿಗೆ ತಾವು ಈ ಪತ್ರಕ್ಕೆ ಭದ್ರತೆಯಾಗಿ ಯಾವುದೇ ಹಣ ಬಾಕಿ ಉಳಿದಿರುವವರೆಗೂ ಈ ಹಿಂದೆ ನೀಡಲಾಗಿದೆ. ಹಸ್ತಾಂತರಿಸಲಾಗಿದೆ ಮತ್ತು ವರ್ಗಾಯಿಸಲಾಗಿದೆ ಎಂದು ಹೇಳಲಾದ ಸದರಿ ಆವರಣದಲ್ಲಿ ಈಗ ಹಾಲಿ ಇರುವ ಎಲ್ಲಾ ಗೃಹವಾಟಿಕೆಗಳು, ಕಟ್ಟಡಗಳು ಅಥವಾ ಇನ್ನು ಮುಂದೆ ನಿರ್ಮಿಸಬಹುದಾದ ಗೃಹವಾಟಿಕೆ ಕಟ್ಟಡಗಳನ್ನು ಚೆನ್ನಾಗಿ ಮತ್ತು ಗಣನೀಯವಾಗಿ ದುರಸ್ತಿಯಾಗಿ ಇರಿಸುವುದಾಗಿ ಮತ್ತು. . . . . . . . . . . . . . . . .ರೂಪಾಯಿ ಮೊಬಲಗಿಗೆ ಅಡಮಾನ ಪಡೆಯುವವರ ಹೆಸರಿನಲ್ಲಿ ಮತ್ತು ಅವರು ಅಂಗೀಕರಿಸುವ ಕಛೇರಿಗಳಲ್ಲಿ ಅಗ್ನಿ ಅನಾಹುತದಿಂದ ಹಾನಿ ಅಥವಾ ನಷ್ಟದ ವಿರುದ್ಧ ವಿಮೆ ಮಾಡಲು ಮತ್ತು ಆ ಉದ್ದೇಶಕ್ಕಾಗಿ ಅವಶ್ಯವಾದ ಎಲ್ಲಾ ವಿಮಾ ಕಂತು ಮತ್ತು ಹಣವನ್ನು ವಿಮೆಯನ್ನು ಊರ್ಜಿತವಾಗಿ ಉಳಿಸಿಕೊಂಡು ಬರುವಂತೆ ಕ್ರಮಬದ್ಧವಾಗಿ ಸಕಾಲದಲ್ಲಿ ಸಂದಾಯ ಮಾಡುವುದಾಗಿ ಮತ್ತು ಎಲ್ಲಾ ಸದರಿ ಆವರಣದ ಸಂಬಂಧದಲ್ಲಿ ತಾತ್ಕಾಲದಲ್ಲಿ ಸಂದಾಯವಾಗತಕ್ಕ ಅಥವಾ ಋಣಭಾರ ಹೊರಿಸಿದಂತಹ ಜೋಡಿ ಕಂದಾಯಗಳು, ಆಕಾರ ದರಗಳು, ತೆರಿಗೆಗಳನ್ನು ಮತ್ತಿತರ ಹಣ ಸಂದಾಯಗಳನ್ನು ಅಥವಾ ಅವುಗಳಲ್ಲಿ ಯಾವುದಾದರೊಂದನ್ನು ಕ್ರಮಬದ್ಧವಾಗಿ ಮತ್ತು ಸಕಾಲದಲ್ಲಿ ಸಂದಾಯ ಮಾಡಲು ಮತ್ತು ಅಡಮಾನ ಪಡೆದವರಿಗೆ ಆ ವಿಮಾ ಪಾಲಿಸಿ ಅಥವಾ ಪಾಲಿಸಿಗಳನ್ನು ಮತ್ತು ಮೇಲೆ ಹೇಳಿದ ರೀತಿಯಲ್ಲಿ ಸಂದಾಯವಾಗತಕ್ಕ ಪ್ರತಿಯೊಂದರ ರಸೀದಿಯನ್ನು ಕೂಡಲೇ ಒಪ್ಪಿಸಲು ಹಾಗೂ ಸದರಿ ಕಟ್ಟಡವನ್ನು ಹಾಗೆ ರಿಪೇರಿ ಸ್ಥಿತಿಯಲ್ಲಿರಿಸಲು ಅಥವಾ ಹಾಗೆ ವಿಮೆ ಮಾಡಲು ಅಥವಾ ಮಾಡಿದ ವಿಮೆ ಊರ್ಜಿತವಾಗಿರಿಸಲು ಅಥವಾ ಮೇಲೆ ಹೇಳಿದಂತೆ ಜೋಡಿ ಕಂದಾಯ, ಆಕಾರ ದರಗಳು, ತೆರಿಗೆಗಳು, ಮತ್ತಿತರ ಹಣ ಸಂದಾಯ ಮಾಡಲು ಅಥವಾ ಮೇಲೆ ಹೇಳಿದಂತೆ ಯಾವುದೇ ವಿಮಾ ಪಾಲಿಸಿ ಅಥವಾ ಪಾಲಿಸಿಗಳು, ರಸೀದಿಗಳನ್ನು ಹಾಗೆ ತಂದೊಪ್ಪಿಸಲು ತಪ್ಪಿದಲ್ಲಿ ಅಡಮಾನ ಪಡೆದವರು ಸದರಿ ಆವರಣವನ್ನು ಸರಿಯಾಗಿ ಮತ್ತು ಸಾಕಷ್ಟು ಸರಿಯಾದ ರಿಪೇರಿಯಲ್ಲಿರಿಸಲು ಅಥವಾ ಸಂದರ್ಭಾನುಸಾರ ಮೇಲೆ ಹೇಳಿದಂಥ ಯಾವುದೇ ಮೊಬಲಗಿಗೆ ಸದರಿ ಕಟ್ಟಡ ವಿಮೆ ಮಾಡಿಸುವುದು ಮತ್ತು ವಿಮೆಯ ಸ್ಥಿತಿಯಲ್ಲಿರಿಸುವುದು ಹಾಗೂ
ವಿಮಾ ಕಂತುಗಳನ್ನು ಮತ್ತು ಹಾಗೆ ಮಾಡಲು ಉಂಟಾದ ವೆಚ್ಚವನ್ನು ಅಥವಾ ಸಂದರ್ಭಾನುಸಾರ ಅಂಥ ಜೋಡಿಕಂದಾಯ, ಆಕಾರ ದರ, ತೆರಿಗೆ ಅಥವಾ ಇತರ ಹಣ ಸಂದಾಯವನ್ನು ಕಾನೂನು ಸಮ್ಮತ ಆದರೆ ಕಡ್ಡಾಯವಾಗತಕ್ಕದ್ದು ಎಂದು ಒಡಂಬಡಿಕೆ ಮಾಡಿಕೊಟ್ಟಿರುತ್ತಾರೆ. ಅಷ್ಟೇ ಅಲ್ಲದೇ ಅಡಮಾನದಾರರು ಅಡಮಾನ ಪಡೆದವರಿಗೆ ಇಂಥ ಎಲ್ಲಾ ವಿಮಾ ಕಂತು ವೆಚ್ಚಗಳು, ಮತ್ತಿತರ ಹಣವನ್ನು ಪ್ರತಿಯೊಂದು ಸಂದಾಯ ಸಮಯದಿಂದ ಸಾಲಿಯಾನ ಶೇ.. . . . . . . . . . ದರದಲ್ಲಿ ಬಡ್ಡಿ ಸಮೇತ ಕೂಡಲೇ ಮರುಸಂದಾಯ ಮಾಡುವುದಾಗಿ ಹಾಗೂ ಹಾಗೆ ಮರು ಸಂದಾಯ ಮಾಡುವಲ್ಲಿ ಈ ಮೂಲಕ ಅಡಮಾನ ಮಾಡಿದ ಆವರಣವು ಸದರಿ ಸಂದಾಯ ಮಾಡಬೇಕಾದ ಮೊಬಲಗು ಮತ್ತು ಮೇಲೆ ಹೇಳಿದ ದರದಲ್ಲಿನ ಅದರ ಮೇಲಿನ ಬಡ್ಡಿ ಸಮೇತ ಋಣಭಾರ ಹೊಂದಿರುತ್ತದೆಂದು ಮತ್ತು ಯಾವುದೇ ವಿಮೆಯ ಸಂಬಂಧದಲ್ಲಿ ಸ್ವೀಕರಿಸಿದ ಹಣವನ್ನು ಅಡಮಾನ ಪಡೆದವರ ಇಚ್ಛಾನುಸಾರ, ವಿಮೆ ಮಾಡಲಾದ ಕಟ್ಟಡವನ್ನು ಪುನಃ ಸ್ಥಾಪಿಸಲು ಅಥವಾ ಜೀರ್ಣೋದ್ಧಾರ ಮಾಡಲು ಇಲ್ಲವೇ ಈ ಪತ್ರಕ್ಕೆ ಭದ್ರತೆಯಾಗಿ ಇರುವ ಹಣದ ಮರು ಸಂದಾಯಕ್ಕೆ ವಿನಿಯೋಗಿಸುವುದಾಗಿಯೂ ಒಡಂಬಡಿಕೆ ಮಾಡಿಕೊಂಡಿರುತ್ತಾರೆ. ಮುಂದುವರೆದು ಅಡಮಾನದಾರರು ಅಡಮಾನ ಪಡೆದವರಿಂದ ತಾನು ಈ ಭೋಗ್ಯವನ್ನು ಅಡಮಾನ ಪಡೆದವರಿಗೆ ನೀಡಲು