ನಮೂನೆ V ವಿನಿಮಯದ ಮೂಲಕ ವರ್ಗಾವಣೆ
ಯಾವತ್ತು ಭೂಮಿ ಮತ್ತು ಆವರಣಗಳನ್ನು ದಾನವಾಗಿ ದಾನ ಪಡೆಯುವವರಿಗೆ ವರ್ಗಾಯಿಸಲು ಒಪ್ಪಿಕೊಂಡಿರುವುದರಿಂದ ಮತ್ತು ದಾನ ಪಡೆಯುವವರು ಅದನ್ನು ಅಂಥ ಷರತ್ತಿಗೊಳಪಟ್ಟು ಸ್ವೀಕರಿಸಲು ಒಪ್ಪಿರುವುದರಿಂದ;
ಮತ್ತು ಸದರಿ ಭೂಮಿ ಮತ್ತು ಆವರಣಗಳು ಮುದ್ರಾಂಕ ಶುಲ್ಕದ ಉದ್ದೇಶಕ್ಕಾಗಿ. . . . . . . . . . . . . . . .
ರೂಪಾಯಿ ಮೌಲ್ಯವಾಗಿರುವುದರಿಂದ ಇದಕ್ಕೆ ಸಾಕ್ಷಿಯಾಗಿ ಪತ್ರವು. . . . . . . . . . . . ಜಿಲ್ಲೆಯ. . . . . . . . . . . . .ಗ್ರಾಮದಲ್ಲಿರುವ ಈ ಕೆಳಗೆ ಬರೆದು ಅನುಸೂಚಿಯಲ್ಲಿ ಹೆಚ್ಚು ನಿರ್ದಿಷ್ಟವಾಗಿ ವಿವರಿಸಲಾದ . . . . . . . . . . ಸರ್ವೆ ನಂಬರಿನಲ್ಲಿರುವ ಯಾವತ್ತು ಭೂಮಿಯನ್ನು ಅದರಲ್ಲಿರುವ ಎಲ್ಲಾ ಕಟ್ಟಡಗಳು, ಮರಗಳು, ಮೈದಾನಗಳು, ಸ್ವಾತಂತ್ರ್ಯಗಳು, ವಿಶೇಷ ಹಕ್ಕುಗಳು, ಅನುಭೋಗ ಹಕ್ಕುಗಳು, ಸೌಲಭ್ಯಗಳು ಅದಕ್ಕೆ ಯಾವುದೇ ರೀತಿಯಲ್ಲಿ ಇದಕ್ಕೆ ಮುಂದೆ ಅದಕ್ಕೆ ಸಂಬಂಧಿಸಿದ ಅಥವಾ ಆ ತರುವಾಯ ಅದರೊಂದಿಗೆ ಅನುಭೋಗಿಸಲಾದ ಕಟ್ಟಡಗಳು, ಆವರಣಗಳು ಅಥವಾ ಅದರಲ್ಲಿ ಯಾವುದಾದರೂ ಒಂದರೊಂದಿಗೆ ಮತ್ತು ಎಲ್ಲಾ ಸಂಪದ ಮತ್ತು ಸದರಿ ಆವರಣದಲ್ಲಿ ಮತ್ತು ಅದರ ಮೇಲೆ ದಾನ ನೀಡುವವರು ಎಲ್ಲಾ ಸಂಪದ ಹಕ್ಕು ಮೂಲ, ಹಿತಾಸಕ್ತಿ, ಸ್ವತ್ತು ಕ್ಲೇಮು ಮತ್ತು ಸ್ವತ್ತು ತಗಾದೆ ಯಾವುದಾದರೂ ಇದ್ದರೆ ದಾನ ಪಡೆಯುವವರಿಗೆ ಈ ಮೂಲಕ ದಾನ ನೀಡಿರುತ್ತಾರೆ, ವರ್ಗಾಯಿಸಿರುತ್ತಾರೆ ಹಾಗೂ ಹಸ್ತಾಂತರಗೊಳಿಸಿರುತ್ತಾರೆ ಮತ್ತು ದಾನ ಪಡೆಯುವವರು ಸದರಿ ಭೂಮಿಯನ್ನು ಈ ಮೂಲಕ ಸ್ವೀಕರಿಸಿರುತ್ತಾರೆ ಮತ್ತು ಈ ಮೂಲಕ ನೀಡಲಾದ, ವರ್ಗಾಯಿಸಲಾದ ಮತ್ತು ಹಸ್ತಾಂತರಗೊಳಿಸಲಾದ ಯಾವತ್ತು ಭೂಮಿಯನ್ನು ದಾನ ಪಡೆದು ಸರ್ವಥಾ ಹೊಂದಿದ್ದು ಅದರ ಧಾರಕರಾಗಿರಬಹುದಾಗಿರುತ್ತದೆ ಮತ್ತು ದಾನ ನೀಡುವವರು ತಮಗೆ ಈ ಮೂಲಕ ನೀಡಲಾದ, ವರ್ಗಾಯಿಸಲಾದ ಮತ್ತು ಹಸ್ತಾಂತರಗೊಳಿಸಲಾದ ಆವರಣವನ್ನು ನೀಡಲು, ವರ್ಗಾಯಿಸಲು ಮತ್ತು ಹಸ್ತಾಂತರಿಸಲು ಉತ್ತಮ ಹಕ್ಕು ಇರುತ್ತದೆಂದು ಮತ್ತು ದಾನ ಪಡೆದವರು ಇನ್ನು ಮುಂದೆ ಎಲ್ಲಾ ಕಾಲಕ್ಕೂ ಸದರಿ ಆವರಣಗಳನ್ನು ಎಲ್ಲಾ ಋಣಭಾರದಿಂದ ಮುಕ್ತರಾಗಿ ಯಾವುದೇ ಕಾನೂನು ಬದ್ಧ ಒಕ್ಕಲೆಬ್ಬಿಸುವಿಕೆ, ಅಡೆತಡೆ, ಕ್ಲೇಮು ಮತ್ತು ತಗಾದೆಗಳನ್ನು ದಾನ ನೀಡುವವರಿಂದ ಅಥವಾ ಅವರಿಂದ ವಿಶ್ವಸ್ಥರಾಗಿ ಕ್ಲೇಮು ಮಾಡುತ್ತಿರುವ ಯಾವುದೇ ವ್ಯಕ್ತಿಯಿಂದಾಗಿ ಭಾದೆಗೊಳಗಾಗದೇ ಇನ್ನು ಮುಂದೆ ಶಾಂತಿಯುತವಾಗಿ ಮತ್ತು ನಿರುಪಾಧಿಕವಾಗಿ ಸದರಿ ಆವರಣದ ಸ್ವಾಧೀನದಲ್ಲಿದ್ದುದನ್ನು ಅನುಭವಿಸಬಹುದಾಗಿರುತ್ತದೆ ಎಂದು ದಾನ ಪಡೆದವರೊಂದಿಗೆ ಒಡಂಬಡಿಕೆ ಮಾಡಿಕೊಂಡಿರುತ್ತಾರೆ.
ಅಷ್ಟೆ ಅಲ್ಲದೆ ದಾನ ನೀಡುವವರು ಅಥವಾ ಅವರ ಯಾರೇ ಪೂರ್ವಜರಿಂದ ಮತ್ತು ಅದರ ವಿಶ್ವಸ್ಥರಾಗಿ ಅಥವಾ ಅದರ ಮೇರೆಗೆ ಸದರಿ ಆವರಣದಲ್ಲಿ ಅಥವಾ ಅದರ ಯಾವುದೇ ಭಾಗದಲ್ಲಿ ಯಾವುದೇ ಸಂಪದ ಅಥವಾ ಹಿತಾಸಕ್ತಿಯನ್ನು ಹೊಂದಿರುವ ಅಥವಾ ಕಾನೂನು ಬದ್ಧವಾಗಿ ಇಲ್ಲವೇ ನ್ಯಾಯಬದ್ಧವಾಗಿ ಕ್ಲೇಮು ಮಾಡುತ್ತಿರುವ ಎಲ್ಲಾ ವ್ಯಕ್ತಿಗಳು ಕಾಲಕಾಲಕ್ಕೆ ಎಲ್ಲಾ ಕಾಲದಲ್ಲೂ ದಾನ ನೀಡುವವನ ಮನವಿ ಮತ್ತು ವೆಚ್ಚದಲ್ಲಿ, ಮೇಲೆ ಹೇಳಿದ ರೀತಿಯಲ್ಲಿ ಅಥವಾ ಸಮಂಜಸವಾಗಿ ಅಗತ್ಯವಾಗಿರತಕ್ಕ ರೀತಿಯಲ್ಲಿ ದಾನ ಪಡೆಯುವವನಿಗೆ ಸದರಿ ಆವರಣದ ಮತ್ತು ಅದರ ಎಲ್ಲಾ ಭಾಗದ ಪೂರ್ಣ ಸ್ವಾಧೀನವನ್ನು ಸಮರ್ಪಕವಾಗಿ ಒದಗಿಸಿಕೊಡಲು ಬೇಕಾದಂತಹ ಎಲ್ಲಾ ಪತ್ರಗಳು ಮತ್ತು ವಿಷಯಗಳನ್ನು ಬರೆದುಕೊಡಲು ಮತ್ತು ನೋಂದಾಯಿಸಿಕೊಡಲು ಅಥವಾ ಬರೆದುಕೊಡುವಂತೆ ಮತ್ತು ನೋಂದಾಯಿಸಿಕೊಡುವಂತೆ ಮಾಡಲು ಒಪ್ಪಿರುತ್ತಾರೆ.
ಇದಕ್ಕೆ ಸಾಕ್ಷಿಯಾಗಿ ಮೇಲೆ ಪ್ರಾರಂಭದಲ್ಲಿ ಹೇಳಲಾದ ದಿನಾಂಕ ಮತ್ತು ವರ್ಷದಲ್ಲಿ ದಾನ ನೀಡುವವರು ಈ ಪತ್ರಕ್ಕೆ ಸಹಿ ಹಾಕಿ ಮುದ್ರೆ ಒತ್ತಿರುತ್ತಾರೆ ಮತ್ತು ದಾನ ಪಡೆಯುತ್ತಿರುವ ಜಿಲ್ಲಾ ಪಂಚಾಯತಿಯ ಸಾಮಾನ್ಯ ಮೊಹರು ಒತ್ತಲಾಗಿರುತ್ತದೆ.
