(1) ನಷ್ಟಪರಿಹಾರವನ್ನು ಕ್ಷೇಮುಮಾಡುವ ಉದ್ದೇಶಕ್ಕಾಗಿ ಕ್ಲೇಮುದಾರರ ನಡುವೆ ಯಾವುದೇ ವಿವಾದಗಳಾದ ಸಂದರ್ಭದಲ್ಲಿ, ರಾಜ್ಯ ಸರ್ಕಾರವು ಈ ಅಧ್ಯಾದೇಶದಡಿ ನಿರ್ಧರಿಸಬಹುದಾದ ನಷ್ಟಪರಿಹಾರವನ್ನು ಕಮೀಷನರ್ನ ಮುಂದೆ ಠೇವಣಿ ಇರಿಸತಕ್ಕದ್ದು.
(2) ಸಕ್ಷಮ ಸಿವಿಲ್ ನ್ಯಾಯಾಲಯದ ಅಂತಿಮ ಡಿಕ್ರಿಯ ದೃಢೀಕೃತ ಪ್ರತಿಯನ್ನು ಕಮೀಷನರ್ಗೆ ಒದಗಿಸದೆ, ಕ್ಲೇಮುದಾರರ ನಡುವೆ ತಮ್ಮೊಳಗೆ ವಿವಾದಗಳು ಉದ್ಭವವಾದ ಸಂದರ್ಭದಲ್ಲಿ, ಯಾರೇ ಕ್ಲೇಮುದಾರನು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ರ 13ನೇ ಪ್ರಕರಣದಡಿ ಕಮೀಷನರ್ನಿಂದ ಯಾವುದೇ ನಷ್ಟಪರಿಹಾರವನ್ನು ಹಿಂಪಡೆಯಲು ಹಕ್ಕುಳ್ಳವನಾಗಿರತಕ್ಕದ್ದಲ್ಲ:
ಪರಂತು, ತಮ್ಮೊಳ?ಿನ ವಿವಾದಗಳ ಇತ್ಯರ್ಥದ ಅಂತಿವು ಡಿಕ್ರಿಯು ಯಾರ ಪರವಾಗಿದೆಯೋ ಅಂಥ ಕ್ಲೇಮುದಾರನಿಗೆ ಕಮೀಷನರ್ನು ನಷ್ಟಪರಿಹಾರವನ್ನು ಬಿಡುಗಡೆಗೊಳಿಸುವ ಮೊದಲು, ಕಮೀಷನರ್ನು ಹಿತಾಸಕ್ತಿಯುಳ್ಳ ಯಾರೇ ವ್ಯಕ್ತಿಯ ಮೌಖಿಕ ವಿಚಾರಣೆಗೆ ಅವಕಾಶವನ್ನು ನೀಡತಕ್ಕದ್ದು.
ಮತ್ತು ಪರಂತು, ಅಪೀಲು ವ್ಯವಹರಣೆಗಳಲ್ಲಿ ಯಾವುದೇ ನ್ಯಾಯಾಲಯ ಅಂತಿಮ ಡಿಕ್ರಿಯ ಕಾರ್ಯಾಚರಣೆಯ ಮೇಲೆ ತಡೆಯಾಜ್ಞೆ ನೀಡಿದಲ್ಲಿ, ಕಮಿಷನರ್ನು ಯಾರೇ ಕ್ಲೇಮುದಾರನಿಗೆ ಯಾವುದೇ ನಷ್ಟಪರಿಹಾರವನ್ನು ಬಿಡುಗಡೆಗೊಳಿಸತಕ್ಕದ್ದಲ್ಲ.
(3) ಕಮೀಷನರ್, ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ರ 20ನೇ ಪ್ರಕರಣದ ಅನುಸಾರ ಕ್ಲೇಮುದಾರನು ಅಂಥ ನಷ್ಟಪರಿಹಾರದ ನ್ಯಾಯಯುತ ಸ್ವೀಕೃತದಾರನೆಂದು ಪೂರ್ಣವಾಗಿ ಮನದಟ್ಟಾದ ಮೇಲೆ ಮಾತ್ರ (2)ನೇ ಉಪಪ್ರಕರಣದ ನಿಬಂಧನೆಗಳಡಿ ಕ್ಲೇಮುದಾರನಿಗೆ ನಷ್ಟಪರಿಹಾರವನ್ನು ವಿತರಿಸತಕ್ಕದ್ದು.
(4) ಉಪಪ್ರಕರಣ (2) ಮತ್ತು (3)ರಡಿ ಕಮೀಷನರ್ನ ತೀರ್ಮಾನವು ಅಂತಿಮವಾಗಿರತಕದ್ದು.