(1) ಈ ಅಧ್ಯಾದೇಶಕ್ಕೆ ವಿರುದ್ಧವಾದುದು, ಯಾವುದೇ ನ್ಯಾಯಾಲಯದ ಯಾವುದೇ ತೀರ್ಪ ಅಥವಾ ಯಾವುದೇ ಆದೇಶ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಕಾನೂನಿನಲ್ಲಿ ಏನೇ ಒಳಗೊಂಡಿದ್ದರೂ, ನಷ್ಟಪರಿಹಾರದ ಉದ್ದೇಶಕ್ಕಾಗಿ ಭೂಮಿಯ ಮಾರ್ಗಸೂಚಿ ಮೌಲ್ಯವು ಈ ಅಧ್ಯಾದೇಶದ ಅನುಸಾರವಾಗಿರತಕ್ಕದ್ದು.
(2) ಈ ಅಧ್ಯಾದೇಶದ 3ನೇ ಪ್ರಕರಣದ (ನೇ ಉಪಪ್ರಕರಣದಡಿ ಬಳಸಲಾದ ಬೆಂಗಳೂರು ಅರಮನೆಯ ಯಾವುದೇ ಭಾಗಕ್ಕಾಗಿನ ನಷ್ಟಪರಿಹಾರದ ಲೆಕ್ಕಾಚಾರದ ಉದ್ದೇಶಕ್ಕಾಗಿ, ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ರ 8ನೇ ಪ್ರಕರಣ ಮತ್ತು 9ನೇ ಪ್ರಕರಣದ ಅನುಸಾರವಾಗಿ ಪ್ರಮಾಣಾನುಸಾರ ಮೌಲ್ಯವಾಗಿರತಕ್ಕದ್ದು, ಅದನ್ನು ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ರಡಿ ಗೊತ್ತುಪಡಿಸಿದ ದಿನಾಂಕದಿಂದ ಕರ್ನಾಟಕ ಸ್ನ್ಥಾಂಪು ಅಧಿನಿಯಮ, 1957ರ 45ಬಿ ಪ್ರಕರಣದಡಿ ಮಾರ್ಗಸೂಚಿ ಮೌಲ್ಯವೆಂದು ಭಾವಿಸತಕ್ಕದ್ದು.
ವಿವರಣೆ L- “ಮಾರ್ಗಸೂಚಿ ಮೌಲ್ಯ” ವಿರ್ಧರಣೆಗಾಗಿ, ಯಾವುದೇ ತೀರ್ಪ ಅಥವಾ ನ್ಯಾಯಾಲಯದ ಆದೇಶದ ವಿರುದ್ಧವಾಗಿ ಏನೇ ಇದ್ದರೂ, ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ರ ಪ್ರಕಾರ ಮೌಲ್ಯವಿರ್ಧರಣೆಯನ್ನು ಕರ್ನಾಟಕ ಸ್ಟಾಂಪು ಅಧಿನಿಯಮ, 1957ರ 45ಬಿ ಪ್ರಕರಣದಡಿ ಮಾರ್ಗಸೂಚಿ ಮೌಲ್ಯವೆಂದು ಭಾವಿಸತಕ್ಕದ್ದು.
ವಿವರಣೆ ॥.- “ಗೊತ್ತುಪಡಿಸಿದ ದಿನಾಂಕ” ಎಂಬ ಪದಾವಳಿಯು, ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ರ 2ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿ ಇರುವ ಅದೇ ಅರ್ಥವನ್ನು ಹೊಂದಿರತಕ್ಕದ್ದು, ಅಂದರೆ 21.11.1996.
(3) ಸಕ್ಲೇಮುದಾರವಿಗೆ. ಸಂದಾಯ ಮಾಡಬಹುದಾದ ನಷ್ಟಪರಿಹಾರವು ಈ ಮುಂ೦ದಿನಂತಿರತಕ್ಕದ್ದು:
(ಎ) ಭೂ ವ್ಯಾಪ್ತಿಯ ಪ್ರಮಾಣಾನುಸಾರ (2ನೇ ಉಪಪ್ರಕರಣದ ಪ್ರಕಾರ ಪ್ರಮಾಣಾನುಸಾರ ಮೌಲ್ಯದ ಮೊತ್ತ ಅಥವಾ ಸಂದರ್ಭಾನುಸಾರ,
(ಬಿ) ,. ಉಪಪ್ರಕರಣ (2ರ ಪ್ರಕಾರ ಪ್ರಮಾಣಾನುಸಾರ ಮೌಲ್ಯದ ಮೇಲೆ ವರ್ಗಾಯಿಸಬಹುದಾದ ಅಭಿವೃದ್ಧಿ ಹಕ್ಕುಗಳು.
