ಈ ಅಧ್ಯಾದೇಶದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು:
(ಎ) “ಬೆಂಗಳೂರು ಅರಮನೆ” ಯು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ರ 2ನೇ ಪ್ರಕರಣದ ಖಂಡ (2)ರಲ್ಲಿ ಪರಿಭಾಷಿಸಲಾದಂತೆ ಅದೇ ಅರ್ಥವನ್ನು ಹೊಂದಿರತಕ್ಕದ್ದು.
(ಬಿ) “ಮೂಲಸೌಕರ್ಯ ಯೋಜನೆ"ಯು ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯಲ್ಲಿನ ಯಾವುದೇ ಮೂಲ ಸೌಕರ್ಯ ಯೋಜನೆಯನ್ನು ಒಳಗೊಳ್ಳತಕ್ಕದ್ದು.
(ಸಿ) “ಕ್ಲೇಮುದಾರರು” ಎಂಬುದು,
(i) ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ರ 2ನೇ ಪ್ರಕರಣದ (5) ನೇ ಖಂಡದಲ್ಲಿ ಪರಿಭಾಷಿಸಲಾದಂತೆ “ಕಾನೂನುಸಮ್ಮತ ಪ್ರತಿನಿಧಿಗಳು” ಮತ್ತು “ವಾರಸುದಾರರು” ಎಂಬ, ಹಾಗೂ
(i) ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ರ 2ನೇ ಪ್ರಕರಣದ (6) ನೇ ಖಂಡದಲ್ಲಿ ಪರಿಭಾಷಿಸಲಾದಂತೆ “ಇತರರು” "ಇತರ ವ್ಯಕ್ತಿಗಳು” ಮತ್ತು "ಇತರ ಹಿತಾಸಕ, ವ್ಯಕ್ತಿಗಳು” ಎಂಬ, - ಅದೇ ಅರ್ಥವನ್ನು ಹೊಂದಿರತಕ್ಕದ್ದು.
(ಡಿ) “ನಷ್ಟಪರಿಹಾರ”ವು ಸಂದಾಯ ಮಾಡಬಹುದಾದ ಯಾವುದೇ ಮೊತ್ತವನ್ನು ಒಳಗೊಳ್ಳತಕ್ಕದ್ದು ಮತ್ತು ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳನ್ನೂ ಸಹ ಒಳಗೊಳ್ಳತಕ್ಕದ್ದು.
(ಇ) “ಕಮೀಷನರ್” ಎಂಬುದು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ರ 2ನೇ ಪ್ರಕರಣದ (4)ನೇ ಖಂಡದಲ್ಲಿ ಪರಿಭಾಷಿಸಲಾದಂತೆ ಅದೇ ಅರ್ಥವನ್ನು ಹೊಂದಿರತಕ್ಕದ್ದು.
(ಎಫ್) “ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು” ಎಂಬುದು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ಅಭಿವೃದ್ಧಿ ಹಕ್ಕುಗಳ ಪ್ರಯೋಜನ) ನಿಯಮಗಳು, 2016ರೊಂ೦ದಿಗೆ ಓದಿಕೊಂಡಂತೆ ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ ಅಧಿನಿಯಮ, 1961ರ 14ಬಿ ಪ್ರಕರಣದ (28)ನೇ ಉಪ ಪ್ರಕರಣದ (8) ಖಂಡದಲ್ಲಿ ಪರಿಭಾಷಿಸಲಾದಂತೆ ಅದೇ ಅರ್ಥವನ್ನು ಹೊಂದಿರತಕ್ಕದ್ದು.
(ಜಿ) “ರಾಜ್ಯ ಸರ್ಕಾರ" ಎಂದರೆ ಕರ್ನಾಟಕ ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಂಂತಹ ಕರ್ನಾಟಕ ಸರ್ಕಾರದ ಅಂ೦ಗಮಾಧ್ಯಮಗಳನ್ನೂ (instrumentalities) ಒಳಗೊಳ್ಳತಕ್ಕದ್ದು.