(1) ಪ್ರೊಬೇಷನ್ ಅವಧಿಯನ್ನು, ಕಾರಣಗಳನ್ನು ಲಿಖಿತದಲ್ಲಿ ದಾಖಲಿಸಿ,-
(i) ರಾಜ್ಯಪಾಲರು ಅಥವಾ ಸರ್ಕಾರವು, ಅವರು ಅಥವಾ ಅದು ಯುಕ್ತವೆಂದು ಭಾವಿಸಬಹುದಾದಷ್ಟು ಅವಧಿಯವರೆಗೆ;
(ii) ಯಾವುದೇ ಇತರ ನೇಮಕ ಪ್ರಾಧಿಕಾರವು, ನಿರ್ದಿಷ್ಟಪಡಿಸಿದ ಪ್ರೊಬೇಷನ್ ಅವಧಿಯ ಅರ್ಧಕ್ಕಿಂತ ಹೆಚ್ಚಾಗದಷ್ಟು ಅವಧಿಯವರೆಗೆ - ವಿಸ್ತರಿಸಬಹುದು:
ಪರಂತು, ಹಾಗೆ ನಿರ್ದಿಷ್ಟಪಡಿಸಿದ ಅಥವಾ ವಿಸ್ತರಿಸಿದ ಪ್ರೊಬೇಷನ್ ಅವಧಿಯೊಳಗೆ ಪ್ರೊಬೇಷನರನು, ಪ್ರೊಬೇಷನ್ ಅವಧಿಯಲ್ಲಿ ತೇರ್ಗಡೆಯಾಗಬೇಕಾಗಿರುವ ಯಾವುವೇ ಪರೀಕ್ಷೆಗಳು ಅಥವಾ ಉಪ ಪರೀಕ್ಷೆಗಳಿಗೆ ಹಾಜರಾಗಿದ್ದರೆ ಮತ್ತು ಅವುಗಳ ಫಲಿತಾಂಶವು ಅಂಥ ಅವಧಿಯು ಮುಕ್ತಾಯವಾಗುವುದಕ್ಕೆ ಮುಂಚೆ ತಿಳಿದುಬರದಿದ್ದರೆ, ಆಗ ಪ್ರೊಬೇಷನ್ ಅವಧಿಯನ್ನು ಅಂಥ ಪರೀಕ್ಷೆಗಳು ಅಥವಾ ಉಪ ಪರೀಕ್ಷೆಗಳ ಅಥವಾ ಇವುಗಳ ಪೈಕಿ ಯಾವ ಪರೀಕ್ಷೆಗಳಲ್ಲಿ ಉತ್ತೀರ್ಣನಾಗಲು ವಿಫಲನಾಗಿರುವನೋ ಅವುಗಳ ಫಲಿತಾಂಶಗಳು ಪ್ರಕಟವಾಗುವವರೆಗೆ ವಿಸ್ತರಿಸಲಾಗಿದೆಯೆಂದು ಭಾವಿಸತಕ್ಕದ್ದು.
(2) ಸರ್ಕಾರವು, ಆದೇಶದ ಮೂಲಕ ಪ್ರೊಬೇಷನರ್ನ ಪ್ರೊಬೇಷನ್ ಅವಧಿಯನ್ನು, ಆತನನ್ನು ನೇಮಕ ಮಾಡಿರುವ ಹುದ್ದೆಯ ಕರ್ತವ್ಯಗಳನ್ನು ಅಥವಾ ಯಾವ ಹುದ್ದೆಯ ಕರ್ತವ್ಯಗಳು ಆತನನ್ನು ನೇಮಕ ಮಾಡಿದ ಹುದ್ದೆಯ ಕರ್ತವ್ಯಗಳಿಗೆ ಸಮಾನವಾಗಿವೆ ಮತ್ತು ಅದೇ ಸ್ವರೂಪದವುಗಳಾಗಿವೆ ಎಂದು ಸರ್ಕಾರವು ಅಭಿಪ್ರಾಯಪಡುವುದೋ ಆ ಹುದ್ದೆಯ ಕರ್ತವ್ಯಗಳನ್ನು ನಿರ್ವಹಿಸಿದ ಅವಧಿಯನ್ನು ಮೀರದಂತೆ ಅಂಥ ಅವಧಿಯವರೆಗೆ ಕಡಿಮೆ ಮಾಡಬಹುದು.