ಮೇಲೆ ಉಲ್ಲೇಖಿಸಲಾದ ಅನುಸೂಚಿ.-
.ಚಕ್ಕುಬಂದಿ ಇರುವ . . . . . . . . . . .ವಿಸ್ತೀರ್ಣವುಳ್ಳ (ಅಳತೆ ಅಷ್ಟೆ ಇರಬಹುದು ಅಥವಾ ಹೆಚ್ಚು ಕಮ್ಮಿ ಇರಬಹುದು). . . . . . . . . . . . . . . . . . ಸರ್ವೆ ನಂಬರಿನ ಯಾವತ್ತು ಭೂಮಿ
. . . . . . . . . . . . . . . . . .ಅವರ ಸಮಕ್ಷಮ ಮೇಲೆ ಹೆಸರಿಸಲಾದವರು ಸಹಿ ಹಾಕಿ, ಮುದ್ರೆ ಒತ್ತಿ ವಶಾವಣೆ ಮಾಡಿರುತ್ತಾರೆ.
. . . . . . . . . . . . . . . . ಅವರ ಸಮಕ್ಷಮದಲ್ಲಿ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಮೊಹರನ್ನು ಇದಕ್ಕೆ ಒತ್ತಲಾಗಿದೆ.
ಸನ್ ಎರಡು ಸಾವಿರದ. . . . . . . . . . . . ದಿನಾಂಕ. . . . . . . . . . . . . . . ಮಾಹೆ. . . . . . . .
. . . . . . . . . ನಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯ, 1993 (1993ರ ಕರ್ನಾಟಕ ಅಧಿನಿಯಮ ಸಂಖ್ಯೆ 14) ಇದರ ಮೇರೆಗೆ ರಚಿತವಾದ ಜಿಲ್ಲಾ ಪಂಚಾಯಿತಿ (ಇಲ್ಲಿ ಇನ್ನು ಮುಂದೆ “ಜಿಲ್ಲಾ ಪಂಚಾಯಿತಿ” ಎಂದು ಕರೆಯಲಾಗಿದೆ ಮತ್ತು ಈ ಪದವು ಸಂದರ್ಭವು ಅವಕಾಶ ನೀಡಿದಲ್ಲಿ ಅವರ ಅಧಿಕಾರ ಸ್ಥಾನದ ಉತ್ತರಾಧಿಕಾರಿ ಮತ್ತು ಹಸ್ತಾಂತರ ಪಡೆದವರನ್ನು ಒಳಗೊಳ್ಳುತ್ತದೆ) ಇವರು ಒಬ್ಬ ಪಕ್ಷಕಾರರಾಗಿ ಮತ್ತು . . . . . . . . . . . . ನಲ್ಲಿ ವಾಸಿಸುತ್ತಿರುವ. . . . . . . . . . . . . .. . . . . . . . . . . . . .ಅವರು ಮಗನಾದ. . . . . . . . . . ಅವರು
(ಇಲ್ಲಿ ಇನ್ನು ಮುಂದೆ “2ನೇ ಪಕ್ಷಕಾರರು” ಎಂದು ಕರೆಯಲಾಗಿದೆ ಮತ್ತು ಈ ಪದವು ಸಂದರ್ಭವು ಅವಕಾಶ ನೀಡಿದಲ್ಲಿ ಅವರ ವಾರಸುದಾರರು, ನಿರ್ವಾಹಕರು, ಆಡಳಿತಗಾರರು, ನ್ಯಾಯಿಕ ಪ್ರತಿನಿಧಿಗಳು ಮತ್ತು ಹಸ್ತಾಂತರ ಪಡೆದವರನ್ನು ಒಳಗೊಳ್ಳುತ್ತದೆ) ಇನ್ನೊಬ್ಬ ಪಕ್ಷಕಾರರಾಗಿ ತಮ್ಮಗಳ ನಡುವೆ ಮಾಡಿಕೊಂಡ ವಿನಿಮಯ ಪತ್ರ ಕ್ರಮ ಏನೆಂದರೆ, ಜಿಲ್ಲಾ ಪಂಚಾಯಿತಿಯು ಈ ಪತ್ರಕ್ಕೆ ಲಗತ್ತಿಸಿರುವ ಮೊದಲನೆ ಅನುಸೂಚಿಯಲ್ಲಿ ಹೆಚ್ಚು