5ನೇ ಪ್ರಕರಣದ (3)ನೇ ಉಪ-ಪ್ರಕರಣದ (i)ನೇ ಖಂಡದ ಉದ್ದೇಶಕ್ಕಾಗಿ ಉದ್ಯೋಗಿಯ ದೈನಂದಿನ ಸರಾಸರಿ ಮಜೂರಿಯನ್ನು, 3ನೇ ಪ್ರಕರಣದ ಮೇರೆಗೆ ಮಂಜೂರು ಮಾಡಿದ ರಜಾದಿನಕ್ಕೆ ನಿಕಟಪೂರ್ವದಲ್ಲಿ ಮೂವತ್ತು ದಿವಸಗಳ ಅವಧಿಯಲ್ಲಿ ಆ ಕೈಗಾರಿಕಾ ಸಂಸ್ಥೆಯಲ್ಲಿ ಅವನು ಕೆಲಸ ಮಾಡಿರುವಂಥ ದಿನಗಳಿಗಾಗಿ ಅವನ ಒಟ್ಟು ಪೂರ್ಣಕಾಲಿಕ ಮಜೂರಿಗಳ ದೈನಂದಿನ ಸರಾಸರಿಗೆ ಸಮನಾದ ದರದಲ್ಲಿ ಲೆಕ್ಕ ಹಾಕತಕ್ಕದ್ದು.
1 [10. ಇನ್ಸ್ಪೆಕ್ಟರ್ರ ಕರ್ತವ್ಯಗಳು.- ಇನ್ಸ್ಪೆಕ್ಟರ್ನು ಕೈಗಾರಿಕಾ ಸಂಸ್ಥೆಯನ್ನು ಪರಿಶೀಲನೆ ಮಾಡಿದ ಪ್ರತಿ ಬಾರಿಯೂ,-
(ಎ) 4ನೇ ನಿಯಮದ (1)ನೇ ಉಪನಿಯಮದ ಮೇರೆಗೆ ರಜಾದಿನಗಳ ವಿವರಣೆಪಟ್ಟಿಯನ್ನು ಪ್ರದರ್ಶಿಸಲಾಗಿದೆಯೆಂದು;
(ಬಿ) ರಜಾದಿನದ ಮಜೂರಿ ಮೊಬಲಗನ್ನು ಸಂದಾಯ ಮಾಡಲಾಗಿದೆಯೆಂದು ಅವನು ಸ್ವತಃ 1 ಮನದಟ್ಟುಮಾಡಿಕೊಳ್ಳತಕ್ಕದ್ದು.] 1. ಕರ್ನಾಟಕ ರಾಜ್ಯಪತ್ರ ಭಾಗ -iv-2ಸಿ (i) (ವಿಶೇಷ) ಸಂಖ್ಯೆ 162 ದಿನಾಂಕ 4.2.1998 ರಲ್ಲಿ ಪ್ರಕಟಿಸಲಾದ ಅಧಿಸೂಚನೆಯ ಮೂಲಕ 10ನೇ ನಿಯಮವನ್ನು ಪ್ರತಿಯೋಜಿಸಲಾಗಿದೆ. 1 [11. ವಾರ್ಷಿಕ ವಿವರ ಪಟ್ಟಿಕೆಗಳು.- [XXX] 1 12. ಹಾಜರಿ ಪಟ್ಟಿ.- [XXX] 1. ಕರ್ನಾಟಕ ರಾಜ್ಯಪತ್ರ ಭಾಗ -iv-2ಸಿ (i) (ವಿಶೇಷ) ಸಂಖ್ಯೆ 162 ದಿನಾಂಕ 4.2.1998 ರಲ್ಲಿ ಪ್ರಕಟಿಸಲಾದ ಅಧಿಸೂಚನೆಯ ಮೂಲಕ ಬಿಟ್ಟುಬಿಡಲಾಗಿದೆ.
1 13. ದಂಡನೆಗಳು.- 1 ಉಪಬಂಧಗಳನ್ನು ಉಲ್ಲಂಘಿಸುವ ಯಾರೇ ವ್ಯಕ್ತಿಯು, ಐವತ್ತು [ಈ ನಿಯಮಗಳ] ರೂಪಾಯಿಗಳಿಗೆ ವಿಸ್ತರಿಸಬಹುದಾದಂಥ ಜುಲ್ಮಾನೆಯಿಂದ ದಂಡಿತನಾಗತಕ್ಕದ್ದು.
- ಕರ್ನಾಟಕ ರಾಜ್ಯಪತ್ರ ಭಾಗ -iv-2ಸಿ (i) (ವಿಶೇಷ) ಸಂಖ್ಯೆ 162 ದಿನಾಂಕ 4.2.1998 ರಲ್ಲಿ ಪ್ರಕಟಿಸಲಾದ ಅಧಿಸೂಚನೆಯ ಮೂಲಕ ಪ್ರತಿಯೋಜಿಸಲಾಗಿದೆ. 1 1 [ನಮೂನೆ I ರಿಂದ VI XXX] 1. ಕರ್ನಾಟಕ ರಾಜ್ಯಪತ್ರ ಭಾಗ -iv-2ಸಿ (i) (ವಿಶೇಷ) ಸಂಖ್ಯೆ 162 ದಿನಾಂಕ 4.2.1998 ರಲ್ಲಿ ಪ್ರಕಟಿಸಲಾದ ಅಧಿಸೂಚನೆಯ ಮೂಲಕ ಬಿಟ್ಟುಬಿಡಲಾಗಿದೆ.
The above translation of the Karnataka Industrial Establishments (National and Festival Holidays) Act, 1963 (Karnataka Act 24 of 1963) and Karnataka Industrial Establishments (National and Festival Holidays) Rules, 1964 shall be authoriative text in the Kannada Language under section 5A of the Karnataka Official Language Act, 1963 (Karnataka Act No. 26 of 1963).
GOVERNER OF KARNATAKA
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಜಿ.ಕೆ. ಬೋರೇಗೌಡ
ಸರ್ಕಾರದ ಕಾರ್ಯದರ್ಶಿ,
ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ.