(1) ಈ ಅಧ್ಯಾದೇಶದ ಅನುಸರಣೆಯಲ್ಲಿ ಸದ್ಭಾವನೆಯಿಂದ ಏನನ್ನಾದರೂ ಮಾಡಿರುವ ಅಥವಾ ಮಾಡಲು ಉದ್ದೇಶಿಸಿದ ರಾಜ್ಯ ಸರ್ಕಾರದ ಯಾರೇ ಅಧಿಕಾರಿ ಅಥವಾ ಅದರ ಅಂಗಮಾಧ್ಯಮಗಳ ವಿರುದ್ಧ ಯಾವುದೇ ಸಿವಿಲ್ ಅಥವಾ ಕ್ರಿಮಿನಲ್ ವ್ಯವಹರಣೆಗಳನ್ನು ಹೂಡತಕ್ಕದ್ದಲ್ಲ.
(2) ಯಾವುದೇ ನ್ಯಾಯಾಲಯದ ಯಾವುದೇ ಆದೇಶ ಅಥವಾ ತೀರ್ಪು ಏನೇ ಇದ್ದರೂ, ಈ ಅಧ್ಯಾದೇಶದ ಅನುಸರಣೆಯಲ್ಲಿ ಸದ್ಭಾವನೆಯಿಂದ ಏನನ್ನಾದರೂ ಮಾಡಿರುವ ಅಥವಾ ಮಾಡಲು ಉದ್ದೇಶಿಸಿದ ಯಾವುದೇ ಕಾರ್ಯದ ಮೇರೆಗೆ ರಾಜ್ಯ ಸರ್ಕಾರದ ಯಾರೇ ಅಧಿಕಾರಿ ಅಥವಾ ಅದರ ಅಂಗಮಾಧ್ಯಮಗಳು ಯಾವುದೇ ಶಿಕ್ಕಗೆ ಹೊಣೆಯಾಗತಕ್ಕದ್ದಲ್ಲ. 7. ಅಧ್ಯಾದೇಶದ ಅಧ್ಯಾರೋಹಿ ಪರಿಣಾಮ. ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, ಈ ಅಧ್ಯಾದೇಶಕ್ಕ ಅಸಂಗತವಾಗಿರುವುದಾವುದೂ, ಬೆಂಗಳೂರು ಅರಮನೆಗೆ ಅನ್ವಯವಾಗತಕ್ಕದ್ದಲ್ಲ. ಥಾವರ್ ಚಂದ್ ಗೆಹ್ಲೋಟ್ ಕರ್ನಾಟಕದ ರಾಜ್ಯಪಾಲರು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಿ. ಶ್ರೀಧರ್ ಸರ್ಕಾರದ ಕಾರ್ಯದರ್ಶಿ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.