ನಿರ್ದಿಷ್ಟವಾಗಿ ವಿವರಿಸಲಾದ ಯಾವತ್ತು ಭೂಮಿಯನ್ನು ಯಾವುದೇ ಋಣಭಾರವಿಲ್ಲದೇ ಅದರ ಮೇಲಿರುವ ಕಟ್ಟಡಗಳ ಸಮೇತ ಸ್ವಾಧೀನ ಹೊಂದಿದ್ದು ಹಾಗೂ ಅದಕ್ಕೆ ಚೆನ್ನಾಗಿ ಮತ್ತು ನಿಜವಾಗಿ ಹಕ್ಕುದಾರರಾಗಿರುವುದರಿಂದ ಮತ್ತು ಎರಡನೇ ಪಕ್ಷಕಾರರು ಸಹ ಈ ಪತ್ರಕ್ಕೆ ಲಗತ್ತಿಸಿದ 2ನೇ ಅನುಸೂಚಿಯಲ್ಲಿ ಹೆಚ್ಚು ನಿರ್ದಿಷ್ಟವಾಗಿ ವಿವರಿಸಲಾದ ಯಾವತ್ತು ಭೂಮಿಯ ಸ್ವಾಧೀನವನ್ನು ಯಾವುದೇ ಋಣಭಾರವಿಲ್ಲದೆ ಅದರ ಮೇಲಿರುವ ಕಟ್ಟಡಗಳ ಸಮೇತ ಹೊಂದಿದ್ದು ಮತ್ತು ಅದಕ್ಕೆ ಚೆನ್ನಾಗಿ ಮತ್ತು ನಿಜವಾಗಿ ಹಕ್ಕುದಾರರಾಗಿರುವುದರಿಂದ.-
ಮತ್ತು ಈ ಪತ್ರದ ಪಕ್ಷಕಾರರು ಈ ಪತ್ರಕ್ಕೆ ಲಗತ್ತಿಸಿರುವ ಮೊದಲನೆಯ ಮತ್ತು ಎರಡನೇ ಅನುಸೂಚಿಗಳಲ್ಲಿ ಕ್ರಮವಾಗಿ ಹೆಚ್ಚು ನಿರ್ದಿಷ್ಟವಾಗಿ ವಿವರಿಸಿರುವಂತಹ ಸದರಿ ಯಾವತ್ತು ಭೂಮಿಗಳನ್ನು ಇಲ್ಲಿ ಇನ್ನು ಮುಂದೆ ಹೇಳಲಾಗಿರುವಂಥ ರೀತಿಯಲ್ಲಿ ವಿನಿಮಯ ಮಾಡಿಕೊಳ್ಳಲು ಒಪ್ಪಿರುವುದರಿಂದ;
ಮತ್ತು ಸರ್ಕಾರವು. . . . . . . . . . . . .ದಿನಾಂಕ:. . . . . . . . .ಸಂಖ್ಯೆಯ ಆದೇಶದ ಮೇರೆಗೆ ಇಲ್ಲಿ ಇನ್ನು ಮುಂದೆ ತಿಳಿಸಲಾಗಿರುವ ವಿಧಾನದಲ್ಲಿ ಸ್ವತ್ತುಗಳ ವರ್ಗಾವಣೆ ಮಾಡಿಕೊಳ್ಳಲು ಮಂಜೂರಾತಿ ನೀಡಿರುವುದರಿಂದ;
ಮತ್ತು ಇಲ್ಲಿ ಇನ್ನು ಮುಂದೆ ಹೇಳಿರುವ ರೀತಿಯಲ್ಲಿ ವಿನಿಮಯ ಮಾಡಿಕೊಳ್ಳುವುದರ ಬಗ್ಗೆ. . . . . . . . . . . . .
ನಲ್ಲಿ ಕ್ರಮಬದ್ಧ ನೋಟೀಸನ್ನು ಅದಕ್ಕೆ ಸಂಬಂಧಿಸಿದ ನಿಯಮಗಳ ಉಪಬಂಧಕ್ಕೆ ಅನುಗುಣವಾಗಿ ನೀಡಲಾಗಿರುವುದರಿಂದ; ಈಗ ಇದಕ್ಕೆ ಸಾಕ್ಷಿಯಾಗಿ ಇಲ್ಲಿ ಇನ್ನು ಮುಂದೆ ಹೇಳಿರುವಂತೆ 2ನೇ ಪಕ್ಷಕಾರರು ವರ್ಗಾವಣೆ ಮಾಡುತ್ತಿರುವುದರ ಪ್ರತಿಫಲವಾಗಿ ತನಗೆ ಅಧಿಕಾರ ನೀಡುತ್ತಿರುವ ಪ್ರತಿಯೊಂದು ಶಾಸನಾತ್ಮಕ ಮತ್ತು ಇತರ ಪ್ರಾಧಿಕಾರದ ಪಾಲನೆಯಲ್ಲಿ ಜಿಲ್ಲಾ ಪಂಚಾಯಿತಿಯು ಎರಡನೇ ಪಕ್ಷಕಾರರಿಗೆ. . . . . . . . . .. . . . . . .ನಲ್ಲಿ ಇರುವ ಇದರ ಕೆಳಗಿನ ಮೊದಲ ಅನುಸೂಚಿಯಲ್ಲಿ ಹೆಚ್ಚು ನಿರ್ದಿಷ್ಟವಾಗಿ ವಿವರಿಸಿರುವ ಮತ್ತು ನಕಾಶೆ ಅಥವಾ ಭೂಪಟದಲ್ಲಿ . . . . . . . . . . ಬಣ್ಣದಲ್ಲಿ ಸೂಚಿಸಿರುವ . . . . . . . . . . . . . .