ಈ ನಿಯಮಗಳ ಅಡಿಯಲ್ಲಿ ಲೀನಗೊಂಡ ವ್ಯಕ್ತಿಯ ರಜೆ ಮತ್ತು ನಿವೃತ್ತಿ ವೇತನವನ್ನು ನಿರ್ಧರಿಸುವುದಕ್ಕಾಗಿ ಕೆಲಸಕ್ಕೆ ತಕ್ಕ ಹಣ ಪಡೆಯುವ ನೌಕರನಾಗಿ ಸಲ್ಲಿಸಿದ ಸೇವೆಯನ್ನು (ಕರ್ನಾಟಕ ಸಿವಿಲ್ ಸೇವಾ ನಿಯಮಗಳ ನಿಯಮ 248 ಎ ಮೂಲಕ ಅನುಮತಿಸಿರುವಷ್ಟರ ಮಟ್ಟಿಗೆ) ಪರಿಗಣಿಸತಕ್ಕುದ್ದು. ಆದರೆ, ಜ್ಯೇಷ್ಠತೆಯ ಉದ್ದೇಶಕ್ಕಾಗಿ ಈ ನಿಯಮಗಳ ಅಡಿಯಲ್ಲಿ ಲೀನಗೊಳಿಸಿದ ದಿನಾಂಕದಿಂದ ಸಲ್ಲಿಸಿದ ಸೇವೆಯನ್ನು ಮಾತ್ರ ಪರಿಗಣನೆಗೆ ತೆಗೆದುಕೊಳ್ಳತಕ್ಕದ್ದು.
Loading…