(4) ಯಾವುದೇ ನ್ಯಾಯಾಲಯದ ಯಾವುದೇ ಆದೇಶ ಅಥವಾ ತೀರ್ಪು ಏನೇ ಇದ್ದರೂ, ಈ ಅಧ್ಯಾದೇಶದ ಮೂಲಕ ನಿಯಮಿಸಲಾದುದಕ್ಕೆ ಹೊರತಾಗಿ ಕ್ಲೇಮುದಾರರು ಯಾವುದೇ ಇತರೆ ನಷ್ಟಪರಿಹಾರದ ಹಕ್ಕನ್ನು ಹೊಂದಿರತಕ್ಕದ್ದಲ್ಲ.
(5) ಈ ಅಧ್ಯಾದೇಶದ ಮೇರೆಗಿನ ನಷ್ಟಪರಿಹಾರವನ್ನು, ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ರ 13ನೇ ಪ್ರಕರಣದಡಿ ಕಮೀಷನರ್ ನಿರ್ಧರಿಸಿದಂತೆ ಅಂತಿಮ ನಷ್ಟಪರಿಹಾರ ಸಂದಾಯಕ್ಕೆ ಪ್ರಮಾಣಾನುಸಾರವಾಗಿ ಹೊಂದಾಣಿಕೆ ಮಾಡಿಕೊಳ್ಳತಕ್ಕದ್ದು.
(6) ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ರ 8ನೇ ಪ್ರಕರಣ ಮತ್ತು 9ನೇ ಪ್ರಕರಣದೊಂ೦ದಿಗೆ ಅಸಂಗತವಾದ ನಷ್ಟಪರಿಹಾರದ ಸಂದರ್ಭದಲ್ಲಿ, ಕ್ಲೇಮುದಾರರು (3)ನೇ ಉಪಪ್ರಕರಣದಡಿ ಯಾವುದೇ ಅಂಥ ನಷ್ಟಪರಿಹಾರದ ಬಳಕೆಗೆ ನಷ್ಟಭರ್ತಿಗಾಗಿ ಸರ್ಕಾರಕ್ಕೆ ಹೊಣೆಗಾರರಾಗಿರತಕ್ಕದ್ದು.
(7) ಯಾವುದೇ ನ್ಯಾಯಾಲಯದ ಯಾವುದೇ ಆದೇಶ ಅಥವಾ ತೀರ್ಪಿಗೆ ಅಥವಾ ತತ್ಕಾಲದಲ್ಲಿ ಜಾರಿಯಲ್ಲಿರುವ ಯಾವುದೇ ಇತರೆ ಕಾನೂನಿಗೆ ವಿರುದ್ಧವಾದುದು ಏನೇ ಇದ್ದರೂ, ಈ ಅಧ್ಯಾದೇಶದೊಂದಿಗೆ ಓದಲಾದಂ೦ತೆ ಬೆಂಗಳೂರು ಅರಮನೆ (ಆರ್ಜನೆ ಮತ್ತು ವರ್ಗಾವಣೆ) ಅಧಿನಿಯಮ, 1996ರ 8ನೇ ಪ್ರಕರಣ ಮತ್ತು 9ನೇ ಪ್ರಕರಣದಲ್ಲಿ ನಿರ್ಧರಿಸಲಾದ ನಷ್ಟಪರಿಹಾರವು ಅಂ೦ತಿಮವಾಗಿರತಕ್ಕದ್ದು.
(8) ಈ ಅಧ್ಯಾದೇಶದೊಂದಿಗೆ ಯಾವುದೇ ನ್ಯಾಯಾಲಯದ ಯಾವುದೇ ಆದೇಶ ಅಥವಾ ತೀರ್ಪಿನ ಯಾವುದೇ ಅಸಂಗತತೆಯ ಸಂದರ್ಭದಲ್ಲಿ, 3ನೇ ಪ್ರಕರಣದ (1ನೇ ಉಪಪ್ರಕರಣದಡಿ ಬಳಸಲಾದ ಭೂಮಿಗಳ ನಷ್ಟಪರಿಹಾರದ ನಿರ್ಧರಣೆಗಾಗಿ, ಈ ಅಧ್ಯಾದೇಶದ ಉಪಬಂಧಗಳು ಪ್ರಭಾವಿಯಾಗಿರತಕ್ಕದ್ದು.