ರೂಪಾಯಿಗಳ ಮೌಲ್ಯದ ಯಾವತ್ತು ಭೂಮಿಯನ್ನು ಈ ಮೂಲಕ ನೀಡುತ್ತದೆ, ವರ್ಗಾಯಿಸುತ್ತದೆ ಮತ್ತು ಹಸ್ತಾಂತರಿಸುತ್ತದೆ. ಹೀಗೆ ನೀಡುವಾಗ ಅದರೊಂದಿಗೆ ಸದರಿ ಭೂಮಿಯ ಮೇಲಿರಬಹುದಾದ ಎಲ್ಲಾ ಕಟ್ಟಡಗಳು, ಮೈದಾನಗಳು, ಬದುಗಳು, ಹಳ್ಳಗಳು, ಬೇಲಿಗಳು, ದಾರಿಗಳು, ನೀರು, ನೀರು ಮಾರ್ಗಗಳು, ಸ್ವಾತಂತ್ರ್ಯಗಳು, ವಿಶೇಷ ಹಕ್ಕುಗಳು, ಅನುಭೋಗ ಹಕ್ಕುಗಳು, ಸೌಲಭ್ಯಗಳು ಮತ್ತು ಲಗತ್ತುಗಳೊಂದಿಗೆ ಇವುಗಳನ್ನು ಮತ್ತು ಅವುಗಳಲ್ಲಿ ಯಾವುದಾದರೂ ಒಂದನ್ನು ಮತ್ತು ಅದಕ್ಕೆ ಸಂಬಂಧಿಸಿದ ಮತ್ತು ಇದಕ್ಕೆ ಮುಂಚೆ ಅನುಭೋಗಿಸಿದ ಅಥವಾ ಅನುಭವಿಸಿದ ಹಕ್ಕುಗಳು ಮತ್ತು ಎಲ್ಲಾ ಸಂಪದಕ್ಕೂ ಹಕ್ಕು ಮೂಲ ಹಿತಾಸಕ್ತಿ, ಸ್ವತ್ತು, ಕ್ಲೇಮು ಮತ್ತು ಯಾವುದೇ ಬಗೆಯ ತಗಾದೆಯೊಂದಿಗೆ ಎರಡನೇ ಪಕ್ಷಕಾರರು ಸದರಿ ಯಾವತ್ತು ಭೂಮಿಯನ್ನು ಸದಾಕಾಲ ಹೊಂದಲು ಮತ್ತು ಧಾರಣ ಮಾಡಲು ವಹಿಸಿಕೊಡುತ್ತದೆ ಮತ್ತು ಎರಡನೇ ಪಕ್ಷಕಾರರು ಜಿಲ್ಲಾ ಪಂಚಾಯಿತಿಯೊಂದಿಗೆ ಈ ಮೂಲಕ ಒಡಂಬಡಿಕೆ ಮಾಡಿಕೊಳ್ಳುವುದೇನೆಂದರೆ 2ನೇ ಪಕ್ಷಕಾರನಾದ ತಾನು ಇನ್ನು ಮುಂದೆ ಕರ ನಿರ್ಧರಣೆ (ಆಕಾರ) ಅಥವಾ . . . . . . . . . . . . . .ನೆಲಬಾಡಿಗೆಯನ್ನು ಅಥವಾ ಅಂಥ ಇತರ ಮೊಬಲಗನ್ನು. . . . . . . . . . . . . .ನೆಲಬಾಡಿಗೆ ಯಾವುದೇ ಇತರ ನೆಲಬಾಡಿಗೆ ನಿರ್ಧರಣೆಗಳನ್ನು ಮತ್ತು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಅಥವಾ ಯಾವುದೇ ಸ್ಥಳೀಯ ಅಥವಾ ಇತರ ಪ್ರಾಧಿಕಾರವು ಸದರಿ ಯಾವತ್ತು ಭೂಮಿ ಅಥವಾ ಆವರಣದ ಮೇಲೆ ಕಾಲದಿಂದ ಕಾಲಕ್ಕೆ ವಿಧಿಸಬಹುದಾದ ತೆರಿಗೆಗಳನ್ನು ಸಂದಾಯ ಮಾಡಿಕೊಂಡು ಬರುತ್ತೇನೆ. ಅಲ್ಲದೇ, ಹೇಳಲಾಗಿರುವಂತೆ ಜಿಲ್ಲಾ ಪಂಚಾಯಿತಿಯು ಮಾಡಿರುವ ವರ್ಗಾವಣೆಗೆ ಪ್ರತಿಫಲವಾಗಿ ಪಕ್ಷಕಾರರು. . . . . . . . . . . .ನಲ್ಲಿ ಇರುವ ಇದರ ಕೆಳಗಿನ 2ನೇ ಅನುಸೂಚಿಯಲ್ಲಿ ನಿರ್ದಿಷ್ಟವಾಗಿ ವಿವರಿಸಿರುವ ಮತ್ತು “ಬಿ” ಎಂದು ಗುರುತಿಸಲಾದ ನಕಾಶೆ ಅಥವಾ ಭೂಪಟದಲ್ಲಿ . . . . . . . . . . . .