(1) ರಾಜ್ಯ ಪತ್ರದಲ್ಲಿ ಈ ನಿಯಮಗಳನ್ನು ಪ್ರಕಟಿಸಿದ ದಿನಾಂಕದಿಂದ, ಆ ದಿನಾಂಕದಂದು ಕೈಗಾರಿಕಾ ಸಂಸ್ಥೆಗಳು ಅಸ್ತಿತ್ವದಲ್ಲಿದ್ದರೆ, ಮೂವತ್ತು ದಿನಗಳ ಒಳಗಾಗಿ ಮತ್ತು ಹೊಸ ಕೈಗಾರಿಕಾ ಸಂಸ್ಥೆಗಳಾದರೆ ಅದು ಕೆಲಸವನ್ನು ಪ್ರಾರಂಭಿಸಿದ ದಿನಾಂಕದಿಂದ ಮೂವತ್ತು ದಿವಸಗಳೊಳಗಾಗಿ, ಕೈಗಾರಿಕಾ ಸಂಸ್ಥೆಯ ನಿಯೋಜಕನು, 4ನೇ ನಿಯಮದ ಮೇರೆಗೆ ಸಮಾಲೋಚಿಸಿದ ತರುವಾಯ, 3ನೇ ಪ್ರಕರಣದ ಮೇರೆಗೆ ಅನುಮತಿಸಿದ ಮತ್ತು ಕ್ಯಾಲೆಂಡರ್ ವರ್ಷದಲ್ಲಿ ಆ ರಜಾದಿನಗಳು ವೇತನದ ರಜಾದಿನಗಳೆಂದು ಘೋಷಿಸಿದ ರಾಷ್ಟ್ರೀಯ ಮತ್ತು ಹಬ್ಬದ ರಜಾದಿನಗಳ ಪಟ್ಟಿಯನ್ನು ನೋಟೀಸು ಬೋರ್ಡಿನ ಮೇಲೆ ಮತ್ತು ಸಂಸ್ಥೆಯಲ್ಲಿನ ಯಾವುದೇ ಇತರ ಎದ್ದುಕಾಣುವ ಸ್ಥಳದಲ್ಲಿ, ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಸಂಬಂಧಪಟ್ಟ ನೌಕರರ ಮಾಹಿತಿಗಾಗಿ ಪ್ರದರ್ಶಿಸತಕ್ಕದ್ದು:
ಪರಂತು, ಪ್ರತಿ ತರುವಾಯದ ಕ್ಯಾಲೆಂಡರ್ ವರ್ಷಕ್ಕಾಗಿ ರಜಾದಿನಗಳನ್ನು ಘೋಷಿಸಬೇಕಾದ ಸಂದರ್ಭದಲ್ಲಿ ಅಂಥ ಘೋಷಣೆಯನ್ನು ಪ್ರತಿವರ್ಷ 31ನೇ ಡಿಸೆಂಬರ್ಗೆ ಮುಂಚಿತವಾಗಿ ಒಂದು ಎದ್ದುಕಾಣುವ ಸ್ಥಳದಲ್ಲಿ ಪ್ರದರ್ಶಿಸತಕ್ಕದ್ದು.