ಕರ್ನಾಟಕ ಸಿವಿಲ್ ಸೇವಾ ನಿಯಮಗಳು, ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು, 1966 ರಲ್ಲಿ ಒಳಗೊಂಡ ಉಪಬಂಧ ಹಾಗೂ ಕರ್ನಾಟಕ ಗೃಹ ನಿರ್ಮಾಣ ಮಂಡಲಿಯ ಇತರ ನೌಕರರಿಗೆ ಅನ್ವಯವಾಗುವ ಭಾರತ ಸಂವಿಧಾನದ 309ನೇ ಅನುಚ್ಫೇದದ ಉಪಬಂಧದ ಅಡಿಯಲ್ಲಿ ರಚಿಸಿದ ಗೃಹ ನಿರ್ಮಾಣ ಮಂಡಲಿ ಸೇವಾ ಷರತ್ತುಗಳನ್ನು ವಿನಿಯಮಿಸುವ ಎಲ್ಲಾ ಇತರ ನಿಯಮಗಳು, ಈ ನಿಯಮಗಳ ಉಪಬಂಧಗಳಿಗೆ ಅಸಂಗತವಾಗದಿರುವಷ್ಟರ ಮಟ್ಟಿಗೆ ಈ ನಿಯಮಗಳ ಮೇರೆಗೆ ಲೀನಗೊಂಡ ವ್ಯಕ್ತಿಗೆ ಅನ್ವಯವಾಗತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ. ವೀರಭದ್ರಯ್ಯ,
ವಸತಿ ಮತ್ತು ನಗರಾಭಿವೃದ್ಧಿ ಇಲಾಖೆ (ವಸತಿ).