ಬಣ್ಣದಲ್ಲಿ ಸೂಚಿಸಿರುವ . . . . . . . . . . . . .ರೂಪಾಯಿಗಳ ಮೌಲ್ಯದ ಯಾವತ್ತು ಭೂಮಿಯನ್ನು ಸದರಿ ಭೂಮಿಯ ಮೇಲಿರಬಹುದಾದ ಎಲ್ಲಾ ಕಟ್ಟಡಗಳು, ಮೈದಾನಗಳು, ಬದುಗಳು, ಹಳ್ಳಗಳು, ಬೇಲಿಗಳು, ದಾರಿಗಳು, ನೀರು, ನೀರು ಮಾರ್ಗಗಳು, ಸ್ವಾತಂತ್ರ್ಯಗಳು, ವಿಶೇಷ ಹಕ್ಕುಗಳು, ಅನುಭೋಗ ಹಕ್ಕುಗಳು, ಸೌಲಭ್ಯಗಳು ಮತ್ತು ಲಗತ್ತುಗಳೊಂದಿಗೆ ಇವುಗಳನ್ನು ಮತ್ತು ಇವುಗಳಲ್ಲಿ ಯಾವುದಾದರೂ ಒಂದನ್ನು ಮತ್ತು ಅದರೊಂದಿಗೆ ಅದಕ್ಕೆ ಸಂಬಂಧಿಸಿದ ಇದಕ್ಕೂ ಮುಂಚೆ ಅನುಭೋಗಿಸಿದ ಅಥವಾ ಅನುಭವಿಸಿದ ಎಲ್ಲಾ ಸಂಪದ ಹಕ್ಕು, ಹಕ್ಕು ಮೂಲ ಹಿತಾಸಕ್ತಿ, ಸ್ವತ್ತು, ಕ್ಲೇಮು ಮತ್ತು ತಗಾದೆಗಳ ಸಮೇತ ಈ ಮೂಲಕ ನೀಡುತ್ತದೆ, ವರ್ಗಾಯಿಸುತ್ತದೆ ಮತ್ತು ಹಸ್ತಾಂತರಿಸುತ್ತದೆ ಮತ್ತು ಈ ಮೂಲಕ ನೀಡಲಾದ, ವರ್ಗಾಯಿಸಲಾದ ಮತ್ತು ಹಸ್ತಾಂತರಿಸಲಾದ ಸದರಿ ಭೂಮಿಯನ್ನು ಜಿಲ್ಲಾ ಪಂಚಾಯತಿಯು ಸದಾಕಾಲ ಹೊಂದಿದ್ದು ಅನುಭವಿಸಿಕೊಂಡು ಬರತಕ್ಕದ್ದು ಮತ್ತು ಜಿಲ್ಲಾ ಪಂಚಾಯತಿಯು ಈ ಮೂಲಕ 2ನೇ ಪಕ್ಷಕಾರರೊಂದಿಗೆ
ಒಡಂಬಡಿಕೆ ಮಾಡಿಕೊಳ್ಳುವುದೇನೆಂದರೆ, ಸದರಿ ಯಾವತ್ತು ಭೂಮಿ ಮತ್ತು ಆವರಣಗಳ ಮೇಲೆ ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರವು ಅಥವಾ ಯಾವುದೇ ಸ್ಥಳೀಯ ಅಥವಾ ಇತರ ಪ್ರಾಧಿಕಾರವು ಕಾಲಕಾಲಕ್ಕೆ ವಿಧಿಸಬಹುದಾದ ಕರ ನಿರ್ಧರಣೆ ಮತ್ತು ತೆರಿಗೆಗಳನ್ನು ಸಂದಾಯ ಮಾಡುತ್ತೇನೆ. ಮತ್ತು ಈ ಎರಡೂ ಪಕ್ಷಕಾರರು ಪರಸ್ಪರ ಒಪ್ಪಿಕೊಂಡು ಒಡಂಬಡಿಕೆ ಮಾಡಿಕೊಳ್ಳುವುದೇನೆಂದರೆ ಇದಕ್ಕೆ ವಿರುದ್ಧವಾಗಿ ಯಾವುದೇ ಕೃತ್ಯ ಕಾರ್ಯ ಅಥವಾ ವಸ್ತುವನ್ನು ಮಾಡಲಾಗಿದ್ದು ಅಥವಾ ನಡೆಸಲಾಗಿದ್ದು ಅಥವಾ ತಿಳಿದು ತಿಳಿದು ವಹಿಸಿಕೊಂಡು ಬಂದಿದ್ದಾಗ್ಯೂ, ಮೇಲೆ ಹೇಳಲಾದ ವಿಷಯದಲ್ಲಿ ನೀಡಿ, ವರ್ಗಾಯಿಸಿ, ಹಸ್ತಾಂತರಿಸಲಾಗಿದೆ ಎಂದು ಹೇಳಲಾದ ಸದರಿ ಆವರಣಗಳ ಸಂಬಂಧದಲ್ಲಿ ತಾವುಗಳು ನೀಡಲು, ವರ್ಗಾವಣೆ ಮಾಡಲು ಮತ್ತು