(1) 3ನೇ ಪ್ರಕರಣದ (2)ನೇ ಉಪಪ್ರಕರಣದ ಮೇರೆಗಿನ ತೀರ್ಮಾನಕ್ಕಾಗಿ ಒಪ್ಪಿಸಿದ ವಿವಾದವನ್ನು ಇನ್ಸ್ಪೆಕ್ಟರನು ಸ್ವೀಕರಿಸಿದ ತರುವಾಯ ಸಾಧ್ಯವಾಗಬಹುದಾದಷ್ಟು ಬೇಗನೆ, ವಿವಾದದ ಕುರಿತಂತೆ ತಮ್ಮ ಆಕ್ಷೇಪಣೆಗಳನ್ನು ಅಥವಾ ಸಲಹೆಗಳನ್ನು ಅಥವಾ ಅಭಿಪ್ರಾಯಗಳನ್ನು ಸಲ್ಲಿಸುವುದಕ್ಕೆ ಅವನು ನಿಯೋಜಕನಿಗೆ ಮತ್ತು ಉದ್ಯೋಗಿಗಳಿಗೆ ಅಥವಾ ಅವರ ನೋಂದಾಯಿತ ಕಾರ್ಮಿಕ ಸಂಘಕ್ಕೆ ಯುಕ್ತ ಅವಕಾಶವನ್ನು ಅವನು ನೀಡಿದ ತರುವಾಯ ಮತ್ತು ಸಂದರ್ಭಾನುಸಾರ, ಅವರ ಆಕ್ಷೇಪಣೆಗಳನ್ನು ಸಲಹೆಗಳನ್ನು ಅಥವಾ ಅಭಿಪ್ರಾಯಗಳನ್ನು ಪರಿಶೀಲಿಸಿದ ತರುವಾಯ, ವಿವಾದವನ್ನು ತೀರ್ಮಾನಿಸತಕ್ಕದ್ದು.
(2) ಇನ್ಸ್ಪೆಕ್ಟರನು, ತೀರ್ಮಾನವನ್ನು ತೆಗೆದುಕೊಂಡ ದಿನಾಂಕದಿಂದ ಐದುದಿವಸಗಳೊಳಗಾಗಿ, ಸಂದರ್ಭಾನುಸಾರ ನಿಯೋಜಕನಿಗೆ ಮತ್ತು ಉದ್ಯೋಗಿಗಳಿಗೆ ಅಥವಾ ಸಂಬಂಧಪಟ್ಟ ಕಾರ್ಮಿಕ ಸಂಘಕ್ಕೆ ತನ್ನ ಲಿಖಿತ ತೀರ್ಮಾನವನ್ನು ತಿಳಿಸತಕ್ಕದ್ದು ಮತ್ತು ನಿಯೋಜಕನು ಆ ತರುವಾಯ, 5ನೇ ನಿಯಮದಲ್ಲಿ ನಿರ್ದಿಷ್ಟಪಡಿಸಿದ 1 ರೀತಿಯಲ್ಲಿ ಆ ಕೂಡಲೇ ಅಂಥ ತೀರ್ಮಾನವನ್ನು ಪ್ರದರ್ಶಿಸತಕ್ಕದ್ದು.] 1. ಕರ್ನಾಟಕ ರಾಜ್ಯಪತ್ರ ಭಾಗ -iತ-2ಸಿ (i) (ವಿಶೇಷ) ಸಂಖ್ಯೆ 162 ದಿನಾಂಕ 4.2.1998 ರಲ್ಲಿ ಪ್ರಕಟಿಸಲಾದ ಅಧಿಸೂಚನೆಯ ಮೂಲಕ 4ನೇ, 5ನೇ ಮತ್ತು 6ನೇ ನಿಯಮಗಳನ್ನು ಪ್ರತಿಯೋಜಿಸಲಾಗಿದೆ.
1 [7. ಇನ್ಸ್ಪೆಕ್ಟರ್ನಿಂದ ಅನುಮೋದನೆ.- [XXX] 1 8. ಡಿಸೆಂಬರ್ನಿಂದ 31ಕ್ಕೆ ಮುಂಚೆ ಪ್ರದರ್ಶಿಸಬೇಕಾದ ರಜಾದಿನಗಳ ವಿವರಣೆ ಪಟ್ಟಿ.- [XXX] 1. ಕರ್ನಾಟಕ ರಾಜ್ಯಪತ್ರ ಭಾಗ -iv-2ಸಿ (i) (ವಿಶೇಷ) ಸಂಖ್ಯೆ 162 ದಿನಾಂಕ 4.2.1998 ರಲ್ಲಿ ಪ್ರಕಟಿಸಲಾದ ಅಧಿಸೂಚನೆಯ ಮೂಲಕ ಬಿಟ್ಟುಬಿಡಲಾಗಿದೆ.