ಮಂಡಳಿಯ ಅಥವಾ ಯಾರೇ ಮೂರನೇ ಪಕ್ಷಕಾರನ ಯಾವುದೇ ಋಣ, ಹೊಣೆ ಅಥವಾ ಬಾಧ್ಯತೆಗಾಗಿ ಮಂಡಳಿಯು ಹಣವನ್ನು ಸಾಲ ಪಡೆಯಬಹುದು ಮತ್ತು ತನ್ನ ಉದ್ಯಮವನ್ನು ಮತ್ತು ಸ್ವತ್ತನ್ನು (ಅದರ ರಾಜಸ್ವಗಳೂ ಸೇರಿ) ಅಥವಾ ಅದರ ಯಾವುದೇ ಭಾಗವನ್ನು ಅಡಮಾನ ಮಾಡಬಹುದು ಅಥವಾ ಅದರ ಮೇಲೆ ಋಣಭಾರ ಹೊರಿಸಬಹುದು ಮತ್ತು ಮೇಲೆ ಹೇಳಿದ ಋಣ, ಹೊಣೆ ಅಥವಾ ಬಾಧ್ಯತೆಯ ಸಂಬಂಧದಲ್ಲಿ ಒಟ್ಟಾರೆಯಾಗಿ ಅಥವಾ ಭದ್ರತೆಯಾಗಿ ಡಿಬೆಂಚರು, ಡಿಬೆಂಚರು ಸ್ಟಾಕು, ನೋಟುಗಳು ಮತ್ತು ಇತರ ಭದ್ರತಾಪತ್ರಗಳನ್ನು ಒದಗಿಸಬಹುದು. ಆದರೆ, ಮೇಲೆ ಹೇಳಲಾದಂತೆ ತಾತ್ಕಾಲಿಕ ಸಾಲಗಳನ್ನು ಹೊರತುಪಡಿಸಿ ತತ್ಕಾಲದಲ್ಲಿ ಉಳಿದಿರುವ ಮತ್ತು ಮಂಡಳಿಯು ಮೇಲೆ ಹೇಳಿದಂತೆ ಸಾಲ ಪಡೆದಿರುವ ಅಥವಾ ಭದ್ರತೆಯೊದಗಿಸಿರುವ ಹಣದ ಋಣಭಾರದ ಒಟ್ಟು ಮೊಬಲಗು ಯಾವುದೇ ಸಮಯದಲ್ಲಿ ರಾಜ್ಯ ಸರ್ಕಾರದ ಪೂರ್ವಸಮ್ಮತಿ ಪಡೆಯದೆ 50,00,000 ರೂಪಾಯಿಗಳನ್ನು (ಐವತ್ತು ಲಕ್ಷ ರೂಪಾಯಿಗಳನ್ನು) ಮೀರತಕ್ಕದ್ದಲ್ಲ.
Loading…