ಹಸ್ತಾಂತರಗೊಳಿಸಲು ಅನುಕ್ರಮವಾಗಿ ಹಕ್ಕುಗಳನ್ನು ಹೊಂದಿರುತ್ತಾರೆ ಮತ್ತು ಇನ್ನು ಮುಂದೆ ಎಲ್ಲಾ ಕಾಲದಲ್ಲಿ ಹೀಗೆ ಕೊನೆಯಲ್ಲಿ ಹೇಳಲಾದ ಆವರಣವನ್ನು ಶಾಂತಿಯುತವಾಗಿ ಹೊಂದಲು, ಅನುಭೋಗಿಸಲು ಮತ್ತು ಅದರ ಮೇಲಿನ ಬಾಡಿಗೆ ಮತ್ತು ಲಾಭಗಳನ್ನು ಮತ್ತೊಬ್ಬ ಪಕ್ಷಕಾರರಿಂದ ಅಥವಾ ಸದರಿ ಪಕ್ಷಕಾರರ ಅಡಿಯಲ್ಲಿ ಅಥವಾ ವಿಶ್ವಸ್ಥವಾಗಿ, ಕಾನೂನು ಬದ್ಧವಾಗಿ ಅಥವಾ ನ್ಯಾಯ ಸಮ್ಮತವಾಗಿ ಕ್ಲೇಮು ಮಾಡುತ್ತಿರುವ ವ್ಯಕ್ತಿ ಅಥವಾ ವ್ಯಕ್ತಿಗಳಿಂದ ಯಾವುದೇ ಅಡೆತಡೆ, ಕ್ಲೇಮು ಅಥವಾ ತಗಾದೆ ಇಲ್ಲದೇ ಮತ್ತು ಇನ್ನೊಬ್ಬ ಪಕ್ಷಕಾರರು ಅಥವಾ ಮೇಲೆ ಹೇಳಿದಂತೆ ಯಾವುದೇ ಕಾನೂನು ಸಮ್ಮತ ವ್ಯಕ್ತಿ ಮಾಡಲಾದ ಅಥವಾ ಸಹಿಸಲಾದ ಯಾವುದೇ ಬಗೆಯ ಎಲ್ಲಾ ಋಣಭಾರದಿಂದ ಮುಕ್ತವಾಗಿ ಅನುಭವಿಸಿಕೊಂಡು ಬರತಕ್ಕದ್ದೆಂದು ಒಡಂಬಡಿಕೆ ಮಾಡಿಕೊಂಡಿರುತ್ತಾರೆ ಮತ್ತು ಈ ಪಕ್ಷಕಾರರು ಹಾಗೂ ಸದರಿ ಆವರಣ ಅಥವಾ ಯಾವುದೇ ಒಂದು ಭಾಗವನ್ನು ಈ ಪಕ್ಷಕಾರರಲ್ಲಿ ಯಾರಾದರೂ ಒಬ್ಬರ ಅಡಿಯಲ್ಲಿ ಯಾವುದೇ ಸಂಪದ ಹಕ್ಕು ಅಥವಾ ಹಿತಾಸಕ್ತಿಯನ್ನು ಕಾನೂನುಬದ್ಧವಾಗಿ ಅಥವಾ ನ್ಯಾಯ ಸಮ್ಮತವಾದ ಕ್ಲೇಮು ಮಾಡುತ್ತಿರುವ ಎಲ್ಲಾ ವ್ಯಕ್ತಿಗಳು, ಎಲ್ಲಾ ಕಾಲದಲ್ಲೂ ಮತ್ತು ಕಾಲದಿಂದ ಕಾಲಕ್ಕೆ ಇನ್ನು ಮುಂದೆ ಮತ್ತೊಬ್ಬ ಪಕ್ಷಕಾರರು ಕೋರಿಕೆ ಮತ್ತು ವೆಚ್ಚದಲ್ಲಿ ಎಲ್ಲಾ ಅಂತಹ ಮೇಲೆ ಹೇಳಿದ ರೀತಿಯಲ್ಲಿ ಮತ್ತು ಸಮಂಜಸವಾಗಿ ಅವಶ್ಯವಾಗಿರುವಂತೆ ಮೇಲೆ ಕೊನೆಯಲ್ಲಿ ಹೇಳಲಾದ ಆವರಣವನ್ನು ಅದರ ಪ್ರತಿಯೊಂದು ಭಾಗವನ್ನು ಇನ್ನು ಚೆನ್ನಾಗಿ ಸಮರ್ಪಕವಾಗಿ ಖಚಿತಪಡಿಸುವುದಕ್ಕಾಗಿ ಮಾಡಬೇಕಾದಂತ ಕಾರ್ಯ, ಪತ್ರ ಮತ್ತು ವಿಷಯಗಳನ್ನು ಬರೆದು ಕೊಡಲು ಮತ್ತು ನೋಂದಾಯಿಸಲು ಅಥವಾ ಬರೆದುಕೊಡುವುದಾಗಿ ಒಡಂಬಡಿಕೆ ಮಾಡಿರುತ್ತಾರೆ. ಇದಕ್ಕೆ ಸಾಕ್ಷಿಯಾಗಿ ಮೇಲೆ ಮೊದಲು ಬರೆಯಲಾದ ದಿನಾಂಕ ಮತ್ತು ವರ್ಷದಲ್ಲಿ ಜಿಲ್ಲಾ ಪಂಚಾಯಿತಿಯು ತನ್ನ ಸಾಮಾನ್ಯ ಮೊಹರು ಹಾಕಿದೆ. . . . . . . . . . . . . . . . . . . . . . . . ಅವರ ಸಹಿಯನ್ನು ಮುದ್ರೆ ಹಾಕಿರುತ್ತಾರೆ.
