(1) ಒಬ್ಬ ಸದಸ್ಯನು ಈ ಮುಂದಿನ ಪ್ರತಿಫಲ ಭತ್ಯೆಯನ್ನು ಪಡೆಯಲು ಹಕ್ಕು ಹೊಂದಿರತಕ್ಕದ್ದು, ಎಂದರೆ:-
(i) 1 [ಮಂಡಳಿಯ ಅಥವಾ ಅದರ ಯಾವುದೇ ಸಮಿತಿಯ ಸಭೆಗೆ ಹಾಜರಾಗುವ ಸದಸ್ಯನಿಗೆ ಅಂಥ ದಿನಮೊಂದಕ್ಕೆ ರಾಜ್ಯ ಸರ್ಕಾರವು ಕಾಲಕಾಲಕ್ಕೆ ಅನುಮೋದಿಸಬಹುದಾದಷ್ಟು ದಿನಭತ್ಯೆಗೆ ಸಮವಾದ ಮೊತ್ತದ ಒಂದು ಉಪವೇಶನ ಶುಲ್ಕ .
- ಅಧಿಸೂಚನೆ ಸಂಖ್ಯೆ ಸಿಐ 67 ಎಸ್ಪಿಕ್ಯೂ 87, ದಿನಾಂಕ 29ನೇ ಅಕ್ಟೋಬರ್/7.11.87(24.12.87) ರ ಮೂಲಕ ಪ್ರತಿಯೋಜಿಸಲಾಗಿದೆ (ii) (ಎ) ಸರ್ಕಾರಿ ನೌಕರನಾಗಿರದ ಒಬ್ಬ ನಾಮ ನಿರ್ದೇಶಿತ ಸದಸ್ಯನು ಈ ಮುಂದಿನಂತೆ ಪ್ರಯಾಣ ಭತ್ಯೆಯನ್ನು ಪಡೆಯಬಹುದು, ಎಂದರೆ:-
I. ರೈಲು ಪ್ರಯಾಣ 1ನೇ ದರ್ಜೆ I. ರೈಲು ಪ್ರಯಾಣ ....... Iನೇ ದರ್ಜೆ II. ರೈಲು ಪ್ರಯಾಣಕ್ಕಾಗಿ ಪ್ರಾಸಂಗಿಕ ವೆಚ್ಚಗಳು ...... ಮೈಲು ಒಂದಕ್ಕೆ ಆರು ಪೈಸೆ III. ರಸ್ತೆ ಮೈಲು ಭತ್ಯೆ ...... ಮೈಲು ಒಂದಕ್ಕೆ 50 ಪೈಸೆ IV. ದಿನಭತ್ಯೆ ...... ದಿನಮೊಂದಕ್ಕೆ 15 ರೂಪಾಯಿ 11. ರೈಲು ಪ್ರಯಾಣಕ್ಕಾಗಿ ಪ್ರಾಸಂಗಿಕ ವೆಚ್ಚಗಳು ಮೈಲು ಒಂದಕ್ಕೆ ಆರು ಪೈಸೆ ಮೈಲು ಒಂದಕ್ಕೆ 50 ಪೈಸೆ IV. ದಿನಭತ್ಯೆ ದಿನವೊಂದಕ್ಕೆ 15 ರೂಪಾಯಿ
(ಬಿ) ಸರ್ಕಾರಿ ನೌಕರರಾಗಿದ್ದು, ನಾಮನಿರ್ದೇಶಿತನಾಗಿರುವ ಸದಸ್ಯರೂ ಸೇರಿದಂತೆ, ಸದಸ್ಯರು ಎಲ್ಲ ಸರ್ಕಾರಿ ನೌಕರರಿಗೆ ಅನ್ವಯವಾಗುವಂಥ, ತತ್ಕಾಲದಲ್ಲಿ ಜಾರಿಯಲ್ಲಿರುವ ನಿಯಮಗಳ ಮೇರೆಗೆ ಅವರಿಗೆ ಅನುಮತಿಸಬಹುದಾದಂಥ ದರಗಳಲ್ಲಿ ಪ್ರಯಾಣ ಭತ್ಯೆ ಮತ್ತು ದಿನಭತ್ಯೆಯನ್ನು ಪಡೆಯಲು ಅರ್ಹರಾಗಿರತಕ್ಕದ್ದು.