(1) 5ನೇ ನಿಯಮದಲ್ಲಿ ಏನೇ ಒಳಗೊಂಡಿದ್ದರೂ, ನೇಮಕ ಪ್ರಾಧಿಕಾರವು, ನಿಯಮಗಳ ಮೂಲಕ ಅಥವಾ ನೌಕರಿ ಭರ್ತಿ ಆದೇಶದಲ್ಲಿ ವಿಧಿಸಲಾಗಿರುವ ಷರತ್ತುಗಳು ಯಾವುವಾದರೂ ಇದ್ದರೆ ಅವುಗಳಿಂದ ಅಥವಾ ಹುದ್ದೆಯಲ್ಲಿ ಆತನ ಸೇವೆಗೆ ಆತನು ಸೂಕ್ತನಲ್ಲವೆಂಬ ಕಾರಣದಿಂದ ಉದ್ಭವಿಸುವ ಆಧಾರಗಳ ಮೇಲೆ, ಪ್ರೊಬೇಷನರನನ್ನು ಪ್ರೊಬೇಷನ್ ಅವಧಿಯ ಯಾವುದೇ ಕಾಲದಲ್ಲಿ ಸೇವೆಯಿಂದ ಬಿಡುಗಡೆ ಮಾಡಬಹುದು, ಆದರೆ ಸರ್ಕಾರವು ಹಾಗೆ ಸೇವೆಯಿಂದ ಬಿಡುಗಡೆ ಮಾಡಿರುವ ಆದೇಶವನ್ನು ಹೊರಡಿಸಿದ ಹೊರತು ನಿಕಟ ಉನ್ನತ ಪ್ರಾಧಿಕಾರಕ್ಕೆ ಅದನ್ನು ಸಲ್ಲಿಸುವವರೆಗೆ ಮತ್ತು ಆ ಪ್ರಾಧಿಕಾರವು ಅದನ್ನು ಸ್ಥಿರೀಕರಿಸುವವರೆಗೆ ಅದನ್ನು ಜಾರಿಗೊಳಿಸತಕ್ಕದ್ದಲ್ಲ.
(2) ಈ ನಿಯಮದ ಅಡಿಯಲ್ಲಿ ಪ್ರೊಬೇಷನರ್ನನ್ನು ಸೇವೆಯಿಂದ ಬಿಡುಗಡೆ ಮಾಡುವ ಆದೇಶವು ಸೇವೆಯಿಂದ ಬಿಡುಗಡೆಯ ಆಧಾರಗಳನ್ನು ತಿಳಿಸತಕ್ಕದ್ದು. ಆದರೆ ಕರ್ನಾಟಕ ಸಿವಿಲ್ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಅಪೀಲು) ನಿಯಮಗಳು, 1957ರ ಅಡಿಯಲ್ಲಿ ಔಪಚಾರಿಕ ವ್ಯವಹರಣೆಗಳು ಅವಶ್ಯವಾಗಿರತಕ್ಕದ್ದಲ್ಲ.