(1) ಪ್ರಾಧಿಕಾರದಲ್ಲಿನ ಹುದ್ದೆಗಳಿಗೆ ರಾಜ್ಯ ಸರ್ಕಾರದ ಮಾಲಿಕತ್ವ ಹಾಗೂ ನಿಯಂತ್ರಣದಲ್ಲಿರುವ ರಾಜ್ಯದ ಯಾವುದೇ ನಾಗರಿಕ ಸೇವೆ / ವಿಶ್ವವಿದ್ಯಾಲಯಗಳು / ಸ್ಥಳೀಯ ಪ್ರಾಧಿಕಾರಗಳು / ಸಾರ್ವಜನಿಕ ಉದ್ದಿಮೆಗಳು / ಶಾಸನಬದ್ಧ ಮಂಡಳಿ / ನಿಗಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾನ ವೇತನ ಶ್ರೇಣಿ ಮತ್ತು ದರ್ಜೆ ಹೊಂದಿರುವ ಅಧಿಕಾರಿಗಳು / ಸಿಬ್ಬಂದಿಗಳನ್ನು ನಿಯೋಜನೆ ಮೇಲೆ ನೇಮಿಸುವುದು.
(2) ಕರ್ನಾಟಕ ನಾಗರಿಕ ಸೇವಾ ನಿಯಮಗಳು (ಸಾಮಾನ್ಯ ನೇಮಕಾತಿ) ನಿಯಮ, 1977 ಕಾಲ ಕಾಲಕ್ಕೆ ಹೊರಡಿಸುವ ಸರ್ಕಾರದ ಆದೇಶಗಳಂತೆ ನಿಯೋಜನೆಯ ಮೇಲೆ ನೇಮಕಾತಿ ಮಾಡುವುದು.
(3) ಸೇವಾ ಷರತ್ತುಗಳು ನಿಯೋಜನೆಗೆ ಅನ್ವಯಿಸುವ ಕರ್ನಾಟಕ ನಾಗರಿಕ ಸೇವಾ ನಿಯಮಗಳಂತೆ ಇರುತ್ತದೆ.
(4) ಪ್ರಾಧಿಕಾರವು ಮಾಡುವ ಯಾವುದೇ ಮಾರ್ಪಾಡುಗಳು ಮತ್ತು ಅನುಸೂಚಿಯಲ್ಲಿ ತಿಳಿಸಿರುವಂತೆ ಬದಲಾವಣೆಗಳೊಂದಿಗೆ ಕರ್ನಾಟಕ ನಾಗರಿಕ ಸೇವೆ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ರಂತೆ ಶಿಸ್ತು ಪ್ರಕರಣಗಳು ನಿರ್ವಹಿಸುವುದು.