ಮೇಲೆ ಹೇಳಲಾದ ಮೊದಲನೆ ಅನುಸೂಚಿ “ಎ” ಎಂದು ಗುರುತಿಸಲಾದ, ಇದಕ್ಕೆ ಲಗತ್ತಿಸಲಾದ ನಕಾಶೆಯಲ್ಲಿ. . . . . . . . . . . . . . .ಬಣ್ಣ ಹಾಕಿರುವ ಯಾವತ್ತು ಭೂಮಿ. . . . . . . . . . . . . . . . . . . .ಜಿಲ್ಲೆಯ. . . . . . . . . . . . .ಗ್ರಾಮದಲ್ಲಿ. . . . . . . . . . . . . . . . . . . . . ಸರ್ವೆ ನಂಬರ್ ಹೊಂದಿರುವ ಮತ್ತು ಉತ್ತರಕ್ಕೆ . . . . . . . . . . . . . . . . . .ಸರ್ವೆ ನಂಬರ್ ಪೂರ್ವಕ್ಕೆ. . . . . . . . . . . . . . . . ಸರ್ವೆ ನಂಬರ್, ದಕ್ಷಿಣಕ್ಕೆ . . . . . . . . . . . . . . . ಪೂರ್ವಕ್ಕೆ . . . . . . . . . .ಸರ್ವೆ ನಂಬರ್ ದಕ್ಷಿಣಕ್ಕೆ . . . . . . . . . . . . . . . . . . . . . .ಸರ್ವೆ ನಂಬರ್ ಮತ್ತು ಪಶ್ಚಿಮಕ್ಕೆ . . . . . . . . . . . . . . ಸರ್ವೆ ನಂಬರಿನ. . . . . . . . . . .. . . . . . . .. . . . .ಅಡ್ಡಳತೆಯ ಯಾವತ್ತು ಭೂಮಿ ಮತ್ತು ಅದರ ಮೇಲಿರುವ ಕಟ್ಟಡ ಇತ್ಯಾದಿ, ಮೇಲೆ ಹೇಳಲಾದ 2ನೇ ಅನುಸೂಚಿ. . . . . . . . . . . . . . .ಜಿಲ್ಲೆಯ . . . . . . . . . . . ಗ್ರಾಮದಲ್ಲಿ. . . . . . . . . . . . . . . .ನೋಂದಣಿಯಲ್ಲಿ . . . . . . . . . . .ಸರ್ವೆ ನಂಬರ್ ಹೊಂದಿರುವ ಉತ್ತರಕ್ಕೆ . . . . . . . . . . . . . . . . . . . . . . . .ಪೂರ್ವಕ್ಕೆ. . . . . . . . . . . . . . . . . .ದಕ್ಷಿಣಕ್ಕೆ . . . . . . . . . . . . . . . .ಪಶ್ಷಿಮಕ್ಕೆ. . . . . . ಚಕ್ಕುಬಂದಿ ಉಳ್ಳ. . . . . . . . . . . . . . . . . . . . . . . . .ಅಡ್ಡಳತೆಯ ಮತ್ತು ಇದಕ್ಕೆ ಲಗತ್ತಿಸಲಾದ “ಬಿ” ಎಂದು ಗುರುತಿಸಿರುವ ನಕಾಶೆಯಲ್ಲಿ. . . . . . . . . . . . . . .ಬಣ್ಣ ಹಾಕಿರುವ ಯಾವತ್ತು ಭೂಮಿ. . . . . . . . . . . . . ಅವರ ಸಮಕ್ಷಮದಲ್ಲಿ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಮೊಹರನ್ನು ಹಾಕಲಾಗಿದೆ. . . . . . . . . . . . .ಅವರ ಸಮಕ್ಷಮದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಹಿ ಹಾಕಿರುತ್ತಾರೆ. . . . . . . . . . . . . . . .ಅವರ ಸಮಕ್ಷಮ ಮೇಲೆ ಹೆಸರಿಸಲಾದವರು ಸಹಿ ಹಾಕಿ, ಮೊಹರು ಹಾಕಿ ವಶಾವಣೆ ಮಾಡಿರುತ್ತಾರೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಪಿ. ದೇವಸಹಾಯಂ ಸರ್ಕಾರದ ಅಧೀನ ಕಾರ್ಯದರ್ಶಿ(ಜಿ.ಪಂ.)(ಪ್ರ) ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ
ಸರ್ಕಾರಿ ಮುದ್ರಣಾಲಯ, ವಿಕಾಸ ಸೌಧ ಘಟಕ, ಬೆಂಗಳೂರು. (ಪಿ7) ಪ್ರತಿಗಳು: 500