24ನೇ ಪ್ರಕರಣದ (3) (ಬಿ) ಉಪಪ್ರಕರಣದ ಅಡಿಯಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕಾದ ಮಂಡಳಿಯ ಕಾರ್ಯನಿರ್ವಹಣೆಯ ವಾರ್ಷಿಕ ವರದಿಯ ಇತರ ವಿವರಗಳು ಈ ಮುಂದಿನ ವಿವರಗಳನ್ನು ಒಳಗೊಂಡಿರತಕ್ಕದ್ದು,-
(ಎ) ರಾಜ್ಯ ಸರ್ಕಾರವು ಮಂಡಳಿಗೆ ವಹಿಸಿದ ಕೈಗಾರಿಕಾ ಪ್ರದೇಶಗಳು ಅಥವಾ ಕೈಗಾರಿಕಾ ಎಸ್ಟೇಟ್ಗಳು;
(ಬಿ) ವರದಿಯ ವರ್ಷದ ಕಾಮಗಾರಿ ಯೋಜನೆ;
(ಸಿ) ನಿರ್ದಿಷ್ಟವಾಗಿ ಈ ಮುಂದಿನವುಗಳಿಗೆ ಸಂಬಂಧಿಸಿದಂತೆ ವರ್ಷದಲ್ಲಿ ಆದ ಕಾಮಗಾರಿಯ ಪ್ರಗತಿ:-
(i) ಸ್ವಾಧೀನಪಡಿಸಿಕೊಳ್ಳಲಾದ ಭೂಮಿ;
(ii) ಸಾಧಿಸಲಾದ ಅಭಿವೃದ್ಧಿ;
(iii) ಒದಗಿಸಲಾದ ಮೂಲಭೂತ ಸೌಕರ್ಯಗಳು;
(iv) ಕೈಗಾರಿಕಾ ಪ್ರದೇಶ ಅಥವಾ ಎಸ್ಟೇಟ್ ಗಳಲ್ಲಿ ಸ್ಥಾಪಿಸಲಾದ ಕೈಗಾರಿಕೆಗಳು; ಮತ್ತು
(v) ಅಧಿನಿಯಮದ ಅಡಿಯಲ್ಲಿ ಮತ್ತು ಅದಕ್ಕೆ ಅನುಸಾರವಾಗಿ ಮಂಡಳಿಗೆ ವಹಿಸಲಾದ ಮತ್ತು ಅದು ಕೈಗೊಂಡ ಯಾವುದೇ ಇತರ ಚಟುವಟಿಕೆಗಳ ವಿವರಗಳು;
(ಡಿ) ಮಂಡಳಿಗೆ ಒದಗಿಸಲಾದ ಹಣಕಾಸು ;
(ಇ) ಮಂಡಳಿಯ ರಚನೆಯಲ್ಲಿ ಯಾವುವಾದರೂ ಬದಲಾವಣೆಗಳು, ಆಗಿದ್ದಲ್ಲಿ ಅವು;
(ಎಫ್) ಮಂಡಳಿಯ ಸಿಬ್ಬಂದಿ ಮತ್ತು ಅದರ ವ್ಯವಹಾರ ನಿರ್ವಹಣೆ;
(ಜಿ) ರಾಜ್ಯಸರ್ಕಾರವು ಪಾಲಿಸಲು ಮಂಡಳಿಗೆ ನೀಡಿದ ನಿರ್ದೇಶನಗಳು;
(ಎಚ್) ವೆಚ್ಚ, ರಾಜಸ್ವ ಹೊಣೆಗಾರಿಕೆಗಳು ಮತ್ತು ಆಸ್ತಿಗಳನ್ನು ತೋರಿಸುವ ಸರಕು ಜಡತಿ
(2) ಮಂಡಳಿಯು, ವರ್ಷದ ಮೊದಲ ಆರು ತಿಂಗಳುಗಳ ತನ್ನ ಕಾರ್ಯ ನಿರ್ವಹಣೆಯನ್ನು ಮತ್ತು ಲೆಕ್ಕಪತ್ರಗಳನ್ನು ಆಧರಿಸಿದ ಒಂದು ಪ್ರಗತಿ ವರದಿಯನ್ನು ಪ್ರತಿಯೊಂದು ವರ್ಷದ ನವೆಂಬರ್ ಮೊದಲ ದಿನದ ಹೊತ್ತಿಗೆ ರಾಜ್ಯ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.