ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಕೆಳಕಂಡಂತೆ ಹೆಚ್ಚುವರಿ ಅಧಿಕಾರಗಳನ್ನು ಚಲಾಯಿಸುವುದು ಮತ್ತು ಹೆಚ್ಚುವರಿ ಕಾರ್ಯಗಳು ಮತ್ತು ಕರ್ತವ್ಯಗಳನ್ನು ನಿರ್ವಹಿಸುವುದು. ಯಾವುವೆಂದರೆ:-
(1) ಪ್ರಾಧಿಕಾರದ ಪ್ರತಿ ಸಭೆಯಲ್ಲಿಯು ಭಾಗವಹಿಸುವುದು.
(2) ಪ್ರತಿ ಸಭೆಯ ನಡವಳಿಯನ್ನು ದಾಖಲಿಸುವುದು ಅಥವಾ ದಾಖಲಿಸಲು ಕ್ರಮಕೈಗೊಳ್ಳುವುದು.
(3) ಪ್ರಾಧಿಕಾರದ ಮುಂದೆ ಮಂಡಿಸುವ ಎಲ್ಲಾ ವಿಷಯಗಳು ಮತ್ತು ಪ್ರಶ್ನೆಗಳು ಅಥವಾ ನಿರ್ಣಯಗಳ ಕುರಿತು ಅವರ ಅಭಿಪ್ರಾಯ ಅಥವಾ ಷರಾಗಳನ್ನು ದಾಖಲಿಸುವುದು.
(4) ಲೆಕ್ಕಪರಿಶೋಧಕರ ಆಕ್ಷೇಪಣೆಗಳಿಗೆ ಪಾಲನಾ ವರದಿಯನ್ನು ಕಳುಹಿಸುವುದು.
(5) ನಮೂನೆ-1 ರಲ್ಲಿ ಕೆರೆಗಳ ಪಟ್ಟಿಯನ್ನು ದಾಖಲಿಸಿ, ನಿರ್ವಹಿಸುವುದು ಮತ್ತು
(6) ಯಾವುದೇ ನ್ಯಾಯಾಲಯದ ಪ್ರಕರಣಗಳು ಬಾಕಿ ಇದ್ದಲ್ಲಿ ಅಂತಹ ಎಲ್ಲಾ ಕೆರೆಗಳ ವಿವರಗಳನ್ನು ಅಂದರೆ ಕೆರೆಗಳ ವಿಸ್ತೀರ್ಣ, ಸ್ಥಳ, ಕೆರೆಗಳ ಉಸ್ತುವಾರಿ ಹೊಂದಿರುವ ಅಧಿಕಾರಿ / ಸಿಬ್ಬಂದಿ ಇತ್ಯಾದಿ ವಿವರಗಳನ್ನು ಪ್ರಾಧಿಕಾರವು ನಿರ್ವಹಿಸುವ ಅಂತರ್ಜಾಲ ತಾಣದಲ್ಲಿ ದಾಖಲಿಸುವುದು.