ಈ ನಿಯಮಗಳಲ್ಲಿ, ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,-
(ಎ) ‘‘ನಿರಂತರ ಸೇವೆ'' ಎಂದರೆ ಕೆಲಸಕ್ಕೆ ತಕ್ಕ ಹಣ ಪಡೆಯುವ ನೌಕರನು ತಾನು ನೇಮಕವಾದಂದಿನಿಂದ ಯಾವುದೇ ಭಂಗವಿಲ್ಲದೆ ಮುಂದುವರೆದಂಥ ಸೇವೆ. ಸಕ್ಷಮ ಪ್ರಾಧಿಕಾರವು ಕ್ರಮಬದ್ಧವಾಗಿ ಮಂಜೂರು ಮಾಡಿದ ರಜೆಯು ಮಾತ್ರ ನಿರಂತರ ಸೇವೆಯಲ್ಲಿ ಸೇರುತ್ತದೆ;
(ಬಿ) ‘‘ನೇಮಕಾತಿ ಸಮಿತಿ'' ಎಂದರೆ 3ನೇ ನಿಯಮದ (3)ನೇ ಉಪನಿಯಮದಲ್ಲಿ ಉಲ್ಲೇಖಿಸಿದ ನೇಮಕಾತಿ ಸಮಿತಿ;
(ಸಿ) ‘‘ಕೆಲಸಕ್ಕೆ ತಕ್ಕ ಹಣ ಪಡೆಯುವ ಸಿಬ್ಬಂದಿ'' ಎಂದರೆ ಸಾಮಾನ್ಯ ಉಸ್ತುವಾರಿಯಿಂದ ವಿಭಿನ್ನವಾಗಿರುವ ಕಾಮಗಾರಿಯ ಅಥವಾ ನಿರ್ದಿಷ್ಟ ಯೋಜನೆಯ ಅಂಥ ಕಾಮಗಾರಿಗಳ ವಾಸ್ತವಿಕ ನಿರ್ವಹಣೆಯ ಮೇಲೆ ಅಥವಾ ಅಂಥ ಕಾಮಗಾರಿಗಳು ಅಥವಾ ಉಪಕಾಮಗಾರಿಗಳಿಗೆ ಸಂಬಂಧಿಸಿದಂತೆ, ಮಂಡಲಿಯ ಕೆಲಸ, ಸಾಮಗ್ರಿ ಮತ್ತು ಯಂತ್ರೋಪಕರಣಗಳ ಅಧೀನ ಉಸ್ತುವಾರಿಯ ಮೇಲೆ ನಿಯೋಜಿಸಿಕೊಂಡಂಥ ಸಿಬ್ಬಂದಿ.