ಮಂಡಳಿಯ ಲೆಕ್ಕಪತ್ರಗಳನ್ನು ವಾಣಿಜ್ಯ ಕ್ರಮದಲ್ಲಿ ಸಿದ್ಧಪಡಿಸತಕ್ಕದ್ದು ಮತ್ತು ನಿರ್ವಹಿಸತಕ್ಕದ್ದು.
(1) ಮಂಡಳಿಯು,-
(ಎ) ತಾನು ಸ್ವೀಕರಿಸಿದ ಎಲ್ಲ ಹಣಕ್ಕೆ;
(ಬಿ) ಆರ್ಥಿಕ ಸ್ವರೂಪದ ಎಲ್ಲ ಇತರ ವ್ಯವಹಾರಗಳಿಗೆ;
(ಸಿ) ಮಂಡಳಿಯ ಆಸ್ತಿ ಮತ್ತು ಹೊಣೆಗಾರಿಕೆಗಳಿಗೆ - ಸಂಬಂಧಿಸಿದಂತೆ ಸೂಕ್ತ ಲೆಕ್ಕಪುಸ್ತಕಗಳನ್ನು ತನ್ನ ಕೇಂದ್ರ ಕಚೇರಿಯಲ್ಲಿ ಇಡತಕ್ಕದ್ದು.
(2) ಮಂಡಳಿಯ ಲೆಕ್ಕಪತ್ರಗಳನ್ನು, ವಾಣಿಜ್ಯ ಲೆಕ್ಕಪತ್ರಗಳನ್ನಿಡುವ ತತ್ವಗಳಿಗನುಸಾರವಾಗಿ ದ್ವಿ-ನಮೂದು ಪದ್ಧತಿಯಲ್ಲಿ ನಿರ್ವಹಿಸತಕ್ಕದ್ದು.
(3) 24ನೇ ಪ್ರಕರಣದ ಅಡಿಯಲ್ಲಿ ಮಂಡಳಿಯು ಸಿದ್ಧಪಡಿಸತಕ್ಕ ಮತ್ತು ಸರ್ಕಾರಕ್ಕೆ ಸಲ್ಲಿಸತಕ್ಕ ವಾರ್ಷಿಕ ಲೆಕ್ಕಪತ್ರಗಳ ವಿವರಪತ್ರವು ನಮೂನೆ 3ರಲ್ಲಿರತಕ್ಕದ್ದು.