(1) ಪ್ರಾರಂಭಿಕ ಅಥವಾ ಉನ್ನತ ಹಂತದ ಕಾಲಿಕ ವೇತನ ಶ್ರೇಣಿಗೆ 1 ನೇಮಕಗೊಂಡ ಪ್ರೊಬೇಷನರ್ನು, ಗೊತ್ತುಪಡಿಸಿದ 1 [xxx] ಪ್ರೊಬೇಷನ್ ಅವಧಿಯಲ್ಲಿ ಬಾಕಿ ಉಳಿದಿರುವ ವೇತನ ಬಡ್ತಿಯನ್ನು ಪಡೆಯಬಹುದು. ಆದಾಗ್ಯೂ, ಅವನು ತನ್ನ ಪ್ರೊಬೇಷನ್ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿರುವುದಾಗಿ ಘೋಷಿಸಿದ ಹೊರತು ಮತ್ತು ಅಲ್ಲಿಯವರೆಗೆ ಅಂಥ ಅವಧಿಯು ಸಮಾಪ್ತಿಯಾದ ತರುವಾಯ ಯಾವುವೇ ವೇತನ ಬಡ್ತಿಗಳನ್ನು ಅವನು ಪಡೆಯತಕ್ಕದ್ದಲ್ಲ.
(2) ಪ್ರೊಬೇಷನರ್ನು ತನ್ನ ಪ್ರೊಬೇಷನ್ ಅವಧಿಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿದ್ದಾನೆಂದು ಘೋಷಿಸಿರುವಾಗ ಅಂಥ ಆದೇಶವು ಜಾರಿಗೆ ಬಂದ ದಿನಾಂಕದಿಂದ, ಪ್ರೊಬೇಷನ್ ಮೇಲೆ ಅವನನ್ನು ನೇಮಕ ಮಾಡಿದ ದಿನಾಂಕದಿಂದ ಅವನ ಇಡೀ ಸೇವೆಗಾಗಿ ವೇತನ ಬಡ್ತಿಗಳನ್ನು ಪಡೆಯಲು ಅವನಿಗೆ ಅನುಮತಿಸಿದ್ದರೆ ಅವನು ಪಡೆಯಬಹುದಾಗಿದ್ದಂಥ ವೇತನವನ್ನು ಅವನು ಪಡೆಯತಕ್ಕದ್ದು.