(1) ಯಾವುದೇ ಮೂಲಸೌಕರ್ಯ ಯೋಜನೆಯ ಉದ್ದೇಶಕ್ಕಾಗಿ, ರಾಜ್ಯ ಸರ್ಕಾರವು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ರ 4ನೇ ಪ್ರಕರಣದಲ್ಲಿ ಬರುವ ಬೆಂಗಳೂರು ಅರಮನೆಯ ಯಾವುದೇ ಭಾಗವನ್ನು ಬಳಸಲು ಅಧಿಕಾರವನ್ನು ಹೊಂದಿರತಕ್ಕದ್ದು.
(2) ಯಾವುದೇ ನ್ಯಾಯಾಲಯದ ಯಾವುದೇ ತೀರ್ಪ ಅಥವಾ ಆದೇಶ ಅಥವಾ ರಾಜ್ಯ ಸರ್ಕಾರವು ಈ ಮೊದಲು ತೆಗೆದುಕೊಂಡ ಯಾವುದೇ ತೀರ್ಮಾನದಲ್ಲಿ ಏನೇ ಇದ್ದರೂ, ರಾಜ್ಯ ಸರ್ಕಾರವು (1)ನೇ ಉಪಪ್ರಕರಣದಲ್ಲಿನ ಯಾವುದೇ ಮೂಲಸೌಕರ್ಯ ಯೋಜನೆಗೆ ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ಮುಂದುವರೆಯದಿರಲು ಅಧಿಕಾರವನ್ನು ಹೊಂದಿರತಕ್ಕದ್ದು.
(3) ರಾಜ್ಯ ಸರ್ಕಾರವು (2ನೇ ಉಪಪ್ರಕರಣದಲ್ಲಿನ ಯಾವುದೇ ಮೂಲಸೌಕರ್ಯ ಯೋಜನೆಗೆ ಮುಂದುವರೆಯದಿರಲು ತೀರ್ಮಾನಿಸಿದಲ್ಲಿ, ಅದು,-
(ಎ) ಉಪಪ್ರಕರಣ 6)ರಡಿ ಬಳಸಲು ಉದ್ದೇಶಿಸಿರುವ ಆದರೆ ತರುವಾಯ ಉಪಪ್ರಕರಣ (2)ರಡಿ. ಮುಂಂದುವರೆಯದಿರುವ ಅಥವಾ ಬಳಸದಿರುವ ಬೆಂಗಳೂರು ಅರಮನೆಯ ಭಾಗಾಂಶದ ಭಾಗವನ್ನು ಪೂರ್ವಸ್ಥಿತಿಗೆ ತರತಕ್ಕದ್ದು;
(ಬಿ) ಈ ಮೊದಲು ಅಂಥ ಭೂಮಿಯನ್ನು ಉಪಪ್ರಕರಣ (ರಡಿ ಬಳಸಲು ಉದ್ದೇಶಿಸಿರುವ ಆದರೆ ತರುವಾಯ ಉಪಪ್ರಕರಣ (2ರಡಿ ಮುಂದುವರೆಯದಿರುವ ಅಥವಾ ಬಳಸದಿರುವ ಬೆಂಗಳೂರು ಅರಮನೆಯ ಭಾಗಾಂಶದ ಭಾಗದ ಸ್ವಾಧೀನವನ್ನು ಪೂರ್ವಸ್ಥಿತಿಗೆ ತರತಕ್ಕದ್ದು; ಮತ್ತು (ಸಿ (ಎ) ಮತ್ತು (ಬಿ)ಗಳಿಗಾಗಿನ ಒಟ್ಟಾರೆ ವೆಚ್ಚವನ್ನು ಭರಿಸತಕ್ಕದ್ದು.
(4 ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ, (1)ನೇ ಉಪಪ್ರಕರಣದಡಿ ಬೆಂಗಳೂರು ಅರಮನೆಯ ಭಾಗಾಂಶದ ಯಾವುದೇ ಭಾಗವನ್ನು ರಾಜ್ಯ ಸರ್ಕಾರವು ಬಳಸಿದ್ದರೆ, 4ನೇ ಪ್ರಕರಣದಡಿ ಈ ಅಧ್ಯಾದೇಶದ ಅನುಸಾರ ರಾಜ್ಯ ಸರ್ಕಾರವು ಕ್ಲೇಮುದಾರರಿಗೆ ನಷ್ಟಪರಿಹಾರವನ್ನು ಪಾವತಿಸತಕ್ಕದ್ದು.