ಪೂರ್ಮೋಕ್ತ ನಿಯಮಗಳಲ್ಲಿ ಏನೇ ಒಳಗೊಂಡಿದ್ದರೂ, ಯಾರೇ ವ್ಯಕ್ತಿಯನ್ನು ಪ್ರೊಬೇಷನರ್ನನ್ನಾಗಿ ನೇಮಕ ಮಾಡಿರುವುದರ ಸಿಂಧುತ್ವವನ್ನು ಯಾವುದೇ ನ್ಯಾಯಾಲಯದ ಮುಂದಿರುವ ಯಾವುದೇ ಕಾನೂನು ವ್ಯವಹರಣೆಯಲ್ಲಿ ಪ್ರಶ್ನಿಸಿರುವಾಗ 2 [ಮತ್ತು ಅಂಥ ನ್ಯಾಯಾಲಯ ನೀಡಿರುವ ಪ್ರೊಬೇಷನ್ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿರುವ ಬಗ್ಗೆ ಘೋಷಣೆಯನ್ನು ಪ್ರತಿಷೇಧಿಸುವ ಮಧ್ಯಕಾಲೀನ ಆದೇಶಗಳನ್ನು ಅಂಥ ನ್ಯಾಯಾಲಯವು ಮಾಡಿರುವಾಗ ಅಂಥ ವ್ಯಕ್ತಿಯ ಪ್ರೊಬೇಷನ್ ಅವಧಿಯು ವ್ಯವಹರಣೆಗಳು ಅಂತಿಮವಾಗಿ ವಿಲೆಯಾಗುವವರೆಗೆ ಮುಂದುವರೆಯತಕ್ಕದ್ದು ಮತ್ತು ಅಂಥ ವಿಲೆ ಇತ್ಯರ್ಥದಲ್ಲಿರುವಾಗ, ನೇಮಕ ಪ್ರಾಧಿಕಾರವು, ಪ್ರೊಬೇಷನರನು ನಿರ್ದಿಷ್ಟಪಡಿಸಿದ ಅಥವಾ ವಿಸ್ತರಿಸಿದ ಪ್ರೊಬೇಷನ್ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿರುವನೆಂದು ಅದಕ್ಕೆ ಮನದಟ್ಟಾದರೆ, ಅಂಥ ನಿರ್ದೇಶನದಲ್ಲಿ ನಿರ್ದಿಷ್ಟಪಡಿಸಬಹುದಾದಂಥ ದಿನಾಂಕದಿಂದ ಅಂಥ ಪ್ರೊಬೇಷನರ್ನು ಹೊಂದಿರುವ ಹುದ್ದೆಯ ವೇತನ ಶ್ರೇಣಿಯಲ್ಲಿ ವೇತನ ಬಡ್ತಿಗಳನ್ನು ಪಡೆಯುವುದಕ್ಕೆ ಹಕ್ಕುಳ್ಳವನಾಗಿರತಕ್ಕದ್ದೆಂದು ನಿರ್ದೇಶಿಸಬಹುದು ಮತ್ತು ಅಂಥ ವೇತನ ಬಡ್ತಿಗಳನ್ನು ಸಾಮಾನ್ಯವಾಗಿ, ಸರ್ಕಾರಿ ನೌಕರರಿಗೆ ಅನ್ವಯಿಸುವ ವೇತನ ಬಡ್ತಿಗಳನ್ನು ಪಡೆಯುವುದನ್ನು ನಿಯಂತ್ರಿಸುವ ಇತರ ಉಪಬಂಧಗಳಿಗೆ ಒಳಪಟ್ಟು, ಅಂಥ ಪ್ರೊಬೇಷನರನು ತದನುಸಾರವಾಗಿ ಪಡೆಯತಕ್ಕದ್ದು:
- ಅಧಿಸೂಚನೆ ಸಂಖ್ಯೆ ಡಿಪಿಎಆರ್ 65 ಎಸ್ಆರ್ಆರ್ 78, 18-4-1980 ರಾಜ್ಯಪತ್ರ 1-5-1980ರ ಮೂಲಕ ಬಿಟ್ಟುಬಿಡಲಾಗಿದೆ.
- ಅಧಿಸೂಚನೆ ಸಂಖ್ಯೆ ಡಿಪಿಎಆರ್ 16 ಎಸ್ಆರ್ಆರ್ 85 ದಿನಾಂಕ 31-12-1985 ರಾಜ್ಯಪತ್ರ 16-1-1986ರ ಮೂಲಕ ಸೇರಿಸಲಾಗಿದೆ. ಪರಂತು, ಅಂಥ ವ್ಯವಹರಣೆಗಳಲ್ಲಿ ಅಂಥ ಯಾವುದೇ ಮಧ್ಯಕಾಲೀನ ಆದೇಶವನ್ನು ಹೊರಡಿಸಿಲ್ಲದಿರುವಲ್ಲಿ, ನೇಮಕ ಪ್ರಾಧಿಕಾರವು, ಪ್ರೊಬೇಷನರ್ನು ನಿರ್ದಿಷ್ಟಪಡಿಸಿದ ಅಥವಾ ವಿಸ್ತರಿಸಿದ ಪ್ರೊಬೇಷನ್ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿರುವನೆಂದು ಅದಕ್ಕೆ ಮನದಟ್ಟಾದರೆ, ಅಂಥ ವ್ಯವಹರಣೆಗಳಲ್ಲಿನ ಅಂತಿಮ ಆದೇಶಕ್ಕೆ ಒಳಪಟ್ಟು, ಪ್ರೊಬೇಷನರ್ನು ತನ್ನ ಪ್ರೊಬೇಷನ್ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿರುವನೆಂದು ಆದೇಶದ ಮೂಲಕ ಘೋಷಿಸಬಹುದು.