ಅಧಿಕಾರ ಹೊಂದಿರುವುದಾಗಿ ಈ ಮೂಲಕ ಒಡಂಬಡಿಕೆ ಮಾಡಿಕೊಂಡಿರುತ್ತಾರೆ. ಅಡಮಾನದಾರರು ಅಡಮಾನ ಪಡೆದವರಿಗೆ ಸದರಿ. . . . . . . . . . . . . . . . . . ರೂ. . . . . . . . . ಮೊಬಲಗನ್ನು ಅಥವಾ ಈ ಪತ್ರದ ಮೇರೆಗೆ ಬಾಕಿ ಇರುವ ಯಾವುದೇ ಮೊಬಲಗು ಇದ್ದಲ್ಲಿ ಅವೆಲ್ಲವನ್ನು ಸಂದಾಯ ಮಾಡಿದ ಮೇಲೆ ಅಡಮಾನ ಪಡೆದವರು ಅಡಮಾನದಾರರ ಕೋರಿಕೆ ಮತ್ತು ಖರ್ಚಿನಲ್ಲಿ ಅಡಮಾನದಾರರಿಗೆ ಅಥವಾ ಅವರು ನಿರ್ದೇಶಿಸುವವರಿಗೆ ಈ ಮೂಲಕ ನೀಡಲಾಗಿದೆ, ವರ್ಗಾಯಿಸಲಾಗಿದೆ ಅಥವಾ ಹಸ್ತಾಂತರಿಸಲಾಗಿದೆ ಎಂದು ಹೇಳಲಾದ ಯಾವತ್ತು ಭೂಮಿ ಮತ್ತು ಆವರಣದ ಎಲ್ಲಾ ಮತ್ತು ನಿರ್ದಿಷ್ಟ ಭಾಗಗಳನ್ನು ಮರು ವರ್ಗಾವಣೆ ಮತ್ತು ಹಸ್ತಾಂತರ ಮಾಡಿ ಕೊಡುವರೆಂದು ಈ ಮೂಲಕ ವ್ಯಕ್ತವಾಗಿ ಒಪ್ಪಿಕೊಳ್ಳಲಾಗಿದೆ ಹಾಗೂ ಘೋಷಿಸಲಾಗಿದೆ.
ಇದಕ್ಕೆ ಸಾಕ್ಷಿಯಾಗಿ ಅಡಮಾನದಾರರು ಮೇಲೆ ಆರಂಭದಲ್ಲಿ ಹೇಳಲಾದ ದಿನಾಂಕ ಮತ್ತು ವರ್ಷದಲ್ಲಿ ತನ್ನ ಸಹಿ ಹಾಕಿ, ಮೊಹರನ್ನು ಒತ್ತಿರುತ್ತಾರೆ. ಮೇಲೆ ಉಲ್ಲೇಖಿಸಲಾದ ಅನುಸೂಚಿ.-
. . . . . . . . . . . . . . . . . . . . . .ಜಿಲ್ಲೆಯ. . . . . . . . . . . . ಗ್ರಾಮದಲ್ಲಿ ಉತ್ತರಕ್ಕೆ . .
. . . . . . . . ದಕ್ಷಿಣಕ್ಕೆ . . . . . . . . . . . . ಪೂರ್ವಕ್ಕೆ. . . . . . . . . . . . .ಪಶ್ಚಿಮಕ್ಕೆ. . . . . .
. . . . ಚಕ್ಕುಬಂದಿ. . . . . . ವಿಸ್ತೀರ್ಣವುಳ್ಳ ಸರ್ವೆ ನಂಬರು ಹೊಂದಿರುವ ಯಾವತ್ತು ಭೂಮಿ (ಅಳತೆ ಅಷ್ಟೆ ಇರಬಹುದು ಅಥವಾ ಹೆಚ್ಚು ಕಮ್ಮಿಯಿರಬಹುದು).
. . . . . . . . . . . . . . . . ಅವರ ಸಮಕ್ಷಮ ಮೇಲೆ ಹೆಸರಿಸಲಾದವರು ಸಹಿ ಹಾಕಿ, ಮುದ್ರೆ ಹಾಕಿ ವಶಾವಣೆ ಮಾಡಿರುತ್ತಾರೆ.